




ಇಟಗಲ್ ಪುರ ಮೋಹನ್ ಅವರ ಜನ್ಮದಿನ : ಎಸ್ ಆರ್ ವಿಶ್ವನಾಥ್, ಹಲವು ಮುಖಂಡರಿಂದ ಶುಭ ಹಾರೈಕೆ :
ಯಲಹಂಕ : ಇಟಗಲ್ ಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಮಹಾಯೋಗಿ ವೇಮನ ಪತ್ತಿನ ಸಹಕಾರ ಸಂಘದ ನಿರ್ದೇಶಕರು, ಬಿಜೆಪಿ ಮುಖಂಡರಾದ ಇಟಗಲ್ ಪುರ ಮೋಹನ್ ಅವರ ಜನ್ಮದಿನವನ್ನು ಶಾಲಾವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ಸ್ನೇಹಿಯಾಗಿ ಆಚರಿಸಲಾಯಿತು. ಜನ್ಮದಿನದ ಪ್ರಯುಕ್ತ ಶಾಸಕ ಎಸ್ ಆರ್ ವಿಶ್ವನಾಥ್ ಸೇರಿದಂತೆ ಹಲವು ಮುಖಂಡರು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಅಲೋಕ್ ವಿಶ್ವನಾಥ್, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಬೆಟ್ಟಹಲಸೂರು ನಂಜುಂಡಪ್ಪ, ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ವಿಶ್ವನಾಥಪುರ ಮಂಜುನಾಥ್, ಎಸ್.ಜಿ.ಪ್ರಶಾಂತ್ ರೆಡ್ಡಿ, ಎಸ್.ಜಿ.ನರಸಿಂಹಮೂರ್ತಿ, ವಸಂತ್ ಅರಕೆರೆ, ಕೆ.ಬಾಬು, ಮುನಿಕೃಷ್ಣ, ಚಂದ್ರಹಾಸಗೌಡ, ನವೀನ್(ತಂಬಿ), ಸಾದೇನಹಳ್ಳಿ ಪ್ರಕಾಶ್ ಗೌಡ, ಉಚ್ಛ ನ್ಯಾಯಾಲಯದ ವಕೀಲರಾದ ನವೀನ್, ಯುವ ಮುಖಂಡರಾದ ಎಂ.ಮಂಜುನಾಥ್, ಎಸ್.ವೇಣುಗೋಪಾಲ್ ಸೇರಿದಂತೆ ಮೋಹನ್ ಅವರ ಕುಟುಂಬ ವರ್ಗದವರು ಹಾಗೂ ಹಿತೈಷಿಗಳಿದ್ದರು.