ಶಿಡ್ಲಘಟ್ಟದಲ್ಲಿ ಸಂಭ್ರಮ ಸಡಗರದ ಶ್ರೀ ಕೃಷ್ಣಜನ್ಮಷ್ಟಮಿ

ಶಿಡ್ಲಘಟ್ಟ :- ನಗರದ ಟಿಬಿ ರಸ್ತೆಯಲ್ಲಿ ಸುಮಾರು ವರ್ಷಗಳಿಂದ ನೆಲೆಸಿರುವ ಶ್ರೀ ಕೃಷ್ಣ ದೇವಾಲಯದಲ್ಲಿ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಸಹಸ್ರರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು ದೇವಾಲಯ ಸೇರಿದಂತೆ ರಾಜ ಬೀದಿಗಳಿಗೆ ಮಾಡಿದ್ದ ದೀಪಾಲಂಕಾರ ಕಣ್ಮನ ಸೆಳೆಯಿತು

ಈ ವೇಳೆ ದೇವರ ದರ್ಶನ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದ ಯಾದವ ಸಮುದಾಯದ ಮುಖಂಡ ಉಚ್ಚ ನ್ಯಾಯಲಯದ ವಕೀಲ ಮುನಿರಾಜು ಅವರು ಮಾತನಾಡಿ ಮನುಷ್ಯ ಮನುಷ್ಯನನ್ನು ಪ್ರೀತಿಸುವುದೇ ಧರ್ಮ. ಆದರೆ ಧರ್ಮದ ಹೆಸರಲ್ಲಿ ಮನುಷ್ಯರನ್ನು ದ್ವೇಷಿಸುವುದು ಅಧರ್ಮ. ಮನುಷ್ಯನ ದ್ವೇಷದ ಅಧರ್ಮದ ವಿರುದ್ಧವೇ ಕೃಷ್ಣ ಕೈಯಲ್ಲಿ ಶಸ್ತ್ರ ಹಿಡಿಯದೆ ಹೋರಾಡಿ ಧರ್ಮ ಸ್ಥಾಪನೆ ಮಾಡಿದರು ಈಗಾಗಿ ಸಮಾನತೆಯ ಸಮಾಜ ಸೃಷ್ಟಿ ಆಗಬೇಕಿದೆ ಕೃಷ್ಣನು ವಿಷ್ಣುವಿನ ಎಂಟನೇ ಅವತಾರವೆಂದು ಪರಿಗಣಿಸಲ್ಪಟ್ಟಿದ್ದಾನೆ ಮತ್ತು ಹಿಂದೂ ಧರ್ಮದಲ್ಲಿ ಬಹಳ ಮುಖ್ಯವಾದ ಸ್ಥಾನವನ್ನು ಹೊಂದಿದ್ದಾನೆ ಆತನ ಜನ್ಮದಿನವನ್ನು ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತದೆ. ನಾವು ಕೃಷ್ಣನ ಜೀವನ ಮತ್ತು ಬೋಧನೆಗಳನ್ನು ನೆನಪಿಸಿಕೊಳ್ಳುತ್ತೇವೆ. ಕೃಷ್ಣನು ಧರ್ಮ, ಪ್ರೀತಿ, ಮತ್ತು ನ್ಯಾಯದ ಸಂಕೇತ. ಆತನ ಬೋಧನೆಗಳು ಇಂದಿಗೂ ಪ್ರಸ್ತುತ ಮತ್ತು ನಮಗೆ ಮಾರ್ಗದರ್ಶನ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು

ಇದೆ ವೇಳೆ ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ನೂತನ ಸಮಾಜ ಸೇವಕ ನರಸಿಂಹಮೂರ್ತಿ ಮಾತನಾಡಿ ಈ ಹಬ್ಬವು ಭಕ್ತಿ ಮತ್ತು ಸತ್ಯದ ಸಂದೇಶಗಳನ್ನು ತಿಳಿಸುತ್ತದೆ ನಾವೆಲ್ಲರು ಕೃಷ್ಣನ ಬೋಧನೆಗಳು ಮತ್ತು ಆದರ್ಶಗಳನ್ನು ಅನುಸರಿಸಬೇಕಿದೆ
ಸತ್ಯ, ಧರ್ಮ ಮತ್ತು ಪ್ರೀತಿಯ ಮಾರ್ಗದಲ್ಲಿ ನಡೆಯಬೇಕು ಈ ಕೃಷ್ಣ ಜಯಂತಿಯಂದು ಅವರಬೋಧನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದರು

ತಾಲೂಕಿನ ಗ್ರಾಮೀಣ ಭಾಗ ಸೇರಿದಂತೆ ನಗರದ ಯಾದವ ಸಮುದಾಯದ ಕುಲ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾದ್ದರು
ಕೀಲು ಕುದುರೆ ಗಾರಡಿ ಗೊಂಬೆ ಸೇರಿದಂತೆ ಕಲಾ ತಂಡಗಳು ಗಮನ ಸೆಳೆದವು ನಗರದ ಪ್ರಮುಖ ರಾಜ ಬೀದಿಗಳಲ್ಲಿ ಪಲ್ಲಕ್ಕಿಗಳ ಸಂಚರಿಸಿದವು

Leave a Reply

Your email address will not be published. Required fields are marked *