





‘ಗುಣಿ ಅಗ್ರಹಾರ ಹಾಲು ಉತ್ಪಾದಕರ ಸಹಕಾರ ಸಂಘ’ದ ವತಿಯಿಂದ ಬಮೂಲ್ ನಿರ್ದೇಶಕ ಸತೀಶ್ ಕಡತನಮಲೆ ಅವರಿಗೆ ಸನ್ಮಾನ :
ಯಲಹಂಕ : ಯಲಹಂಕ ಕ್ಷೇತ್ರದ ‘ಗುಣಿ ಅಗ್ರಹಾರ ಹಾಲು ಉತ್ಪಾದಕರ ಸಹಕಾರ ಸಂಘ’ದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ(ಬಮೂಲ್)ದ ನಿರ್ದೇಶಕರಾದ ಸತೀಶ್ ಕಡತ ಮಲೆ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ಗ್ರಾಮದ ಎಲ್ಲಾ ಹೈನು ಉತ್ಪಾದಕ ರೈತರಿಗೆ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಅವರು ಉಚಿತ ಹಾಲಿನ ಕ್ಯಾನ್ ಗಳನ್ನು ವಿತರಿಸಿದರು ಮತ್ತು ಮರಣ ಹೊಂದಿದ್ದ 69 ವರ್ಷ ಮೇಲ್ಪಟ್ಟ ಸಹಕಾರ ಸಂಘದ ಸದಸ್ಯರ ಕುಟುಂಬಸ್ತರಿಗೆ 25 ಸಾವಿರ ರು.ಗಳ ಪರಿಹಾರದ ಚೆಕ್ ಮತ್ತು ಮರಣ ಹೊಂದಿದ ಮಿಶ್ರತಳಿ ಪಡ್ಡೆ ಹಸುಗಳಿಗೆ 10 ಸಾವಿರ ರು.ಗಳ ಪರಿಹಾರ ಧನದ ಚೆಕ್ ವಿತರಿಸಿದರು.
ನಂತರ ಮಾತನಾಡಿದ ಅವರು ‘ಹಾಲು ಉತ್ಪಾದಕರು ಹೆಚ್ಚಿನ ಹಾಲು ಉತ್ಪಾದನೆಯ ಜೊತೆಗೆ ಹಾಲಿನ ಗುಣಮಟ್ಟಕ್ಕೂ ಸಹ ಆದ್ಯತೆ ನೀಡಬೇಕು. ಬೆಂಗಳೂರು ಹಾಲು ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಸಿಗುವ ಸೌಲಭ್ಯಗಳನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಸಲು ಸಿದ್ಧನಿದ್ದೇನೆ, ಹಾಲು ಉತ್ಪಾದಕರು ಇದರ ಸದುಪಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ನಿಸ್ಸಂದೇಹವಾಗಿ ಮುಂದೆ ಬರಬೇಕು, ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ಹಾಲು ಒಕ್ಕೂಟದ ಮಾಜಿ ಅಧ್ಯಕ್ಷರಾದ ದಿಬ್ಬೂರು ಜಯಣ್ಣ, ಎಪಿಎಂಸಿ ಮಾಜಿ ನಿರ್ದೇಶಕರಾದ ಎಸ್.ಎನ್.ರಾಜಣ್ಣ, ಬೆಂಗಳೂರು ಹಾಲು ಒಕ್ಕೂಟದ ಮಾಜಿ ನಿರ್ದೇಶಕರಾದ ಮಾದಪ್ಪನಹಳ್ಳಿ ವಿಜಯಕುಮಾರ್, ಗುಣಿ ಅಗ್ರಹಾರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ರಾಮಾಂಜನೇಯ(ರಾಮಣ್ಣ), ಉಪಾಧ್ಯಕ್ಷರಾದ ರೇಣುಕಾ, ಕಾರ್ಯದರ್ಶಿ ಚೇತನ್ ಕುಮಾರ್ ಗ್ರಾಮ ಪಂಚಾಯತಿಯ ಸದಸ್ಯರಾದ ರತ್ನಮ್ಮ ರಾಮಣ್ಣ, ರಾಮನಾಥ್, ಗುಣಿ ಅಗ್ರಹಾರ ಗ್ರಾಮಸ್ಥರಾದ ಎಲ್. ಮುನಿರಾಜು, ರಾಮಕೃಷ್ಣ, ಬಾಲಕೃಷ್ಣ, ಮುನಿರಾಜು, ಕೇಶವಮೂರ್ತಿ, ಗುಣಿ ಅಗ್ರಹಾರ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು ಸೇರಿದಂತೆ ಗ್ರಾಮಸ್ಥರಿದ್ದರು.