ವಿವಿಧ ಸೇವಾ ಕಾರ್ಯಗಳ ‌ಮೂಲಕ ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ಜೆ.ಶ್ರೀನಿವಾಸ್ ಜನ್ಮದಿನಾಚರಣೆ :

ಬ್ಯಾಟರಾಯನಪುರ :
ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ , ಸ್ವಗ್ರಾಮ ಕೋಡಗಲಹಟ್ಟಿಯ ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಹಂಚಿಕೆ , ಗೋಶಾಲೆಯಲ್ಲಿ ಗೋವುಗಳಿಗೆ ಮೇವು ಮತ್ತು ಬೂಸಾ , ಫೀಡು ವಿತರಣೆ ,ಅಂಧಮಕ್ಕಳಿಗೆ ಭೋಜನ ವ್ಯವಸ್ಥೆ,
ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಗಳ ವಿತರಣೆ, ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಜೆ.ಶ್ರೀನಿವಾಸ್ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಣೆ ಮಾಡಲಾಯಿತು.

ಇದೇ ವೇಳೆ ಮಾತನಾಡಿದ ಅವರು ‘ಜನ್ಮದಿನವೆಂಬುದು ಪ್ರತಿಯೊಬ್ಬರ ಬದುಕಿನ ಸಂಭ್ರಮದ ದಿನ ಅದನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸಿ ಕೊಳ್ಳಬೇಕು. ಜಯ ಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕರಾದ ಗುಣರಂಜನ್ ಶೆಟ್ಟಿಯವರು ನನಗೆ ರಾಜ್ಯಾಧ್ಯಕ್ಷ ಪದವಿ ನೀಡುವ ಮೂಲಕ ಜನ ಸೇವೆಯ ಸದವಕಾಶ ಕಲ್ಪಿಸಿಕೊಟ್ಟಿದ್ದು, ಅವರೊಟ್ಟಿಗೆ ಕನ್ನಡ ನಾಡು, ನುಡಿಯ ರಕ್ಷಣೆ, ಪರಿಸರ ಸಂರಕ್ಷಣೆ, ಒಂದಷ್ಟು ಬಡವರ ಸೇವೆಯಂತಹ ಸೇವಾ ಕಾರ್ಯಗಳನ್ನು ಕಳೆದ ಹಲವು ವರ್ಷಗಳಿಂದ ಕೈಗೊಳ್ಳುತ್ತಾ ಬಂದಿದ್ದು, ವೇದಿಕೆಯ ಸಂಸ್ಥಾಪಕ‌ ಅಧ್ಯಕ್ಷರಾದ ಗುಣರಂಜನ್ ಶೆಟ್ಟಿಯವರು ನಮ್ಮ ಸೇವಾ ಕಾರ್ಯಗಳಿಗೆ ಅಗತ್ಯ ಸಹಕಾರ ನೀಡುವ ಮೂಲಕ ಬೆನ್ನೆಲುಬಾಗಿ ಪ್ರೋತ್ಸಾಹಿಸುತ್ತಿರುವುದು ಸಂತೋಷದ ಸಂಗತಿ. ಗುಣರಂಜನ್ ಶೆಟ್ಟಿಯವರು ನಮಗೆ ಮತ್ತು ನಮ್ಮ ವೇದಿಕೆಗೆ ಒಂದು ದಿವ್ಯಶಕ್ತಿ ಇದ್ದಂತೆ, ಅವರ ಮಾರ್ಗದರ್ಶನದಲ್ಲಿ ಕನ್ನಡ ನಾಡು, ನುಡಿಯ ಸಂರಕ್ಷಣೆಯ ಜೊತೆಗೆ ಪರಿಸರ ಸಂರಕ್ಷಣೆಯ ಮಹತ್ವದ ಕಾರ್ಯಗಳನ್ನು ಮುಂದುವರೆಸಿಕೊಂಡು ಮುಂದೆ ಸಾಗುತ್ತೇವೆ. ಇಂದೂ ಸಹ ನನ್ನ ಜನ್ಮದಿನಕ್ಕೆ ಗುಣರಂಜನ್ ಶೆಟ್ಟಿಯವರು ಸೇರಿದಂತೆ ಜಯ ಕರ್ನಾಟಕ ಜನಪರ ವೇದಿಕೆಯ ಅಸಂಖ್ಯಾತ ಮುಖಂಡರು, ಪದಾಧಿಕಾರಿಗಳು, ವಿವಿಧ ಪಕ್ಷಗಳ ಮುಖಂಡರು ಆಗಮಿಸಿ ಶುಭ ಹಾರೈಸಿರುವುದು ಸಂತೋಷ ಉಂಟು ಮಾಡಿದೆ, ಜನ್ಮದಿನಕ್ಕೆ ಆಗಮಿಸಿ ಶುಭ ಹಾರೈಸಿರುವ ಎಲ್ಲರಿಗೂ ಅನಂತ ಧನ್ಯವಾದಗಳನ್ನು ತಿಳಿಸಲಿಚ್ಛಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿ, ರಾಜ್ಯ ಕಾನೂನು ಘಟಕ ಅಧ್ಯಕ್ಷ ಮಂಜುನಾಥ್, ರಾಜ್ಯ ಮಹಿಳಾ ಘಟಕ ಅಧ್ಯಕ್ಷೆ ಡಾ.ಜಿ.ಎಸ್.ಪುಷ್ಪಲತಾ, ಮಹಿಳಾ ಘಟಕದ ಬೆಂ ಜಿಲ್ಲಾಧ್ಯಕ್ಷೆ ಸುನಂದಾ ರೆಡ್ಡಿ, ಬೆಂ ಜಿಲ್ಲಾಧ್ಯಕ್ಷ ಪಿ.ಲೋಕೇಶ್, ಮುನಿಮಾರಪ್ಪ(MAS) ಸೇರಿದಂತೆ ರಾಜ್ಯ , ಜಿಲ್ಲಾ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು, ವಿವಿದ ಸಂಘಟನೆಗಳ ಮುಖಂಡರು, ವಿವಿದ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *