ಪಟ್ಟದ ಶ್ರೀ ನಂಜೇಸ್ವಾಮೀಜಿ, ಶ್ರೀ ಪರ್ವತರಾಜ ಶಿವಾಚಾರ್ಯ ಮಹಾಸ್ವಾಮೀಜಿಯವರ ಆರಾಧನಾ ಸಮಾರಂಭ :

ಬ್ಯಾಟರಾಯನಪುರ : ಕ್ಷೇತ್ರದ ಹುಣಸಮಾರನಹಳ್ಳಿ ಶ್ರೀಮಠದಲ್ಲಿ ಗುರುವಾರ ಆಯೋಜಿಸಿದ್ದ ಲಿಂಗೈಕ್ಯ ಮಹಾಸ್ವಾಮೀಜಿಗಳಾದ ಶ್ರೀ ನಂಜೇಸ್ವಾಮಿಗಳ 78ನೇ ವರ್ಷದ ಆರಾಧನೆ ಮತ್ತು ಪಟ್ಟದ ಶ್ರೀ ಪರ್ವತರಾಜ ಶಿವಾಚಾರ್ಯ ಮಹಾಸ್ವಾಮಿಗಳ 8ನೇ ಆರಾಧನಾ ಸಮಾರಂಭವು ಭಕ್ತ ಗಣದ ನಡುವೆ ವಿಜೃಂಭಣೆಯಿಂದ ನೆರವೇರಿತು.

ಆರಾಧನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಹುಣಸಮಾರನಹಳ್ಳಿ‌ ಶ್ರೀಮಠದ ಪಟ್ಟದ ಶ್ರೀ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವೆ ಮಠದ ಶ್ರೀ ಮಹಂತ ಶಿವಾಚಾರ್ಯ ಸ್ವಾಮೀಜಿ, ಬಳ್ಳನಪುರ ಮಠದ ಶ್ರೀ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ನಾಗಲಾಪುರ‌ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ, ಚಿದ್ಧನ ಮಠದ ಸ್ವಾಮೀಜಿ, ಗಂಜಾ ಮಠದ ಸ್ವಾಮೀಜಿ, ಅಮೃತ ಸ್ವಾಮೀಜಿ ಸೇರಿದಂತೆ ಹರಗುರು ಚರಮೂರ್ತಿಗಳು ವಹಿಸಿದ್ದರು.

ಆರಾಧನಾ ಸಮಾರಂಭದ ಪ್ರಯುಕ್ತ ಲಿಂಗೈಕ್ಯ ಜಗದ್ಗುರು ದ್ವಯರಿಗೆ ವಿಶೇಷಪೂಜೆ, ನೈವೇದ್ಯ, ಹೋಮ, ಹವನ, ತೀರ್ಥ, ಪ್ರಸಾದ ವಿನಿಯೋಗ, ಮಂತ್ರ ಪಠಣೆ, ಅನ್ನಸಂತರ್ಪಣೆ, ಬಾಲಕರಿಂದ ವಚನ‌ ಮತ್ತು ತತ್ವಪದಗಳ ಸಾಮೂಹಿಕ ಗಾಯನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

Leave a Reply

Your email address will not be published. Required fields are marked *