
ಥಮ್ಸ್ ಅಪ್ ಎಕ್ಸ್-ಫೋರ್ಸ್, ಭಾರತದ ಜೀರೊ-ಶುಗರ್ ಮಾರುಕಟ್ಟೆಯ ಹೊಸ ನಾಯಕ
ವೀಡಿಯೊಗೆ ಲಿಂಕ್: https://youtu.be/PTb_kFeKJd0
ರಾಷ್ಟ್ರೀಯ, ಜೂನ್ 25, 2025: ಭಾರತದ ಐಕಾನಿಕ್, ಶತಕೋಟಿ ಡಾಲರ್ ಮೌಲ್ಯದ ಸ್ವದೇಶಿ ಬ್ರ್ಯಾಂಡ್, ಥಮ್ಸ್ ಅಪ್ ಸಂಸ್ಥೆಯಿಂದ ಇತ್ತೀಚೆಗಷ್ಟೇ ಬಂದ ಥಮ್ಸ್ ಅಪ್ ಎಕ್ಸ್-ಫೋರ್ಸ್, ಶೂನ್ಯ-ಸಕ್ಕರೆ ಪಾನೀಯಗಳ ವರ್ಗದಲ್ಲಿ ಕಲ್ಲೋಲ ಸೃಷ್ಟಿಸಿದೆ. ಯುವ ಗ್ರಾಹಕರಿಗೆ ಶೂನ್ಯ-ಸಕ್ಕರೆ ಪಾನೀಯದ ಅದ್ಭುತ ಅನುಭವವನ್ನು ನೀಡುತ್ತಿದೆ. ಅಧಿಕೃತ ಬಿಡುಗಡೆಗೂ ಮುನ್ನ 100,000+ ಪ್ರೀ-ಬುಕಿಂಗ್ ಗಳೊಂದಿಗೆ ಥಮ್ಸ್ ಅಪ್ ಎಕ್ಸ್-ಫೋರ್ಸ್ ಬಿಡುಗಡೆಗೂ ಮುನ್ನವೇ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿತ್ತು.
ಥಮ್ಸ್ ಅಪ್ ಬಂದು 50 ವರ್ಷಗಳು ಕಳೆದಿವೆ. ಈಗಲೂ ಅದು ನವೀನ ಬಿಡುಗಡೆಗಳು ಮತ್ತು ಮಾರ್ಕೆಟಿಂಗ್ ತಂತ್ರಗಳೊಂದಿಗೆ ತನ್ನ ವರ್ಗದಲ್ಲಿ ಹೊಸತನವನ್ನು ಸೃಷ್ಟಿಸುವುದನ್ನು ಮುಂದುವರೆಸಿದೆ. ಥಮ್ಸ್ ಅಪ್ ಎಕ್ಸ್-ಫೋರ್ಸ್ ಇರುವುದು: ಶಿಸ್ತಿನಿಂದ ಬದುಕುವವರಿಗಾಗಿ, ಉತ್ತಮ ಹಾದಿಯಲ್ಲಿ ಸಾಗುವವರಿಗಾಗಿ, ತಾವು ಯಾವಾಗಲೂ ಅತ್ಯುತ್ತಮವಾಗಿರಬೇಕೆನ್ನುವ ಮನಸ್ಥಿತಿಯನ್ನು ಹೊಂದಿರುವವರಿಗಾಗಿ, ಯಾವಾಗಲೂ ತಮ್ಮ ಸಾಮರ್ಥ್ಯದ ಎಲ್ಲೆಗಳನ್ನು ಮೀರಲು ಶ್ರಮಿಸುವವರಿಗಾಗಿ. ಅನನ್ಯ, ದಿಟ್ಟ ಅಭಿರುಚಿ ಮತ್ತು ಐಕಾನಿಕ್ ನೊರೆಗಳಿಂದಾಗಿ ಥಮ್ಸ್ ಅಪ್ ಎಕ್ಸ್-ಫೋರ್ಸ್ “ಆಲ್ ಥಂಡರ್” ಬ್ರ್ಯಾಂಡ್ನ ಸಿಗ್ನೇಚರ್ ಸ್ಪಿರಿಟ್ ನ ಸಾಕಾರವಾಗಿದೆ. ಗ್ರಾಹಕರಿಗೆ ಯಾವುದೇ ಸಕ್ಕರೆ ಅಥವಾ ಕೆಲರಿಗಳಿಲ್ಲದೆಯೇ ಥಮ್ಸ್ ಅಪ್ ನ ರುಚಿ, ಅನುಭವ ನೀಡುತ್ತದೆ.
ಆದರೆ ಎಕ್ಸ್-ಫೋರ್ಸ್ ನ ವಿಶೇಷತೆ ಕೇವಲ ಕ್ಯಾನ್ನೊಳಗಿರುವ ವಸ್ತುವಿಗೆ ಮಾತ್ರ ಸೀಮಿತವಾಗಿಲ್ಲ. ನಯವಾದ, ಆಧುನಿಕ ಮತ್ತು ಥಟ್ಟನೆ ಗುರುತಿಸಬಹುದಾದ ಅದರ ಹರಿತವಾದ, ಯುವ ವಿನ್ಯಾಸ ಕೂಡ ವಿಶೇಷವಾಗಿದೆ. ಅದರ ಪ್ಯಾಕೇಜಿಂಗ್ ಸಹ, ಥಮ್ಸ್ ಅಪ್ ನ ಸಾಹಸೀ ಪ್ರವೃತ್ತಿಯ ಸಾರವನ್ನು ತೋರುತ್ತದೆ; ಥಮ್ಸ್ ಅಪ್ ಎಕ್ಸ್-ಫೋರ್ಸ್ ಅನ್ನು ಕ್ಲಾಸಿಕ್ ಥಮ್ಸ್ ಅಪ್ ನ ಪ್ರಬಲ ಆತ್ಮವಿಶ್ವಾಸದ ಸಂಕೇತವಾದ “ಥಂಡರ್ ಇನ್ ಎ ಕ್ಯಾನ್” ಆಗಿಸುತ್ತದೆ. ಜೀವನವನ್ನು ಸಂಪೂರ್ಣವಾಗಿ ಆನಂದಿಸಲು ಬಯಸುವವರಿಗೆ, ಎಂದೂ ರಾಜಿಯಾಗದೆ ಶ್ರೇಷ್ಠವಾದುದನ್ನು ಬಯಸುವವರಿಗೆ ಇದೊಂದು, ಹೇಳಿ ಮಾಡಿಸಿದಂತಹ ಪಾನೀಯ ಎಂಬುದನ್ನು ಎತ್ತಿ ತೋರುತ್ತದೆ.
ಸ್ಪಾರ್ಕ್ಲಿಂಗ್ ಫ್ಲೇವರ್ಸ್, ಕೋಕಾ-ಕೋಲಾ ಇಂಡಿಯಾ ಮತ್ತು ನೈಋತ್ಯ ಏಷ್ಯಾದ ಕೆಟಗರಿ ಮುಖ್ಯಸ್ಥೆ ಸುಮೇಲಿ ಚಟರ್ಜಿ, “ಥಮ್ಸ್ ಅಪ್ ಎಕ್ಸ್-ಫೋರ್ಸ್ ನೊಂದಿಗಿನ ನಮ್ಮ ಮಹತ್ವದ ಸಹಯೋಗ: ಬದಲಾಗುತ್ತಿರುವ ಗ್ರಾಹಕರ ನಡವಳಿಕೆಗಳಿಗೆ ಅದರಲ್ಲೂ ವಿಶೇಷವಾಗಿ, ನಿಂತ ನೀರಾಗದೆ ಅಥವಾ ರಾಜಿ ಮಾಡಿಕೊಳ್ಳದೆ ಇರುವ ಧೈರ್ಯಶಾಲಿ ಯುವಕರನ್ನು ಉದ್ದೇಶಿಸಿದೆ. ಈ ವರ್ಗದವರಿಂದ ಅಸಲಿ ಅನುಭವಗಳಿಗಾಗಿ ಬಹಳ ಬೇಡಿಕೆ ಇದೆ. ನಮ್ಮ ಸ್ವದೇಶಿ ಬ್ರ್ಯಾಂಡ್ನಲ್ಲಿ ನಾವೀನ್ಯತೆ ಸಾಧಿಸುವ ಮೂಲಕ ನಾವು ಥಮ್ಸ್ ಅಪ್ ನ ಪರಂಪರೆಯನ್ನು ವಿಶಾಲಗೊಳಿಸುತ್ತಿದ್ದೇವೆ ಮತ್ತು ವೇಗವಾಗಿ ಬೆಳೆಯುತ್ತಿರುವ ಶೂನ್ಯ-ಸಕ್ಕರೆ ವರ್ಗಕ್ಕೆ ವಿಶ್ವಾಸದಿಂದ ಹೆಜ್ಜೆ ಇಡುತ್ತಿದ್ದೇವೆ. ನಮ್ಮದು ಗ್ರಾಹಕ-ಮೊದಲ ಮನಸ್ಥಿತಿ. ಇಂದಿನ ಪೀಳಿಗೆಯ ವಿಕಸನಗೊಳ್ಳುತ್ತಿರುವ ಜೀವನಶೈಲಿಯ ಆದ್ಯತೆಗಳನ್ನು ಪೂರೈಸುವಂತಹ ಅಸಲಿ ಉತ್ಪನ್ನವನ್ನು ಮಾರುಕಟ್ಟೆ ಮಾಡಲು ನಮಗೆ ಸಂತೋಷವಾಗುತ್ತಿದೆ.”
ಮಾರುಕಟ್ಟೆಗೆ ಪದಾರ್ಪಣೆ ಮಾಡಿದಾಗಿನಿಂದ, ಥಮ್ಸ್ ಅಪ್ ಎಕ್ಸ್-ಫೋರ್ಸ್ ಈಗಾಗಲೇ ಡಯಟ್ & ಲೈಟ್ ಪಾನೀಯ ವಿಭಾಗದಲ್ಲಿ ಭಾರತದ ಬಹುಬೇಡಿಕೆಯ ಪಾನೀಯವಾಗುವತ್ತ ದಾಪುಗಾಲು ಹಾಕುತ್ತಿದೆ. ಈ ಗಮನಾರ್ಹ ಸಾಧನೆ ಬ್ರ್ಯಾಂಡ್ನ, ರಾಜಿ ಇಲ್ಲದೆ ಅಪ್ಪಟವಾದ ಕಡು ಸ್ವಾದವನ್ನು ಬಯಸುವ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯದ ಬಗ್ಗೆ ಒತ್ತಿಹೇಳುತ್ತದೆ.
ಸಾಹಸ ಪ್ರಿಯರೇ: ಒಂದು ಕ್ಯಾನ್ ತೆರೆದು ಶ್ರೇಷ್ಠವಾದ ಅನುಭವವನ್ನು ಹೊಂದಿ. ಇದರಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಸಂಪೂರ್ಣ ಅಪ್ಪಟ.