ಕನ್ನಡವನ್ನು ದ್ವೇಷಿಸುವ ಪ್ರವೃತ್ತಿ ನಿಲ್ಲಬೇಕು
__ಹಿರಿಯ ಪತ್ರಕರ್ತ ಮನೋಹರ್ ಯಡವಟ್ಟಿ ಕರ್ನಾಟಕಕ್ಕೆ ಬರುವ ಇತರ ಭಾಷಿಕರು ತಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಾರೆ ಆದರೆ ಕನ್ನಡ ಭಾಷೆಯನ್ನು ದ್ವೇಷಿಸುತ್ತಾರೆ. ಈ ಪ್ರವೃತ್ತಿಯನ್ನು ಬಿಡಬೇಕು ಎಂದು ಹಿರಿಯ ಹಾಗೂ ಖ್ಯಾತ ಪತ್ರಕರ್ತ ಶ್ರೀ ಮನೋಹರ್ ಯಡವಟ್ಟಿಯವರು ಹೇಳಿದರು. ಅವರು ನವೆಂಬರ್ 1 ಶನಿವಾರದಂದು ಕೋಗಿಲಿನ ಆಕ್ಸ್ಫರ್ಡ್ ಆಂಗ್ಲ ಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಮುಂದುವರೆದ ಅವರು ಇತರ ಭಾಷೆಗಳ ಜನರು ಕೂಡ ಕನ್ನಡ ಮಾತನಾಡುವುದನ್ನು ಹಾಗೂ ಪ್ರೀತಿಸುವುದನ್ನು ಕಲಿಯಬೇಕು ಎಂದು ಕಿವಿ ಮಾತು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಆಕ್ಸ್ಫರ್ಡ್ ಸಂಸ್ಥೆ ಯ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ರಾಜೇಶ್ ರವರು ಮಾತನಾಡಿ ಕನ್ನಡ ಭಾಷೆಯನ್ನು ಉಳಿಸುವ ಪ್ರಯತ್ನದಲ್ಲಿ ಖಾಸಗಿ ಶಾಲೆಗಳು ಕೈಜೋಡಿಸಬೇಕು ನಮ್ಮ ನಾಡು ನುಡಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸಬೇಕಾಗಿದೆ. ಎಂದು ಕರೆ ನೀಡಿದರು. ದೀಪ ಬೆಳಗಿಸುವುದರ ಮೂಲಕ ಆರಂಭವಾದ ಈ ಕಾರ್ಯಕ್ರಮದ

ನಿರೂಪಣೆಯನ್ನು ಶ್ರೀಮತಿ ಚಂದ್ರಕಲಾ ಹಾಗೂ ಮಾನಸ ಮಾಡಿದರೆ, ಪ್ರಾರ್ಥನೆಯನ್ನು ೯ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸ್ನೇಹ ಮಾಡಿದರು. ಉಪನ್ಯಾಸಕರಾದ ಶ್ರೀ ಚಕ್ರವರ್ತಿ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರೆ, ಕನ್ನಡ ನಾಡಿನ ಕಿರು ಪರಿಚಯವನ್ನು ಶಿಕ್ಷಕಿ ಶ್ರೀಮತಿ ವಿಶಾಲಾಕ್ಷಿ ಹಾಗೂ ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀಮತಿ ದಿವ್ಯ ಮಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ. ಡಾಕ್ಟರ್ ರಾಜು. ಹಿರಿಯ ಹಾಗೂ ಖ್ಯಾತ ಪತ್ರಕರ್ತ ಮನೋಹರ್ ಯಡವಟ್ಟಿ, ಶ್ರೀಮತಿ ಪ್ರಮೀಳಾ ರಾಜೇಶ್. ಹಾಗೂ ಶ್ರೀಮತಿ ಶೋಭ ರಾಜ್ ಹಾಗೂ ಶ್ರೀ ನೋಹನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ನಡೆದ ಮನೋರಂಜನೆ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಮಂತ್ರಮುಕ್ತರನ್ನಾಗಿಸಿದವು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಶ್ರೀ ಮನೋಹರ್ ಯಡವಟ್ಟಿ ಅವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *