ಚೌಡೇಶ್ವರಿ ವಾರ್ಡ್ ಹೆಸರು ಬದಲಾವಣೆಗೆ ವಿರೋಧ :
ಸ್ಥಳೀಯ ಮುಖಂಡರು, ನಿವಾಸಿಗಳಿಂದ ಪ್ರತಿಭಟನೆ, ಜನಾಕ್ರೋಶ‌ :
ಯಲಹಂಕ : ಯಲಹಂಕ ನಗರ ವ್ಯಾಪ್ತಿಯ ಚೌಡೇಶ್ವರಿ ವಾರ್ಡ್ ನ ಹೆಸರು ಬದಲಾವಣೆ ಮಾಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ವಿರೋಧಿಸಿ ವಾರ್ಡ್ ವ್ಯಾಪ್ತಿಯ ನಿವಾಸಿಗಳು, ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಚೌಡೇಶ್ವರಿ ದೇವಾಲಯದ‌ ಮುಂದೆ ಪ್ರತಿಭಟನೆ ನಡೆಸಿ, ಚೌಡೇಶ್ವರಿ ವಾರ್ಡ್ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾಯಿಸದೆ, ಯಥಾ‌ ಸ್ಥಿತಿ ಕಾಪಾಡಬಬೇಕೆಂದು ಆಗ್ರಹಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿವಿಧ ಘೋಷಣೆಗಳನ್ನು ‌ಕೂಗಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಚೌಡೇಶ್ವರಿ ದೇವಿ ನಮ್ಮ ಧಾರ್ಮಿಕ‌ ಅಸ್ಮಿತೆ, ವಾರ್ಡ್ ವ್ಯಾಪ್ತಿಯಲ್ಲಿ ಚೌಡೇಶ್ವರಿ ದೇವಾಲಯ, ಕಲ್ಯಾಣ ಮಂಟಪ‌ ಸೇರಿದಂತೆ ಚೌಡೇಶ್ವರಿ ದೇವಿಯ ಕುರುಹುಗಳಿರುವ ಹಲವು ಹೆಗ್ಗುರುತುಗಳಿವೆ. 2008ರಲ್ಲಿ ಈ ವಾರ್ಡ್ ಗೆ ಚೌಡೇಶ್ವರಿ ವಾರ್ಡ್ ಎಂಬ ಹೆಸರಿಡುವ ಮುನ್ನ‌ ಶಾಸಕ ಎಸ್‌ ಆರ್ ವಿಶ್ವನಾಥ್ ಅವರು ಸ್ಥಳೀಯ ಮುಖಂಡರೊಂದಿಗೆ ಚರ್ಚೆ ನಡೆಸಿ, ಮೇಲಿನ‌ ಎಲ್ಲಾ ಅಂಶಗಳನ್ನು ಅವಲೋಕಿಸಿಯೇ‌ ಚೌಡೇಶ್ವರಿ ವಾರ್ಡ್ ಎಂಬ ಹರಸರಿಡಲು‌ ಸೂಚಿಸಿದ್ದರು. ಆದರೆ ಚೌಡೇಶ್ವರಿ ದೇವಿಯ ಹೆಸರಲ್ಲಿದ್ದ ವಾರ್ಡ್ ನ ಹೆಸರನ್ನು ಬದಲಾವಣೆ ಮಾಡುವ ಮನಸ್ಸು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹೇಗೆ ಬಂದಿತೋ ತಿಳಿಯದು. ಅಥವಾ ಸ್ಥಳೀಯ ಕಾಂಗ್ರೆಸ್ ಮುಖಂಡರು ಈ ವಿಷಯದಲ್ಲಿ ರಾಜಕೀಯ ಬೆರೆಸಿ ಸರ್ಕಾರದ ದಾರಿ ತಪ್ಪಿಸಿರಲೂ ಬಹುದು. ಆದರೆ ನಮ್ಮ ಧಾರ್ಮಿಕ‌ ಅಸ್ಮಿತೆಯನ್ನು ಅವಮಾನಿಸಿರುವ ಯಾರನ್ನೇ ಆಗಲಿ ಚೌಡೇಶ್ವರಿ ದೇವಿ ಶಿಕ್ಷಿಸದೇ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಚೌಡೇಶ್ವರಿ ವಾರ್ಡ್ ಬಿಜೆಪಿ ಅಧ್ಯಕ್ಷ ವಿ.ವಿ.ರಾಮಮೂರ್ತಿ, ಹಿರಿಯ ಬಿಜೆಪಿ ಮುಖಂಡರಾದ ಎ.ಎಸ್.ರಾಜ, ಜಿ.ಈಶ್ವರಪ್ಪ, ಆರ್.ಶ್ರೀನಿವಾಸಲು, ಬಿಜೆಪಿ ಮುಖಂಡರಾದ ಮುನಿರಾಜು, ಗೋಪಾಲಕೃಷ್ಣ, ಮೋಹನ್ ಕುಮಾರ್, ಭತರ್ ಕುಮಾರ್, ಶ್ರೀನಿವಾಸ್(ಬ್ರಿಟಿಷ್), ಚಿನ್ನಸ್ವಾಮಿ, ದಾಮೋದರ್, ಧನಂಜಯ(ಧನು), ಗಿರೀಶ್, ಯಲಹಂಕ ನಗರ ಮಂಡಲ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ರಮಾ ಮುನಿರಾಜು, ಜಮುನಾ, ನಾಗರತ್ನ, ಎಸ್.ಟಿ.ಮೋರ್ಚಾದ ನಾಗರಾಜ್, ಪರಶುರಾಮ್, ಬಿ.ಎಲ್. ಸೂರಿ, ಬಿ.ಸಿ.ಮಂಜುನಾಥ್, ಮಗ್ಗಂ ಸೀನು ಸೇರಿದಂತೆ ಚೌಡೇಶ್ವರಿ ವಾರ್ಡ್ ನ ಬಿಜೆಪಿ ಮುಖಂಡರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಚೌಡೇಶ್ವರಿ ವಾರ್ಡ್ ನ ನಿವಾಸಿಗಳಿದ್ದರು

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthau kogilu layout

Yelahanka Bangalore Karnataka

9845085793

Leave a Reply

Your email address will not be published. Required fields are marked *