ಸೃಜನಶೀಲತೆಯ ಮೂಲವಿರುವುದೇ ಮಾತೃಭಾಷೆಯಲ್ಲಿ : ಡಾ.ಪುರುಷೋತ್ತಮ ಬಿಳಿಮಲೆ
ಡಾ.ನಿಟ್ಟೆ ಶಂಕರ ಅಡ್ಯಂತಾಯ ಪ್ರಥಮ ದರ್ಜೆ ಕಾಲೇಜಿನಲ್ಲಿ 70ನೇ ಕನ್ನಡ ರಾಜ್ಯೋತ್ಸವ :
ಯಲಹಂಕ : ಸೃಜನೆಶೀಲತೆ ಹುಟ್ಟುವುದೇ ಮಾತೃಭಾಷೆ ಯಲ್ಲಿ, ಸೃಜನಶೀಲತೆಯ ಮೂಲ ಇರುವುದೇ ಮಾತೃಭಾಷೆಯಲ್ಲಿ, ಈ ದಿಸೆಯಲ್ಲಿ ಯಾರೇ ಇರಲಿ ತಮ್ಮ ಮಾತೃಭಾಷೆಯನ್ನು ಮರೆಯದೆ ಬಳಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರು ಅಭಿಪ್ರಾಯಪಟ್ಟರು.
ಯಲಹಂಕದ ಮೈಲಪ್ಪನಹಳ್ಳಿ ಸಮೀಪ ಇರುವ ಡಾ.ನಿಟ್ಡೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ‘ಕರ್ನಾಟಕ ಏಕೀಕರಣ ಹೋರಾಟ ಮತ್ತು ಸ್ವಾತಂತ್ರ್ಯ ಹೋರಾಟ ಎರಡೂ ಸಹ ಜೊತೆ ಜೊತೆ ಯಲ್ಲೇ ನಡೆದವು. ಏಕೀಕೃತ ಕರ್ನಾಟಕ ಮೊದಲಾಗ ಬೇಕೆ ಅಥವಾ ಸ್ವತಂತ್ರ ಭಾರತದ ನಂತರ ಕರ್ನಾಟಕ ಏಕೀಕೃತ ಆಗಬೇಕೆ ಎಂಬ ಚರ್ಚೆಗಳು ನಡೆದವು. ಆ ವೇಳೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರು ಈ ಜಿಜ್ಞಾಸೆಗೆ ಪುಷ್ಟಿ ನೀಡಲು ‘ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎಂಬ ಗೀತೆಯ ಮೂಲಕ ಭಾರತ ಮಾತೆ ನಮ್ಮ ತಾಯಿ, ಕನ್ನಡಮಾತೆ ಭಾರತ ಮಾತೆಯ ಮಗಳು ಎಂಬ ತಮ್ಮ ಅಭಿಪ್ರಾಯ ನೀಡಿದ್ದರು, ನಂತರದ ದಿನಗಳಲ್ಲಿ ಆ ಗೀತೆ ನಮ್ಮ ನಾಡಗೀತೆ ಯಾಯಿತು. ಕರ್ನಾಟಕ ಏಕೀಕರಣ ಹೋರಾಟದಲ್ಲಿ ಉಯಿಲುಗೋಳ ನಾರಾಯಣ, ಆಲೂರು ವೆಂಕಟರಾಯರ ಪಾತ್ರ ಸ್ಮರಣೀವಾದುದು ಎಂದರು.
ಕಾಸರಗೋಡು, ಅಕ್ಕಲಕೋಟೆ ಮುಂತಾದ ಕನ್ನಡ ಜನ ಬಾಹುಳ್ಯ ಹೊಂದಿರುವ ಹೊರ ರಾಜ್ಯಗಳ ಪ್ರದೇಶ ಗಳು ಕರ್ನಾಟಕ್ಕೆ ಸೇರಬೇಕು ಎಂಬುದು ನಮ್ಮ ಬಹು ದಿನದ ಹೋರಾಟವಾದರೂ, ಅದು ಈಡೇರುವುದು ಅಸಾಧ್ಯ, ಆದರೆ ಇಂತಹ ಪ್ರದೇಶಗಳಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಆಯಾ ರಾಜ್ಯ ಗಳೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಿ ಅಲ್ಲಿ ಕನ್ನಡ ಶಾಲೆಗಳನ್ನು ತೆರೆಯುವ ದಿಸೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಶ್ರಮಿಸುತ್ತಿದೆ ಎಂದರು.
70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಾಲೇಜು ವಿಧ್ಯಾರ್ಥಿಗಳಿಂದ ಡೊಳ್ಳುಕುಣಿತ, ಯಕ್ಷಗಾನ, ಕನ್ನಡ ಗೀತೆಗಳ ಗಾಯನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕನ್ನಡ ಕೇಂದ್ರಿತವಾದ ವಿವಿಧ ಸ್ಪರ್ಧೆಗಳಲ್ಲಿ  ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ನಿಟ್ಟೆ ಶಂಕರ‌ ಅಡ್ಯಂತಾಯ ಸ್ಮಾರಕ‌ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಪ್ರೊ.ರಾಘವೇಂದ್ರ ಆರ್., ಪದವಿ ಪೂರ್ವ ಕಾಲೇಜು ಉಪ ಪ್ರಾಂಶುಪಾಲರಾದ ಡಾ.ಜ್ಯೋತಿ ಹಿಟ್ನಾಳ್, ಪದವಿ ಕಾಲೇಜಿನ ಮಾನವಿಕಗಳು‌ ಮತ್ತು ಸಾಮಾಜಿಕ ವಿಜ್ಞಾನಗಳ ವಿಭಾಗದ ಮುಖ್ಯಸ್ಥರಾದ ಡಾ.ಜೆ.ಬಿ. ಜನಾರ್ಧನ, ಕಾರ್ಯಕ್ರಮದ ಸಂಚಾಲಕರಾದ ಕವಿತಾ ಮಹರ್, ಅರುಣ್ ಕುಮಾರ್, ಪುನೀತ್ ಕುಮಾರ್ ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳಿದ್ದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthau kogilu layout 

Yelahanka Bangalore Karnataka

9845085793.      8050671579

7349337989

Leave a Reply

Your email address will not be published. Required fields are marked *