

ಯಲಹಂಕ ಸುದ್ದಿ : ಯಲಹಂಕ ನಗರ ವ್ಯಾಪ್ತಿಯ ಬಿಬಿಎಂಪಿ ವಾರ್ಡ್ ವಿಂಗಡಣೆಯಲ್ಲಿ ಅವೈಜ್ಞಾನಿಕತೆ ಮತ್ತು ಅಸಮರ್ಪಕತೆ ಎದ್ದುಕಾಣುತ್ತಿದ್ದು, ಸ್ವಹಿತಾಸಕ್ತಿಯ ಮೇರೆಗೆ ಕೆಲ ವಾರ್ಡ್ ಗಳಿಗೆ ಹೆಸರಿಡಲಾಗಿದೆ, ಇದರಲ್ಲಿ ಪ್ರಮುಖವಾಗಿ ಯಲಹಂಕ ಮಾರುತಿನಗರ ಸುತ್ತಮುತ್ತಲಿನ ಪ್ರದೇಶಕ್ಕೆ ಯಾವುದೇ ಸಂಬಧವಿಲ್ಲದ ಆಕಾಶ್ ವಾರ್ಡ್ ಎಂದು ಹೆಸರಿಟ್ಟಿರುವುದರ ವಿರುದ್ದ ಹಿರಿಯ ಬಿಜೆಪಿ ಮುಖಂಡ ಚಂದ್ರಯ್ಯ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ಹೊರ ಹಾಕಿದರು.
ಪ್ರತಿಭಟನಾಕಾರನ್ನು ಉದ್ದೇಶಿಸಿ ಹಿರಿಯ ಬಿಜೆಪಿ ಮುಖಂಡ ಚಂದ್ರಯ್ಯ ಮಾತನಾಡಿ ‘ಬೆಂಗಳೂರು ಉತ್ತರ ಪಾಲಿಕೆಯ ಯಲಹಂಕ ನಗರದ ವಾರ್ಡ್ ಗಳನ್ನು 7 ವಾರ್ಡ್ ಗಳಾಗಿ ವಿಂಗಡಿಸಿದ್ದು, ಅವುಗಳ ಪೈಕಿ ವೆಂಕಟಾಲ ಮತ್ತು ಮಾರುತಿನಗರ ಪ್ರದೇಶಕ್ಕೆ ಆಕಾಶ್ ವಾರ್ಡ್ ಎಂದು ನಾಮಕರಣ ಮಾಡಲಾಗಿದೆ. ಆದರೆ ಈ ಆಕಾಶ್ ಯಾರು ಎಂಬುದು ಜನರಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿದೆ. ಆಕಾಶ್ ಚಾರಿತ್ರಿಕ ವ್ಯಕ್ತಿಯೇ, ಸಾಹಿತಿಯೇ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೇ ಅಥವಾ ವಿಜ್ಞಾನಿಯೇ ಎಂದು ಪ್ರಶ್ನಿಸಿದರು. ಮಾರುತಿನಗರಕ್ಕೆ ಆಕಾಶ್ ವಾರ್ಡ್ ಎಂದು ಯಾವುದೋ ರಾಜಕಾರಣಿಯ ಮಗ ಅಥವಾ ಮೊಮ್ಮಗನ ಹೆಸರಿಡುವ ಮೂಲಕ ನಮ್ಮನ್ನು ಪಾತಾಳಕ್ಕೆ ತಳ್ಳಲಾಗಿದೆ. ಕೂಡಲೇ ಆಕಾಶ್ ವಾರ್ಡ್ ಹೆಸರನ್ನು ಹಿಂಪಡೆದು ಆ ಪ್ರದೇಶದ ಹೆಸರು ಅಥವಾ ಐತಿಹಾಸಿಕ ಹಿನ್ನೆಲೆಯುಳ್ಳ ವ್ಯಕ್ತಿ, ಸ್ಥಳದ ಹೆಸರಿಡಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ, ಬಿಬಿಎಂಪಿ ಮಾಜಿ ಸದಸ್ಯರಾದ ಕೆಂಪೇಗೌಡ, ಚಂದ್ರಮ್ಮ ಕೆಂಪೇಗೌಡ, ಯಲಹಂಕ ನಗರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಈಶ್ವರ್, ಬಿಜೆಪಿ ಮುಖಂಡರಾದ ರಾಜು, ರಘು, ಜಯಪ್ರಕಾಶ್, ಸತೀಶ್, ದೇವರಾಜ್, ದಾನಪ್ಪ, ಕೇಬಲ್ ರಮೇಶ್,ಟ ಪ್ರಭಾ, ಶೋಭಾ, ಲತಾ ಚಂದ್ರಶೇಖರ್, ಸುಗುಣ, ಕಲಾವತಿ ಸೇರಿದಂತೆ ಇನ್ನಿತರರಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthau kogilu layout
Yelahanka Bangalore Karnataka
9845085793
