‘ಪ್ರಥಮ್ ಇಂಟರ್ ನ್ಯಾಷನಲ್ ಶಾಲೆ’ಯಲ್ಲಿ
‘ಪ್ರಥಮ್ ಇಂಟರ್ ನ್ಯಾಷನಲ್ ಶಾಲೆ’ಯಲ್ಲಿ ಅಂತರ್ ಶಾಲಾ ಈಜು ಸ್ಪರ್ಧೆ :
ಹೊಸಕೋಟೆ : ಹೊಸಕೋಟೆ ತಾಲೂಕಿನ ವರ್ತೂರು ಬಳಿಯಿರುವ ಪ್ರತಿಷ್ಠಿತ ವಿದ್ಯಾಸಂಸ್ಥೆ ‘ಪ್ರಥಮ್ ಅಂತರಾಷ್ಟ್ರೀಯ ಶಾಲೆ’ಯಲ್ಲಿ ‘ಅಕ್ವಾ ಹೆಲ್ತ್ ಫೌಂಡೇಶನ್ ಈಜು ಅಕಾಡೆಮಿ’ಯ ಸಹಯೋಗ ದೊಂದಿಗೆ “ಜೆನೆತ್ 2.0” ಶೀರ್ಷಿಕೆಯಲ್ಲಿ ಶನಿವಾರ ಏರ್ಪಡಿಸಿದ್ದ ಅಂತರ ಶಾಲಾ ಈಜು ಸ್ಪರ್ಧೆಯನ್ನು ಲಯನ್ ಜಿ. ಪ್ರಶಾಂತ್ ರಾವ್ ಜಗ್ತಾಪ್ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಸ್ಥರಾದ ಶಂಭು ಹಿರೇಮಠ್, ಪ್ರಾಂಶುಪಾಲರಾದ ಜಯದೇವಿ
ಹಿರೇಮಠ್, ಉಪ ಪ್ರಾಂಶಪಾಲರಾದ ಗೀತಾ ಮೂರ್ತಿ, ಶೈಕ್ಷಣಿಕ ಮುಖ್ಯಸ್ಥರಾದ ಶಾಂತಕುಮಾರ ಪೂಜಾರ್, ಅಕ್ವಾ ಹೆಲ್ತ್ ಫೌಂಡೇಶನ್ ಈಜು ಅಕಾಡೆಮಿಯ ಮುಖ್ಯಸ್ಥರಾದ ಮಧುಮಿತ, ಇಂಗ್ಲಿಷ್ ಪ್ರಾಧ್ಯಾಪಕ ಮೊಹಮ್ಮದ್ ತಾರೀಕ್ ಸೇರಿದಂತೆ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿಗಳಿದ್ದರು.
ಬೆಳಿಗ್ಗೆ 9 ಗಂಟೆಗೆ ಪ್ರಾರಂಭಗೊಂಡ ಈಜು ಸ್ಪರ್ಧೆ ಸಂಜೆ 7ರವರೆಗೂ ನಡೆಯಿತು. ಬಾಲಕ, ಬಾಲಕಿಯರ ವಿಭಾಗದಲ್ಲಿ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸುಮಾರು 62 ವಿವಿಧ ರೀತಿಯ ಈಜು ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. 56 ವೈಯಕ್ತಿಕ ವಿಭಾಗ ಹಾಗೂ 6 ಗುಂಪು ವಿಭಾಗಗಳಲ್ಲಿ ರಾಜ್ಯದ ಹೆಸರಾಂತ ಶಾಲೆಗಳ ಮತ್ತು ಕೆಲವು ಅಕಾಡೆಮಿಗಳ 6 ರಿಂದ 17ರ ವಯಸ್ಸಿನ ಸುಮಾರು 400ಕ್ಕೂ ಹೆಚ್ಚು ಈಜು ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸಿ ವಿಜೇತರಾದ ಈಜು ಪಟುಗಳಿಗೆ ಪದಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಬಾಲಕ ಹಾಗೂ ಬಾಲಕಿಯರ ಪ್ರತಿ ವಿಭಾಗದಲ್ಲಿ ಅತಿ ಹೆಚ್ಚು ಪದಕ ಗಳಿಸಿದ ಈಜುಪಟುವಿಗೆ ಹಾಗೂ ಶಾಲೆಗೆ ಚಾಂಪಿಯನ್ ಶಿಪ್ ಪ್ರಶಸ್ತಿ ನೀಡಲಾಯಿತು. ಪೂರ್ಣ ಕಾರ್ಯಕ್ರಮವನ್ನು ಪ್ರಥಮ್ ಅಂತರಾಷ್ಟ್ರೀಯ ಶಾಲೆಯ ಯೂಟ್ಯೂಬ್ ಜಾಲತಾಣದಲ್ಲಿ ನೇರ ಪ್ರಾತ್ಯಕ್ಷಿಕೆಯಾಗಿ ಬಿತ್ತರಿಸಲಾಯಿತು.
ಅಂತರ್ ಶಾಲಾ ಈಜು ಸ್ಪರ್ಧೆ :