*ಯಲಹಂಕದ Ryan ಅಂತಾರಾಷ್ಟ್ರೀಯ ಶಾಲೆ (CBSE) ಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ
*
ಯಲಹಂಕ ಸುದ್ದಿ.  ದಿನಾಂಕ 5-11-2025 ಬುಧವಾರದಂದು ಯಲಹಂಕದ Ryan ಅಂತಾರಾಷ್ಟ್ರೀಯ ಶಾಲೆ (CBSE) ಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ‌ಸಂಭ್ರಮದಿ ಜರುಗಿತು.
ಕಾರ್ಯಕ್ರಮ ದೇವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ವಿದ್ಯಾರ್ಥಿಗಳು ನಾಡಿಗಾಗಿ ಶ್ರಮಿಸಿದ ಕಿತ್ತೂರು ರಾಣಿ ಚೆನ್ನಮ್ಮ,ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ, ಕೃಷ್ಣದೇವರಾಯ, ನಾಲ್ವಡಿ ಕೃಷ್ಣರಾಜ ಒಡೆಯರ್, ನಾಡಪ್ರಭು ಕೆಂಪೇಗೌಡ, ಮುಂತಾದವರ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರು. ಮತ್ತು ಕನ್ನಡ ರಾಜ್ಯೋತ್ಸವದ ಮಹತ್ವದ ಕುರಿತು ಉತ್ಸಾಹಭರಿತ ನೃತ್ಯ ನಟನೆ ಮಾತುಕತೆ ಮೂಲಕ ನಡೆಯಿತು. ನಮ್ಮ ಪ್ರೀತಿಯ ಕರ್ನಾಟಕದ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಹೆಮ್ಮೆಯನ್ನು ನುಡಿಗಳಲ್ಲಿ ಹಾಗೂ ಕ್ರಿಯೆಯಲ್ಲಿ ಆಚರಿಸಲಾಯಿತು.
ಪತ್ರಿಕಾ ಮಾಧ್ಯಮ ಲೋಕದ ಹಿರಿಯ ಪತ್ರಕರ್ತ ಹಾಗೂ ಯಲಹಂಕ ಪ್ರಭು ಪತ್ರಿಕೆ ಸಂಪಾದಕರಾದ ಗೌರವಾನ್ವಿತ ಶ್ರೀ ಉಮೇಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು, ಪ್ರಾಂಶುಪಾಲರಾದ ಶ್ರೀಮತಿ ಶೈನಿ ಜಾಯ್ಸ್ ಅಧ್ಯಕ್ಷತೆ ವಹಿಸಿದ್ದದು ಗೌರವದ ಸಂಗತಿ. ಮುಖ್ಯ ಅತಿಥಿಗಳ ಸ್ಪೂರ್ತಿದಾಯಕ ಮಾತುಗಳು ವಿದ್ಯಾರ್ಥಿಗಳಲ್ಲಿ ನಮ್ಮ ಮಾತೃಭೂಮಿಯ ಬಗ್ಗೆ ಹೆಮ್ಮೆ ಮತ್ತು ಪ್ರೀತಿಯನ್ನು ಉಜ್ಜೀವನಗೊಳಿಸಿತು.
ವಿದ್ಯಾರ್ಥಿಗಳು ರೋಮಾಂಚಕ ಸಾಂಸ್ಕೃತಿಕ ಪ್ರದರ್ಶನಗಳು, ಹೃದಯಸ್ಪರ್ಶಿ ಹಾಡುಗಳು ಮತ್ತು ನೃತ್ಯಗಳ ಮೂಲಕ ತಮ್ಮ ನಾಡಭಕ್ತಿಯನ್ನು ಪ್ರದರ್ಶಿಸಿದರು. ಅಂತಿಮವಾಗಿ “ಹುಟ್ಟಿದರೆ ಕನ್ನಡ ನಾಡಲ್ಲೆ ಹುಟ್ಟಬೇಕು” ಎಂಬ ಗೀತೆಗೆ ಕನ್ನಡ ಬಾವುಟದೊಡನೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು
ಆಚರಣೆಯ ಕೊನೆಯ ಹಂತದಲ್ಲಿ ನಮ್ಮ ಮುಖ್ಯ ಅತಿಥಿಗಳು ಹಾಗೂ ನಮ್ಮ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಶೈನಿ ಜಾಯ್ಸ್ ಅವರು ಸಸಿ ನೆಡುವ ಸಮಾರಂಭದ ಮೂಲಕ ರಾಜ್ಯದ ಬೆಳವಣಿಗೆ ಮತ್ತು ಸಮೃದ್ಧಿಯ ಸಂಕೇತವಾಗಿ ಈ ದಿನವು ಸ್ಮರಣೀಯ ಕ್ಷಣವಾಯಿತು.
ಇದು ನಿಜಕ್ಕೂ ಸಾಂಸ್ಕೃತಿಕ ಮನೋಭಾವ, ಸಂತೋಷ ಮತ್ತು ಏಕತೆಯಿಂದ ತುಂಬಿದ ಹೆಮ್ಮೆಯ ಕ್ಷಣವಾಗಿತ್ತು! ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಆಡಳಿತ ವರ್ಗ ಶಿಕ್ಷಕರು ಶಿಕ್ಷಕಿಯರು ಸಿಬ್ಬಂದಿ ವರ್ಗ, ಸ್ನೇಹಿತರು ಅಭಿಮಾನಿಗಳು ಮುಂತಾದವರು ಹಾಜರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthau kogilu layout 

Yelahanka Bangalore Karnataka

9845085793.   7892121844

7349337989

Leave a Reply

Your email address will not be published. Required fields are marked *