ಗ್ರಾಮೀಣ ಕ್ರಿಕೆಟ್ ಗೆ ಐಪಿಎಲ್ ಟಚ್ :
ನವರತ್ನ ಅಗ್ರಹಾರ ಗ್ರಾಮಸ್ಥರಿಂದ ರಾಜ್ಯದಲ್ಲೇ ಮಾದರಿ ಕ್ರಿಕೆಟ್ ಪಂದ್ಯಾವಳಿ :
ಬ್ಯಾಟರಾಯನಪುರ : ಗ್ರಾಮೀಣ ಯುವಕರಿಗೆ ಕ್ರೀಡಾ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಬ್ಯಾಟರಾಯನಪುರ ಕ್ಷೇತ್ರದ ನವರತ್ನ ಅಗ್ರಹಾರ ಗ್ರಾಮಸ್ಥರು ಗ್ರಾಮೀಣ ಕ್ರಿಕೆಟ್ ಅನ್ನು ಐಪಿಎಲ್ ರೀತಿಯಲ್ಲಿ ಆಯೋಜಿಸುವ ಮೂಲಕ ರಾಜ್ಯದಲ್ಲೇ ಮಾದರಿ ಎನಿಸಿದ್ದಾರೆ.
ಐಪಿಎಲ್ ಮಾದರಿಯಲ್ಲಿ ಎನ್.ಪಿ.ಎಲ್. ಎಂಬ ಶೀರ್ಷಿಕೆಯಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿರುವ ಆಯೋಜಕರು ಗ್ರಾಮದ ಪ್ರತಿಯಬ್ಬ ಕ್ರಿಕೆಟ್ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ಕೊಡುವ ದಿಸೆಯಲ್ಲಿ ನವರತ್ನ ಲೆಜೆಂಡ್ಸ್(ರಮೇಶ್), ನವರತ್ನ ಲಯನ್ಸ್(ಶ್ರೀನಿವಾಸ್ ಸಿ.,), ನವರತ್ನ ಟೈಗರ್ಸ್(ಶ್ರೀನಿವಾಸ್ ಎಂ., ನವರತ್ನ ಈಗಲ್ಸ್ (ಗೋವಿಂದರಾಜು,ವೆಂಕಟೇಶ್), ನವರತ್ನ ಕಿಂಗ್ ಫೈಟರ್ಸ್(ನರಸಿಂಹಯ್ಯ,, ನವರತ್ನ ಡ್ರ್ಯಾಗನ್ಸ್(ಜನಾರ್ಧನ್) ಎಂಬ ನುರಿತ ಕ್ರಿಕೆಟ್‌ ಆಟಗಾರರನ್ನು‌‌ ಒಳಗೊಂಡು ಆರು ತಂಡಗಳಿದ್ದು, ತಂಡಗಳ ಮಾಲೀಕರು ಪ್ರತಿ ಆಟಗಾರರನ್ನು ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಲಾಗುತ್ತದೆ.
ಭಾನುವಾರ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸುಮಾರು 60 ಆಟಗಾರನ್ನು ತಂಡಗಳ ಮಾಲೀಕರು ಬಿಡ್ ಮೂಲಕ ಖರೀದಿಸಿದರು, ಆಟಗಾರರ ಕ್ರೀಡಾ ಅನುಭವ ಮತ್ತು ಆಟದ ಶೈಲಿಯ ‌ಆಧಾರದ ಮೇಲೆ‌ ಆಟಗಾರರನ್ನು ಮೂವತ್ತು ಸಾವಿರದಿಂದ ಐದು ಸಾವಿರದವರೆಗೆ ಬಿಡ್ ಮೂಲಕ‌ ಖರೀದಿಸಿದರು.
ಇದೇ ವೇಳೆ ನವರತ್ನ ಪ್ರಿಮಿಯರ್ ಲೀಗ್(ಎನ್ ಪಿ ಎಲ್ 2025-26) ಆಯೋಜಕ‌ ಮಂಡಳಿಯ ಜರ್ಸಿ ಬಿಡುಗಡೆ ಮಾಡಲಾಯಿತು.
ಈ ವೇಳೆ ಜಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ನವರತ್ನ ಪ್ರಿಮಿಯರ್ ಲೀಗ್(ಎನ್ ಪಿ ಎಲ್ 2025-26) ಆಯೋಜಕ ಮಂಡಳಿಯ ಮುಖ್ಯ ಸಂಚಾಲಕರಾದ ಎನ್.ಕೆ.ಮಹೇಶ್ ಕುಮಾರ್ ಮಾತನಾಡಿ ‘ನವರತ್ನ ಪ್ರಿಮಿಯರ್ ಲೀಗ್(ಎನ್ ಪಿ ಎಲ್) ನಡೆಸುತ್ತಿರುವ ನಾಲ್ಕನೆಯ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿ ಇದಾಗಿದ್ದು, ಕಳೆದ ಮೂರು ಆವೃತ್ತಿಗಳನ್ನು ಅತ್ಯಂತ ಯಶಸ್ವಿಯಾಗಿ ಪೂರೈಸುವ ಮೂಲ ರಾಜ್ಯದಲ್ಲೇ ಗ್ರಾಮೀಣ ಕ್ರಿಕೆಟ್ ಗೆ ಐಪಿಎಲ್ ಸ್ಪರ್ಷ ನೀಡಿರುವ ಮೊದಲಿಗರು ಎಂಬ ಹೆಗ್ಗಳಿಕೆಗೆ ನವರತ್ನ ಅಗ್ರಹಾರ ಗ್ರಾಮಸ್ಥರು ಪಾತ್ರರಾಗಿದ್ದಾರೆ. ನಮ್ಮದೇ ಗ್ರಾಮದ ಕ್ರಿಕೆಟ್ ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು ಮತ್ತು ಕ್ರೀಡಾ ಪ್ರೋತ್ಸಾಹ ನೀಡುವುದು ಎನ್.ಪಿ.ಎಲ್.ಕಪ್ ಪಂದ್ಯಾವಳಿಯ ಪ್ರಮುಖ ಧ್ಯೇಯವಾಗಿದ್ದು, ಜನವರಿ 17, 18ಕ್ಕೆ ಪಂದ್ಯಾವಳಿ ನಡೆಸಲು ಯೋಜನೆ ರೂಪಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕ್ರಿಕೆಟ್ ತರಬೇತುದಾರರಾದ ನಾರಾಯಣಸ್ವಾಮಿ, ಪ್ರಕಾಶ್, ಚಂದ್ರಶೇಖರ್, ಪವನ್, ಎಸ್.ಎಲ್.ಆರ್., ಶುಶ್ರುತ್ ಎನ್., ತಂಡಗಳ ನಾಯಕರಾದ ಸುಬ್ರಮಣಿ, ಚೇತನ್, ಕೇಶವ, ಶರತ್, ಪ್ರದೀಪ್(ಮುತ್ತು), ಆಕಾಶ್, ಗ್ರಾಮದ ಮುಖಂಡರಾದ ಚನ್ನಕೇಶವ, ಚಂದ್ರಪ್ಪ, ರಾಜು ಎಂ.ಡಿ., ಮುನಿಕೃಷ್ಣ, ನಾರಾಯಣಸ್ವಾಮಿ(ಅಪ್ಪಿ), ಸತೀಶ್(ರಾಕಿ), ಮಂಜುನಾಥ್, ರಾಜೇಶ್ ಜಿ.ವಿ., ಮುನಿಯಪ್ಪ, ಸಂತೋಷ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *