
ಡಾ.ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ
ಚಿಕ್ಕಬಳ್ಳಾಪುರ: ನಗರದ ಡಾ.ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಕಚೇರಿಯಲ್ಲಿ ಇಂದು ಭಾವಪೂರ್ಣವಾಗಿ ಮತ್ತು ಘನವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ತಾಯಿ ಭುವನೇಶ್ವರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.ಬಳಿಕ ಹಾಜರಿದ್ದ ಗಣ್ಯರು ಕನ್ನಡ ನಾಡು, ಕನ್ನಡ ತಾಯಿಗೆ ವಂದನೆ ಸಲ್ಲಿಸಿದರು.
ಈ ವೇಳೆ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ಡೇ ರಾಜ್ಯಾಧ್ಯಕ್ಷ ಡಾ.ಎಂ.ಎಂ.ಭಾಷ ಮಾತನಾಡಿ
ರಾಜ್ಯದ ಜನತೆಗೆ ಕನ್ನಡ ರಾಜ್ಯೋತ್ಸವದ
ಶುಭಾಶಯ ಕೋರಿ, ಕನ್ನಡ ನಮ್ಮ ತಾಯಿನುಡಿ.ಈ ಭಾಷೆಗೆ ಪ್ರಥಮ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.ಕನ್ನಡದ ಮೇಲೆ ಇರುವ ನಮ್ಮ ಪ್ರೀತಿ ಕೇವಲ ನವೆಂಬರ್ ತಿಂಗಳಕ್ಕೆ ಮಾತ್ರ ಸೀಮಿತವಾಗಬಾರದು ಕನ್ನಡವೇ ಸತ್ಯ,ಕನ್ನಡವೇ ನಿತ್ಯ ಎಂಬ ಆತ್ಮಭಾವ ಎಲ್ಲರಲ್ಲೂ ಸದಾ ಜೀವಂತವಾಗಿರಬೇಕು ಎಂದು ಹೇಳಿದರು.
ಯಾರ ಮೇಲೂ ಭಾಷೆಯನ್ನು ಕಲಿಯಲು ಒತ್ತಡ ಹೇರುವ ಬದಲು ಪ್ರೀತಿಯಿಂದ ಮನದ ಬಯಕೆಯಿಂದ ಕಲಿಯಲು ಪ್ರೇರೇಪಿಸಬೇಕು ಇತರೆ ರಾಜ್ಯಗಳಿಂದ ಇಲ್ಲಿಗೆ ಬಂದವರಿಗೂ ಕನ್ನಡ ಕಲಿಸಿ,ಭಾಷೆಯ ಬಗ್ಗೆ ಅಭಿಮಾನ ಮೂಡಿಸುವುದು ನಮ್ಮ ಸಂಸ್ಕೃತಿ.ಕನ್ನಡದ ಇತಿಹಾಸ, ಸಾಹಿತ್ಯ,ಪರಂಪರೆಗಳ ಮಹತ್ವವನ್ನು ಹೊಸ ಪೀಳಿಗೆಗೆ ತಿಳಿಸಬೇಕು ಪರಸ್ಪರ ಸಹಕಾರದಿಂದ ಭಾಷೆ ಉಳಿಸಿ ಬೆಳೆಸುವ ದಾರಿಯಲ್ಲಿ ನಡೆದು,ಕನ್ನಡವನ್ನು ಜಾಗತಿಕ ವೇದಿಕೆಯಲ್ಲಿ ಮತ್ತಷ್ಟು ಮೆರೆಸೋಣ ಎಂದು ಹೇಳಿದರು. ಕನ್ನಡ ರಾಜ್ಯೋತ್ಸವ ಒಂದು ದಿನದ ಆಚರಣೆ ಮಾತ್ರವಲ್ಲ ಪ್ರತಿದಿನ ಕನ್ನಡದ ಬಗೆಗಿನ ಬದ್ಧತೆಯನ್ನು ಕಾಪಾಡುವುದು ನಿಜವಾದ ಸಂಭ್ರಮ.ಕನ್ನಡ ಎಲ್ಲರ ಪ್ರಿಯ ಭಾಷೆಯಾಗಬೇಕು,ಎಲ್ಲರೂ ಕನ್ನಡ ಕಲಿಯೋಣ,ಕನ್ನಡ ಮಾತಾಡೋಣ ಎಂದು ಕರೆ ನೀಡಿದರು.ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದವರಿಗೆ ಅಭಿನಂದನೆ ಸಲ್ಲಿಸಿದ ಡಾ. ಭಾಷ ಅವರು, ಎಲ್ಲಿದ್ದರೂ ಇರು,ಎಂತಿದ್ದರೂ ಇರು,ಎಂದೆಂದಿಗೂ ನೀ ಕನ್ನಡವಾಗಿರು ಎಂದು ಭಾವಪೂರ್ಣವಾಗಿ ಹೇಳಿದರು.ಕಾರ್ಯಕ್ರಮದಲ್ಲಿ ಫೌಂಡೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಶಿಂ ಬನ್ನೂರು,ಜಿಲ್ಲಾಧ್ಯಕ್ಷ ವಿ.ರಾಜಶೇಖರ್,ಸಫೀರ್,ನವಾಜ಼್ ಪಾಷ,
ನರಸಿಂಹಮೂರ್ತಿ,ರಹಮತುಲ್ಲಾ,ಆಲ್ತಾಫ್,ಚಾಂದ್ ಪಾಷ ಹಾಗೂ ಫೌಂಡೇಶನ್ ಸದಸ್ಯರು ಮತ್ತು
ಇತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthau kogilu layout Yelahanka
9845085793
7349337989
