ಅದ್ದೂರಿ 13ನೇ ವರ್ಷದ ಕನ್ನಡ ರಾಜ್ಯೋತ್ಸವ ಸಂಭ್ರಮ ಶಬ್ಬು ರವರ ನೇತೃತ್ವದಲ್ಲಿ
ಯಲಹಂಕ ಬೆಳ್ಳೆಹಳ್ಳಿ ಗ್ರಾಮ 13ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಶಬ್ಬುರವರ ನೇತೃತ್ವದಲ್ಲಿ ನಡೆಯಿತು ಈ ಸಂದರ್ಭದಲ್ಲಿ ಪೂಜೆ ಧ್ವಜಾರೋಹಣ ಮಾಡಿ ಶಾಲೆಯ ಮಕ್ಕಳೊಂದಿಗೆ ಪ್ರಾರ್ಥನೆ ನಾಡಗೀತೆ ನಡೆಯಿತು ಅವರು ಪ್ರತಿ ವರ್ಷದಂತೆ ಈ ವರ್ಷವೂ ಬೆಳ್ಳಹಳ್ಳಿ ಗ್ರಾಮ ಕೋಗಿಲು ಕಣ್ಣೂರು ಕೋಗಿಲು ಬಡಾವಣೆ ಹೀಗೆ ಸುತ್ತಮುತ್ತಲಿನ ಆಟೋ ಚಾಲಕರಿಗೆ ಬಟ್ಟೆ(ವಸ್ತ್ರಗಳು) ಹಾಗೂ ಸಿಹಿ ತಿಂಡಿ ವಿತರಿಸಿದರು ಮತ್ತು ಅಂಗನವಾಡಿ ಶಾಲೆ ಉರ್ದು ಶಾಲೆ ಕನ್ನಡ ಶಾಲೆ ಮಕ್ಕಳಿಗೆ ಜಾಮಿಟ್ರಿ ಬಾಕ್ಸ್ ನೋಟ್ ಪುಸ್ತಕಗಳು ಬ್ಯಾಗುಗಳು ವಿತರಿಸಿದರು ಹಾಗೂ ಶಿಕ್ಷಕ ವೃಂದದವರಿಗೆ ಸನ್ಮಾನ ಮಾಡಿದರು ಈ ಕಾರ್ಯಕ್ರಮಕ್ಕೆ ಬೆಳ್ಳಹಳ್ಳಿ ಗ್ರಾಮ ಸುತ್ತಮುತ್ತಲಿನ ಗ್ರಾಮಸ್ಥರು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಈ ಕಾರ್ಯಕ್ರಮಕ್ಕೆ ಬಂದಂತಹ ಎಲ್ಲರಿಗೂ ಮಧ್ಯಾಹ್ನದ ಊಟ ವ್ಯವಸ್ಥೆ ಮಾಡಲಾಯಿತು ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೆರವೇಯಿತ್ತು ಇದೇ ಸಂದರ್ಭದಲ್ಲಿ ಎಲ್ಲಾ ಆಟೋ ಚಾಲಕರು ಶಬ್ದವರಿಗೆ ಸನ್ಮಾನ ಮಾಡಿ. ಒಂದು ಸಣ್ಣ ಕತ್ತಿನಲ್ಲಿ ಬೆಳ್ಳಿ ಚೈನ್ ಕಾಣಿಕೆಯಾಗಿ ಅವರಿಗೆ ನೀಡಿದರು ಎಲ್ಲರೂ ಸಂತೋಷ ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶಬ್ಬುರವರಿಗೆ ಕನ್ನಡ ರಾಜ್ಯೋತ್ಸವದ ಶುಭ ಕೋರಿದರು

Leave a Reply

Your email address will not be published. Required fields are marked *