









ವಿಜೃಂಭಣೆಯಿಂದ ನೆರವೇರಿದ ಚೌಡೇಶ್ವರಿದೇವಿ ಜಯಂತ್ಯೋತ್ಸವ :
ಯಲಹಂಕ : ಯಲಹಂಕದಲ್ಲಿ ನೆಲೆಸಿರುವು ಶ್ರೀ ಚೌಡೇಶ್ವರಿ ದೇವಿ ಜಯಂತ್ಯೋತ್ಸವವು ಅಸಂಖ್ಯಾತ ಭಕ್ತರ ಪಾಲ್ಗೊಳ್ಳುವಿಕೆಯ ಮೂಲಕ ವಿಜೃಂಭಣೆಯಿಂದ ನೆರವೇರಿತು.
ಜಯಂತ್ಯೋತ್ಸವದ ಪ್ರಯುಕ್ತ ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರ, ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ನೈವೇದ್ಯ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಗಣಪತಿ ಮತ್ತು ಸುಬ್ರಮಣ್ಯ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ಆದಿತ್ಯಾದಿ ನವಗ್ರಹಗಳಿಗೆ ಶಾಂತಿ ಪೂಜೆ ಸೇರಿದಂತೆ ವಿವಿಧ ದೇವತಾ ಕಾರ್ಯಗಳನ್ನು ನೆರವೇರಿಸಲಾಯಿತು.
ಜಯಂತ್ಯೋತ್ಸವದ ಅಂಗವಾಗಿ ಜು.24ರ ಬೆಳಿಗ್ಗೆ 9 ಗಂಟೆಗೆ ವಿವಿಧ ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನದ ನಡುವೆ ಯಲಹಂಕದ ರಾಜ ಬೀದಿ, ಬೆಸ್ತರ ಬೀದಿ, ಕಾಮಾಕ್ಷಮ್ಮ ಲೇಔಟ್ ಮುಖ್ಯ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಚೌಡೇಶ್ವರಿ ಅಮ್ಮನವರ ಉತ್ಸವ, ಮೆರವಣಿಗೆ ಜರುಗಿತು.
ಮದ್ಯಾಹ್ನ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ 6 ಗಂಟೆಗೆ ಶ್ರೀ ಚೌಡೇಶ್ವರಿ ಸೇವಾ ಸಮಿತಿ ಆಶ್ರಯದಲ್ಲಿ ಮನರಂಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಹತ್ವದ ಈ ದೈವ ಕಾರ್ಯದ ದಿವ್ಯ ಸಾನಿದ್ಯವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ತಪಸೀಹಳ್ಳಿಯ ಪುಷ್ಪಾಂಡಜ ಮಹರ್ಷಿ ಆಶ್ರಯದ ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮಿಗಳು ವಹಿಸಿದ್ದರು. ಶಾಸಕ ಎಸ್.ಆರ್.ವಿಶ್ವನಾಥ್ ಅವರು ಉತ್ಸವದಲ್ಲಿ ಪಾಲ್ಗೊಂಡು ಚೌಡೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾದರು.
ಚೌಡೇಶ್ವರಿ ಅಮ್ಮನವರ ಜಯಂತ್ಯೋತ್ಸವದ ಅಂಗವಾಗಿ ಉಚಿತ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಚೌಡೇಶ್ವರಿ ಅಮ್ಮನವರ ಉತ್ಸವದ ಈ ಶುಭ ಸಮಾರಂಭದಲ್ಲಿ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷ ಎಂ.ರಾಮಚಂದ್ರಪ್ಪ, ಕಾರ್ಯಾಧ್ಯಕ್ಷ ಆರ್.ನಾರಾಯಣ, ಉಪಾಧ್ಯಕ್ಷ ಎ.ಎಸ್.ರಾಮದಾಸ್, ಕಾರ್ಯದರ್ಶಿ ಆರ್.ಮಲ್ಲಿ ಕಾರ್ಜುನಪ್ಪ, ಖಜಾಂಚಿ ಜಿ.ಈಶ್ವರಪ್ಪ, ಸಹ ಕಾರ್ಯದರ್ಶಿ ಬಿ.ವೆಂಕಟರಮಣ (ಬಿ.ಇ.ಎಲ್.), ಟ್ರಸ್ಟಿಗಳಾದ ಜಿ.ಮಲ್ಲಿಕಾರ್ಜುನಪ್ಪ, ಆರ್.ವಿ.ವೆಂಕಟರಮಣ, ಜಿ.ಮದನ್ ಮೋಹನ್, ಎಸ್. ರಾಮಕೃಷ್ಣ, ಬಿ.ಕೇಶವ, ತೊಗಟ ವೀರ ಕ್ಷತ್ರಿಯ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸಲು, ಕಾರ್ಯಾಧ್ಯಕ್ಷ ಎ.ಎಸ್.ರಾಜ, ಕಾರ್ಯದರ್ಶಿ ಬಿ.ಸಿ.ರಾಮ ಚಂದ್ರಯ್ಯ, ಖಜಾಂಚಿ ಸಿ.ಚಿನ್ನರೆಡ್ಡಪ್ಪ, ಸಹ ಖಜಾಂಚಿ ಆರ್.ವೆಂಕಟರಮಣ ಹಾಗೂ ಸಂಘದ ಎಲ್ಲಾ ಸದಸ್ಯರು, ಶ್ರೀ ಚೌಡೇಶ್ವರಿ ಸೇವಾ ಸಮಿತಿಯ ಪದಾಧಿಕಾರಿಗಳಾದ ಎಂ.ಸಿ. ಸೋಮಶೇಖರ್, ಆರ್.ಜಿ. ರವಿ ಕುಮಾರ್, ಎನ್.ಎಸ್.ಲಕ್ಷ್ಮೀ ನಾರಾಯಣ, ಎಂ.ವಿ.ರಂಗರಾಜು, ಸಿ.ಆರ್. ಮಂಜುನಾಥ್, ಎನ್.ವಿ. ನಾರಾಯಣಸ್ವಾಮಿ, ಆರ್.ವಿ. ಹರಿಕೃಷ್ಣ, ಎನ್.ಜಿ.ರಮೇಶ್, ಪಿ.ವಿ.ಶಿವಕುಮಾರ್ ಹಾಗೂ ಸಂಘದ ಎಲ್ಲಾ ಸದಸ್ಯರಿದ್ದು, ಚೌಡೇಶ್ವರಿ ಅಮ್ಮನವರ ಜಯಂತ್ಯೋತ್ಸವ ವಿಜೃಂಭಣೆ ಯಿಂದ ನೆರವೇರಲು ಸಹಕಾರ ನೀಡಿದರು.