








ಬೆಂಗಳೂರು : ದೈಹಿಕ ಶಿಕ್ಷಣ ಮತ್ತು ಕ್ರೀಡಾ ಇಲಾಖೆ, ದೈಹಿಕ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ನಗರ ವಿಶ್ವ ವಿದ್ಯಾನಿಲಯ ಮತ್ತು ಆರ್.ಜೆ.ಎಸ್.ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಇವರ ಸಹಯೋಗದಲ್ಲಿ ನಗರದ ಕೋರಮಂಗಲದಲ್ಲಿ ಇತ್ತೀಚೆಗೆ ನಡೆದ ಅಂತರ್ ಕಾಲೇಜು ಕುಸ್ತಿ ಪಂದ್ಯಾವಳಿಯಲ್ಲಿ ಬ್ಯಾಟರಾಯನಪುರ ಕ್ಷೇತ್ರದ ‘ಬಂಡಿಕೊಡಿಗೇಹಳ್ಳಿ ಕುಸ್ತಿ ತರಬೇತಿ ಕೇಂದ್ರ’ದಲ್ಲಿ ತರಬೇತುದಾರ ಮೋಹನ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದ ಪೈಲ್ವಾನ್ ಅಭಿಷೇಕ್, ಪೈಲ್ವಾನ್ ಸೋನುಕುಮಾರ್ ಮತ್ತು ಪೈಲ್ವಾನ್ ವಿಜಯಲಕ್ಷ್ಮಿ ಅವರು ಗೆಲುವು ಸಾಧಿಸಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿಜೇತ ಕುಸ್ತಿಪಟುಗಳ ಈ ಸಾಧನೆಗೆ ತರಬೇತುದಾರ ಮೋಹನ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದು, ಅಭಿನಂದಿಸಿದ್ದಾರೆ.
ಬಂಡಿಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಕುಸ್ತಿ ತರಬೇತಿ ಕೇಂದ್ರದ ನಿರ್ವಣೆಗೆ ಅಗತ್ಯ ಸಹಕಾರ ನೀಡಿ, ಕುಸ್ತಿಪಟುಗಳ ತರಬೇತಿಗೆ ಅಗತ್ಯ ನೆರವು ನೀಡುವ ಮೂಲಕ ಕ್ರೀಡಾ ಪ್ರೋತ್ಸಾಹ ಮಾಡುತ್ತಿರುವ ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಸಹೃದಯಿ ದಾನಿಗಳ ಕೊಡುಗೆಯನ್ನು ತರಬೇತುದಾರ ಮೋಹನ್ ಸ್ಮರಿಸಿದ್ದು, ಅವರ ಸಹಕಾರ ಮತ್ತು ಪ್ರೋತ್ಸಾಹದಿಂದಾಗಿ ಕುಸ್ತಿಪಟುಗಳು ಈ ರೀತಿಯ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthau kogilu layout Yelahanka Bangalore
9845085793
7349337989
