






ಶಾಸಕ ಎಸ್ ಆರ್ ವಿಶ್ವನಾಥ್, ಹಲವು ಗಣ್ಯರಿಂದ ಶುಭ ಹಾರೈಕೆ :
ಯಲಹಂಕ : ಯಲಹಂಕ ನಗರ ವ್ಯಾಪ್ತಿಯ ಅಟ್ಟೂರು ವಾರ್ಡ್ 3ರ ಬಿಜೆಪಿ ಅಧ್ಯಕ್ಷ ನಾರಾಯಣಸ್ವಾಮಿ ಅವರ ಜನ್ಮದಿನದ ಪ್ರಯುಕ್ತ ಯಲಹಂಕ ಉಪನಗರ 5ನೇ ಹಂತದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್, ಬಿಜೆಪಿ ಯುವ ಮುಖಂಡರು, ವಿಶ್ವವಾಣಿ ಫೌಂಡೇಶನ್ ನಿರ್ದೇಶಕರಾದ ಅಲೋಕ್ ವಿಶ್ವನಾಥ್ ಸೇರಿದಂತೆ ಹಲವು ಬಿಜೆಪಿ ಮುಖಂಡರು, ಕಾರ್ಯಕರ್ತರು, ಹಿತೈಷಿಗಳು, ಸ್ನೇಹಿತರು, ಬಂಧುಗಳು ಮತ್ತು ಅಭಿಮಾನಿಗಳು ನಾರಾಯಣಸ್ವಾಮಿ ಅವರಿಗೆ ಸನ್ಮಾನಿಸಿ ಜನ್ಮದಿನದ ಶುಭ ಹಾರೈಸಿದರು.
ಇದೇ ವೇಳೆ ಪಂಡಿತ್ ದೀನ ದಯಾಳ್ ಉಪಾಧ್ಯಕ್ಷ ಅವರ ಜನ್ಮದಿನದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ನಮನ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ಎಸ್.ಎನ್.ರಾಜಣ್ಣ, ದಿಬ್ಬೂರು ಜಯಣ್ಣ, ಯಲಹಂಕ ನಗರ ಮಂಡಲ ಬಿಜೆಪಿ ಪ್ರಭಾರ ಅಧ್ಯಕ್ಷ ಮುರಾರಿರಾಮು, ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಶ್ವನಾಥಪುರ ಮಂಜುನಾಥ್, ಎ.ಸಿ.ಮುನಿಕೃಷ್ಣಪ್ಪ, ಮಧುಸೂದನ್, ಕೆ.ಎಂ.ಮುರಳಿ, ನಟರಾಜ್, ಶೇಷಾದ್ರಿ, ಶಿವಕುಮಾರ್ ಗೌಡ, ಅಟ್ಟೂರು ವಾರ್ಡ್ ಬಿಜೆಪಿ ಉಪಾಧ್ಯಕ್ಷ ಶ್ರೀಕಾಂತ್, ಬೈರೇಗೌಡ ಬೆಟ್ಟಹಳ್ಳಿ, ಬೈಲಪ್ಪ ಬೆಟ್ಟಹಳ್ಳಿ, ವಾರ್ಡ್ ಯುವ ಮೋರ್ಚಾ ಅಧ್ಯಕ್ಷ ವಿನೋದ್, ನವೀನ್, ನಾಗರಾಜ್ ಸೇರಿದಂತೆ ಹಲವು ಮುಖಂಡರು, ಬಿಜೆಪಿ ಕಾರ್ಯಕರ್ತರಿದ್ದರು.