ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಅಶೋಕನ್ ಅವರ ಜನ್ಮದಿನ :

ಮುಖಂಡರು, ಸ್ನೇಹಿತರು, ಹಿತೈಷಿಗಳು, ಅಭಿಮಾನಿಗಳಿಂದ ಶುಭ ಹಾರೈಕೆ :

ಬೆಂಗಳೂರು : ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರು, ಬ್ಯಾಟರಾಯನಪುರ ಕ್ಷೇತ್ರದ ಹಿರಿಯ ಕಾಂಗ್ರೆಸ್ ಮುಖಂಡರಾದ ‌ಕೆ.ಅಶೋಕನ್ ಅವರ ಜನ್ಮದಿನದ ಪ್ರಯುಕ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಸಮೀಪದ ಅವರ ಫಾರ್ಮ್ ಹೌಸ್ ಬಳಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಶೋಕನ್ ಅವರ ಸ್ನೇಹಿತರು, ಹಲವು ಕಾಂಗ್ರೆಸ್ ಮುಖಂಡರು, ಹಿತೈಷಿಗಳು, ಅಭಿಮಾನಿಗಳು, ಬಂಧುಗಳು ‌ಸೇರಿದಂತೆ ಹಲವರು ಅಶೋಕನ್ ಅವರಿಗೆ ಪುಷ್ಪಮಾಲಿಕೆಯ ಸನ್ಮಾನ ನೀಡಿ, ಕೇಕ್ ಕತ್ತರಿಸಿ, ಅವರಿಗೆ ದೇವರು ಆಯುರಾರೋಗ್ಯ, ಐಶ್ವರ್ಯ, ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನಮಾನ ದೊರೆಯಲೆಂದು ಶುಭ ಹಾರೈಸಿದರು.

ಜನ್ಮದಿನದ ಪ್ರಯುಕ್ತ ಆಗಮಿಸಿದ್ದ ಅತಿಥಿ ಗಳಿಗೆ ಭೂರಿ ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಜನ್ಮದಿನದ ಈ ಶುಭ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ‌ ಮಾಜಿ‌ ಅಧ್ಯಕ್ಷರು, ಯಲಹಂಕ ತಾಲ್ಲೂಕು ‌ಭೂ ನ್ಯಾಯ ಮಂಡಳಿ‌ ಸದಸ್ಯರಾದ ನಾಗರಾಜ್, ಬಾಗಲೂರು ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಡಿ.ಜಗನ್ನಾಥ್, ಹಾಲಿ‌ ಅಧ್ಯಕ್ಷರಾದ ಎ.ಕೆಂಪೇಗೌಡ, ಬಾಗಲೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೆಂಕಟರಾಜು, ಬೆಟ್ಟಹಲಸೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್, ಉಪಾಧ್ಯಕ್ಷ ಬಿ.ಆರ್.ಪ್ರವೀಣ್,ಮೀನುಕುಂಟೆ ಗ್ರಾ.ಪಂ.ಅಧ್ಯಕ್ಷ ವಸಂತ್ ಕುಮಾರ್, ಮಾರೇನಹಳ್ಳಿ ಗ್ರಾ.ಪಂ.ಮಾಜಿ‌ ಅಧ್ಯಕ್ಷ ಪಿ.ರಾಹುಲ್,‌ ಹುಣಸಮಾರನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷರು, ಅಶೋಕನ್ ಅವರ ಸಹೋದರ ಕೆ.ಶರವಣ್ ಕುಮಾರ್,‌ ಬಾಷಾ, ಕಾಂಗ್ರೆಸ್ ಮುಖಂಡರಾದ‌ ಜೈಕುಮಾರ್, ಮೈಲನಹಳ್ಳಿ ರಾಜಕುಮಾರ್, ಖಾದರ್ ಅಲಿ, ತಿರುಮಳಪ್ಪ, ಪ್ರದೀಪ್(ಮುತ್ತು), ಪ್ರಭಾಕರ್, ಸಿ.ಎ.ಶಿವರಾಜ್, ಶಿವು, ಕುದುರಗೆರೆ ಅಶ್ವಥ್, ತರಬನಹಳ್ಳಿ ಸತೀಶ್, ದೇವನಾಥಗೌಡ, ಗೋಪಾಲಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುನಿರಾಜು, ಹಿರಿಯ ಪತ್ರಕರ್ತ ಪ್ರಕಾಶ್ ಬಾಗಲೂರು ಸೇರಿದಂತೆ ಬ್ಯಾಟರಾಯನಪುರ, ದೇವನಹಳ್ಳಿ, ಚಿಕ್ಕಬಳ್ಳಾಪುರ ಕ್ಷೇತ್ರಗಳ ಹಲವು ಗಣ್ಯರಿದ್ದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthau kogilu layout

Yelahanka Bangalore Karnataka

9845085793

Leave a Reply

Your email address will not be published. Required fields are marked *