




ದಿಬ್ಬೂರು ಜಯಣ್ಣ-ವಿಜಯಣ್ಣ ಅವರ ಜನ್ಮದಿನ :
ಟಗರು ಉಡುಗೊರೆ ನೀಡಿ ಜನ್ಮದಿನದ ಶುಭ ಹಾರೈಸಿದ ಅಭಿಮಾನಿಗಳು :
ಯಲಹಂಕ : ಯಲಹಂಕ ಕ್ಷೇತ್ರ ಬಿಜೆಪಿ ಹಿರಿಯ ಮುಖಂಡರು, ಬಮೂಲ್ ಮತ್ತು ದೊಡ್ಡಬಳ್ಳಾಪುರ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ದಿಬ್ಬೂರು ಜಯಣ್ಣ ಮತ್ತು ರಾಷ್ಟ್ರೀಯ ಕಿಸಾನ್ ಸಂಘಟನೆಯ ರಾಜ್ಯಾಧ್ಯಕ್ಷ ದಿಬ್ಬೂರು ವಿಜಯಣ್ಣ ಅವರ ಜನ್ಮದಿನದ ಪ್ರಯುಕ್ತ ಜಯಣ್ಣ ಅವರ ಅಭಿಮಾನಿ, ಬಿಜೆಪಿ ಯುವ ಮುಖಂಡ ನವೀನ್(ತಂಬಿ) ಹಾಗೂ ಸ್ನೇಹಿತರು ಟಗರು ಉಡುಗೊರೆ ನೀಡಿ, ಜನ್ಮದಿನದ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಶ್ವನಾಥಪುರ ಮಂಜುನಾಥ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಸ್.ಜಿ.ನರಸಿಂಹಮೂರ್ತಿ (ಎಸ್.ಟಿ.ಡಿ.ಮೂರ್ತಿ), ಕಿರಣ್, ಹೆಸರಘಟ್ಟ ಹೋಬಳಿ ಬಿಜೆಪಿ ಅಧ್ಯಕ್ಷ ವಸಂತ್ ಅರಕೆರೆ, ಪ್ರಧಾನ ಕಾರ್ಯದರ್ಶಿ ಎಸ್.ಜಿ.ಪ್ರಶಾಂತ್ ರೆಡ್ಡಿ, ಬಿಜೆಪಿ ಯುವ ಮುಖಂಡರಾದ ಸಾದೇನಹಳ್ಳಿ ಪ್ರಕಾಶ್ ಗೌಡ, ವಿನೋದ್ ರೆಡ್ಡಿ, ರಾಜು ಸೇರಿದಂತೆ ನವೀನ್(ತಂಬಿ) ಅವರ ಸ್ನೇಹಿತರಿದ್ದರು.
