ಮಾಹೆ ಕಾರ್ಪೊರೇಟ್ ಕ್ರಿಕೆಟ್ ಚಾಂಪಿಯನ್‌ಶಿಪ್ 2025: ಕೈಗಾರಿಕೆ ಮತ್ತು ಶೈಕ್ಷಣಿಕ ಕ್ಷೇತ್ರವನ್ನು ಒಂದಾಗಿಸುವ ವೇದಿಕೆ

ಬೆಂಗಳೂರು, ನವೆಂಬರ್ 17, 2025: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಮಾಹೆ) ಮೊದಲ ಬಾರಿಗೆ “ಮಾಹೆ ಕಾರ್ಪೊರೇಟ್ ಕ್ರಿಕೆಟ್ ಚಾಂಪಿಯನ್‌ಶಿಪ್ 2025” ಆಯೋಜಿಸಿದ್ದು, ಇದೇ ನವೆಂಬರ್‌ 15ರಂದು ಮಾಹೆ ಬೆಂಗಳೂರು ಕ್ಯಾಂಪಸ್‌ನಲ್ಲಿ ಜೆರ್ಸಿ ಮತ್ತು ಟ್ರೋಫಿ ಅನಾವರಣಗೊಳಿಸುವ ಮೂಲಕ ಈ ಪಂದ್ಯಾವಳಿಗೆ ಅದ್ಧೂರಿ ಚಾಲನೆ ನೀಡಲಾಯಿತು.
ಮಾಹೆ ಬೆಂಗಳೂರು ಕ್ಯಾಂಪಸ್‌ ಮತ್ತು ಮಣಿಪಾಲ್‌ನ ಕಾರ್ಪೋರೇಟ್‌ ಸಂಬಂಧಗಳ ಕಚೇರಿ ಜಂಟಿಯಾಗಿ ನಡೆಸುತ್ತಿರುವ ಈ ಕ್ರಿಕೆಟ್‌ ಪಂದ್ಯಾವಳಿಯು, ಉದ್ಯಮ ಸಹಯೋಗದ ಕೇಂದ್ರವಾಗುವತ್ತ ಸಾಗುತ್ತಿರುವ ಮಾಹೆಯ ಬೆಳವಣಿಗೆಯನ್ನು ಉತ್ತಮವಾಗಿಸುತ್ತದೆ ಮತ್ತು ಕಂಪನಿಗಳ ಜತೆಗಿನ ಒಡನಾಟವನ್ನು ಎತ್ತಿತೋರಿಸುತ್ತದೆ.

ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯಾಗಿರುವ ಮತ್ತು NIRF ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್‌ 2025ರಲ್ಲಿ 3ನೇ ಸ್ಥಾನದಲ್ಲಿರುವ ಮಾಹೆಯು, ಶೈಕ್ಷಣಿಕತೆಯನ್ನು ಮೀರಿ ಕಂಪನಿಗಳು, ಅದರ ನಾಯಕರನ್ನು ಮತ್ತು ವೃತ್ತಿಪರರನ್ನು ಸುಲಭವಾಗಿ ತಲುಪಲು ವೇದಿಕೆ ಕಲ್ಪಿಸುವ ಕೆಲಸವನ್ನು ಮುಂದುವರೆಸಿದೆ.

ನವೆಂಬರ್ 16ರಿಂದ ಪಂದ್ಯಗಳು ಪ್ರಾರಂಭವಾಗಿದ್ದು, ಇದು ಒಂದು ತಿಂಗಳವರೆಗೆ ನಡೆಯಲಿದೆ. ದಿನದಲ್ಲಿ ಐದು ಪಂದ್ಯಗಳಿದ್ದು, 12 ತಂಡಗಳಿಂದ ಒಟ್ಟು 16 ರೋಮಾಂಚಕ ಪಂದ್ಯಗಳು ನಡೆಯಲಿವೆ. T20 ಮಾದರಿಯ ಕ್ರಿಕೆಟ್‌ ಪಂದ್ಯಾವಳಿ ಇದಾಗಿರಲಿದೆ.

ಜೆರ್ಸಿ ಮತ್ತು ಟ್ರೋಫಿ ಉದ್ಘಾಟಿಸಿ ಮಾತನಾಡಿದ ಮಾಹೆ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್‌, “ಉದ್ಯಮಗಳ ಜತೆ ಉತ್ತಮ ಬಾಂಧವ್ಯ ಹೊಂದುವುದು ಮಾಹೆಯ ಪ್ರಮುಖ್ಯ ಧ್ಯೇಯಗಳಲ್ಲಿ ಒಂದಾಗಿದೆ. ಈ ಚಾಂಪಿಯನ್‌ಶಿಪ್ ಮೂಲಕ ಕಾರ್ಪೊರೇಟ್ ವೃತ್ತಿಪರರೊಂದಿಗೆ ನಮ್ಮ ಒಡನಾಟ ಉತ್ತಮಗೊಳ್ಳುತ್ತದೆ. ಇದರಿಂದ ಉದ್ಯಮದಲ್ಲಿ ಆಗುವ ಹೊಸ ಬದಲಾವಣೆಗಳನು ತಿಳಿಯಲು ನಮಗೆ ಸಾಧ್ಯವಾಗುತ್ತದೆ. ಈ ಮೂಲಕ ನಮ್ಮ ವಿದ್ಯಾರ್ಥಿಗಳನ್ನು ಉದ್ಯಮಕ್ಕೆ ಸಿದ್ಧಗೊಳಿಸಲು ಹೆಚ್ಚು ನೆರವಾಗುತ್ತದೆʼ ಎಂದು ಹೇಳಿದರು.

ಡೆಲಾಯ್ಟ್, EY, HPE, J. P. ಮಾರ್ಗನ್, KPMG, ಮಣಿಪಾಲ್ ಆಸ್ಪತ್ರೆಗಳು, ಮೈಕ್ರೋಸಾಫ್ಟ್, ಮೈಕ್ರೋಲ್ಯಾಂಡ್, ನೊವೊ ನಾರ್ಡಿಸ್ಕ್, ಸೇಲ್ಸ್‌ಫೋರ್ಸ್, ಥಾಮ್ಸನ್ ರಾಯಿಟರ್ಸ್ ಮತ್ತು ಯೂನಿಸಿಸ್, ಈ 12 ಪ್ರಮುಖ ಕಂಪನಿಗಳು ಈ ಕ್ರಿಕೆಟ್‌ ಚಾಂಪಿಯನ್‌ಶಿಪ್ನಲ್ಲಿ ಭಾಗವಹಿಸಿದ್ದು, ಇದರ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರತಿ
ಕಂಪನಿಗಳ ತಂಡ ನಾಯಕರು ಕ್ಯಾಂಪಸ್‌ನಲ್ಲಿ ಸಸಿ ನೆಟ್ಟರು. ಇದು ಸುಸ್ಥಿರತೆ ಮತ್ತು ದೀರ್ಘಕಾಲೀನ ಪಾಲುದಾರಿಕೆಗೆ ಸಾಮೂಹಿಕ ಬದ್ಧತೆಯನ್ನು ಮತ್ತಷ್ಟು ಒತ್ತಿಹೇಳಿತು.

ಪಂದ್ಯಾವಳಿಯ ವೇಳಾಪಟ್ಟಿಯ
● ನವೆಂಬರ್ 16: ಆರಂಭಿಕ ಪಂದ್ಯಗಳು – 2 ಪಂದ್ಯಗಳು
● ನವೆಂಬರ್ 22 ರಿಂದ 23: ಲೀಗ್ ಹಂತ ಪ್ರಾರಂಭ- 6 ಪಂದ್ಯಗಳು
● ಡಿಸೆಂಬರ್ 6 ರಿಂದ 7: ಲೀಗ್ ಹಂತ ಮುಕ್ತಾಯಗೊಂಡಿದೆ – 4 ಪಂದ್ಯಗಳು
● ಡಿಸೆಂಬರ್ 13: ಸೆಮಿಫೈನಲ್ಸ್
● ಡಿಸೆಂಬರ್ 14: ಗ್ರ್ಯಾಂಡ್ ಫಿನಾಲೆ

ಪ್ರತಿ ಕಾರ್ಪೊರೇಟ್ ತಂಡವು ಕನಿಷ್ಠ ಎರಡು ಲೀಗ್ ಪಂದ್ಯಗಳಲ್ಲಿ ಭಾಗವಹಿಸುತ್ತದೆ. ತಂಡಕ್ಕೆ ಮತ್ತು ಆಟಗಾರರಿಗೆ ಪ್ರತ್ಯೇಕ ಪ್ರಶಸ್ತಿಗಳಿವೆ. ವಿನ್ನರ್‌ ಮತ್ತು ರನ್ನರ್-ಅಪ್, ಜೊತೆಗೆ 14 ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗಳು ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ, ಅತ್ಯುತ್ತಮ ಬ್ಯಾಟ್ಸ್‌ಮನ್, ಅತ್ಯುತ್ತಮ ಬೌಲರ್, ಅತ್ಯುತ್ತಮ ಫೀಲ್ಡರ್ ಮತ್ತು ಅತ್ಯುತ್ತಮ ವಿಕೆಟ್‌ಕೀಪರ್‌ ನಂತಹ ವಿಶೇಷ ಗೌರವಗಳನ್ನು ನೀಡಲಾಗುತ್ತದೆ..

ಮಾಹೆ ಕಾರ್ಪೊರೇಟ್ ಕ್ರಿಕೆಟ್ ಚಾಂಪಿಯನ್‌ಶಿಪ್ 2025, ನೈಜ ಜಗತ್ತಿನ ಉದ್ಯಮ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುವ ಮಾಹೆಯ ಬದ್ಧತೆಯನ್ನು ಪ್ರತಿಬಿಂಬಿಸುವ ಒಂದು ವಿಶಿಷ್ಟ ವೇದಿಕೆಯಾಗಿದೆ. ಕ್ರೀಡೆ, ಸಹಯೋಗ ಮತ್ತು ನಾಯಕತ್ವ ಅಭಿವೃದ್ಧಿಯನ್ನು ಸಂಯೋಜಿಸುವ ಮೂಲಕ, ಮಾಹೆಯು ಕಾರ್ಪೊರೇಟ್ ಜಗತ್ತಿನೊಂದಿಗೆ ಆಳವಾದ, ಶಾಶ್ವತ ಪಾಲುದಾರಿಕೆಗಳನ್ನು ನಿರ್ಮಿಸುವುದನ್ನು ಮುಂದುವರೆಸಿದೆ. ಉದ್ಯಮ ಸಂಪರ್ಕವು ಮಾಹೆಯ ಬೆಳವಣಿಗೆ ಮತ್ತು ಭವಿಷ್ಯದ ದೃಷ್ಟಿಕೋನದ ನಿರ್ಣಾಯಕ ಆಧಾರಸ್ತಂಭವಾಗಿರುತ್ತದೆ.

Leave a Reply

Your email address will not be published. Required fields are marked *