







ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಂದ ರಿಧಾ ಬೋಟಿಕ್ ಉದ್ಘಾಟನೆ :
ಯಲಹಂಕ : ಯಲಹಂಕ ಉಪನಗರದ ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿ ‘ರಿಧಾ ಬೋಟಿಕ್’ ನೂತನ ಸೀರೆ ಮಳಿಗೆಯನ್ನು ಅಶ್ವಿನಿ ಪುನೀತ್ ರಾಜ್‍ಕುಮಾರ್, ಯಲಹಂಕ ಶಾದಕ ಎಸ್ ಆರ್ ವಿಶ್ವನಾಥ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ರಿಧಾ ಬೋಟಿಕ್ ನ ಮಾಲೀಕರಾಗಿರುವ ರಾಧಿಕಾ ಅವರು ಓರ್ವ ಮಹಿಳೆಯಾಗಿ ವಸ್ತ್ರೋದ್ಯಮದಲ್ಲಿ ಛಾತಿ ಮೂಡಿಸಲು ದಾಪುಗಾಲಿಟ್ಟಿ ರುವುದು ಸಂತೋಷದ ಸಂಗತಿ, ಈ ಉದ್ಯಮದಲ್ಲಿ ಅಭೂತಪೂರ್ವವಾದ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ರಿಧಾ ಬೋಟಿಕ್ ವ್ಯವಸ್ಥಾಪಕ ನಿರ್ದೇಶಕರಾದ ರಾಧಿಕಾ, ಬಿ.ಬಿ.ಉಮೇಶ್,ಸೇರಿದಂತೆ ಹಲವು ಗಣ್ಯರು ಹಾಗೂ ಸಂಸ್ಥೆಯ ಉದ್ಯೋಗಿಗಳಿದ್ದರು.
