















ಶ್ರೀ ಸಿವ ಕುಮಾರ್, ಬಿಜೆಪಿ RWA ಅಧ್ಯಕ್ಷರು, ಬ್ಯಾಟರಾಯನಪುರ ಗ್ರಾಮಾಂತರ ಮಂಡಲದವರು, ತಮ್ಮ ಪದಾಧಿಕಾರಿಗಳೊಂದಿಗೆ ಕಾರ್ಯಕ್ರಮದ ಆಯೋಜನೆ ಮತ್ತು ಸಂಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿ, ರಾಜ್ಯೋತ್ಸವವನ್ನು ಅದ್ದೂರಿಯಾಗಿ ಯಶಸ್ವಿಗೊಳಿಸಿದರು.
ಶ್ರೀ ತೇಜಸ್, ಕನ್ನಡ ರಾಜ್ಯೋತ್ಸವ ಸಮಿತಿ ಅಧ್ಯಕ್ಷರು, ನಮ್ಮ ಪ್ರೆಸ್ಟೀಜ್ ಫಿನ್ಸ್‌ಬರಿ ಪಾರ್ಕ್ ರಿಜೆಂಟ್ (ನಮ್ಮ ತಂಡದ ಸದಸ್ಯರು) ಹಾಗೂ ಅಪಾರ್ಟ್‌ಮೆಂಟ್ ನಿವಾಸಿಗಳು ಒಗ್ಗೂಡಿ ಕನ್ನಡದ ಆತ್ಮಭಾವದಲ್ಲಿ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ತಮಟೆ, ಡೊಳ್ಳು ಕುಣಿತ, ವೀರಗಾಸೆ, ಯಕ್ಷಗಾನ, ಗೊಂಬೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜನೆಗೆ ಅಚ್ಚುಕಟ್ಟಾದ ಸೊಬಗು ನೀಡಿದವು. ಎಲ್ಲರೂ ಹೆಮ್ಮೆಯಿಂದ “ಕನ್ನಡ ನಮ್ಮ ಮಾತೃಭಾಷೆ” ಎಂದು ಘೋಷಿಸಿ, ಕನ್ನಡ ರಾಜ್ಯೋತ್ಸವವನ್ನು ಭಾವಪೂರ್ಣ ಹಾಗೂ ಅದ್ದೂರಿ ರೀತಿಯಲ್ಲಿ ಯಶಸ್ವಿಗೊಳಿಸಿದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthau
kogilu layout Yelahanka
Bangalore
9845085793
7349337989
