ಯಲಹಂಕ ದಿನಪತ್ರಿಕೆ ವಿತರಕರ ಸಂಘದಿಂದ 70 ನೇ ಕನ್ನಡ ರಾಜ್ಯೋತ್ಸವ :
ಯಲಹಂಕ : ಯಲಹಂಕ ದಿನಪತ್ರಿಕೆ ವಿತರಕರ‌ ಸಂಘದ ವತಿಯಿಂದ ಯಲಹಂಕ ಮಿನಿ ವಿಧಾನ ಸೌಧದ ಬಳಿಯಿರುವ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಮಹಿಳಾ ಮುಖಂಡರಾದ ಯಶೋಧಾ ಸತೀಶ್ ಅವರು ಉದ್ಘಾಟಿಸಿದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಳಿಗ್ಗೆ ಕನ್ನಡ‌ ಧ್ವಜಾರೋಹಣ ನೆರವೇರಿಸಿ, ಧ್ವಜನಮನ ಸಲ್ಲಿಸಿ, ನಾಡಗೀತೆ ಹಾಡಿದರು. ಯಲಹಂಕ ಎನ್ ಇ ಎಸ್ ವೃತ್ತದಿಂದ ವೀರಾಂಜನೇಯ ಸ್ವಾಮಿ ದೇವಾಲಯದ ವೃತ್ತದವರೆಗೆ ಬೈಕ್ ರ್ಯಾಲಿ ನಡೆಸಿ ಕನ್ನಡ ಜಾಗೃತಿ ಮಂಡಿಸಲಾಯಿತು.
ಕಾರ್ಯಕ್ರಮದಲ್ಲಿ‌ ಮಹಿಳಾ ಮುಖಂಡರಾದ ಮಂಗಳಗೌರಿ, ಯುವ ಮುಖಂಡ ಮುರಳಿ, ದಿನಪತ್ರಿಕೆ ವಿತರಕರ ಸಂಘದ ಅಧ್ಯಕ್ಷ ಶಂಕರ್, ಉಪಾಧ್ಯಕ್ಷ ‌ ವೀರಭದ್ರ ವೈ.ಸಿ., ಸದಸ್ಯರಾದ ಆರಾಧ್ಯ, ಉಮೇಶ್, ವೀರೇಶ್, ಶಶಿ, ಪ್ರದೀಪ್, ಆನಂದ್, ಕುಮಾರ್, ಮುದ್ದುಕುಮಾರ್, ದೇವರಾಜ್, ರಾಜಶೇಖರ್ ನಾಗಾರ್ಜುನ, ಗೌರೀಶ್, ವೀರಣ್ಣ, ಅಶೋಕ್ ಸೇರಿದಂತೆ ಪತ್ರಿಕೆ ಹಾಕುವ ಹುಡುಗರಿದ್ದರು.
ಕಾರ್ಯಕ್ರಮದಲ್ಲಿ ಯಲಹಂಕ ದಿನಪತ್ರಿಕೆ ವಿತರಕರ ಸಂಘದ ಏಳಿಗೆಗೆ ಮತ್ತು ಸಂಘದ ಸದಸ್ಯರ ಶ್ರೇಯೋಭಿವೃದ್ಧಿಗಾಗಿ ಶಾಸಕ ಎಸ್ ಆರ್ ವಿಶ್ವನಾಥ್ ಅವರು ನೀಡಿರುವ ಸಹಕಾರ, ಬೆಂಬಲವನ್ನು ವಿತರಕರ ಸಂಘದ ಪದಾಧಿಕಾರಿಗಳು, ಸದಸ್ಯರು ಸ್ಮರಿಸಿದರು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthau kogilu layout

Yelahanka Bangalore Karnataka

7349337989

Leave a Reply

Your email address will not be published. Required fields are marked *