ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಜಾನುವಾರು ಬಿಡದಂತೆ ಸೂಚನೆ
::*
ಹುಬ್ಬಳ್ಳಿ :- ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ನಗರದ ರಸ್ತೆಗಳು, ವೃತ್ತಗಳು, ಆಟದ ಮೈದಾನ, ಮಾರುಕಟ್ಟೆ, ಉದ್ಯಾನವನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಿಡಾಡಿ ಜಾನುವಾರುಗಳಾದ ದನ, ಎಮ್ಮೆ, ಕರು, ಹೆಚ್ಚಾಗಿ ಬಿಡಲಾಗುತ್ತಿದೆ. ಜಾನುವಾರು ಹಾಗೂ ಹಂದಿಗಳಿAದ ಪಾದಚಾರಿಗಳು, ಮಕ್ಕಳು, ವೃದ್ಧರು, ವಾಹನ ಚಾಲಕರು ಮತ್ತು ವ್ಯಾಪಾರಸ್ಥರಿಗೆ ಈಗಾಗಲೇ ಸಾಕಷ್ಟು ಅನಾಹುತಗಳು ಸಂಭವಿಸಿರುತ್ತವೆ. ನಿರಂತರವಾಗಿ ಇವುಗಳಿಂದ ಸಾರ್ವಜನಿಕರು ಸಾಕಷ್ಟು ತೊಂದರೆಗಳನು ಅನುಭವಿಸುತ್ತಿದ್ದಾರೆ.
ಈ ಕುರಿತು ಮಹಾನಗರ ಪಾಲಿಕೆಯ ಸಹಾಯವಾಣಿಗೆ ಸಾಕಷ್ಟು ದೂರುಗಳು ಸಹ ಸ್ವೀಕೃತವಾಗಿರುತ್ತವೆ. ಬಿಡಾಡಿ ಜಾನುವಾರುಗಳ ಮಾಲೀಕರು ತಮ್ಮ ತಮ್ಮ ಜಾನುವಾರುಗಳನ್ನು 24 ಗಂಟೆಗಳೊಳಗಾಗಿ ತಮ್ಮ ಸುಪರ್ದಿಗೆ ತೆಗೆದುಕೊಂಡು ಸಾಕಬೇಕು. ಅಲ್ಲದೇ ಹಂದಿಗಳ ಸಾಕಾಣಿಕೆದಾರರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಹಂದಿಗಳನ್ನು ಬಿಡಬಾರದೆಂದು ಸಭೆಯಲ್ಲಿ ಮತ್ತು ದೂರವಾಣಿ ಮೂಲಕ ತಿಳಿಸಾಳಗಿದೆ. ಹಂದಿಗಳ ಸಾಕಾಣಿಕೆ ಮಾಲೀಕರು ಹಂದಿಗಳನ್ನು ಹಿಡಿದು ಶೀಘ್ರದಲ್ಲಿಯೇ ಸ್ಥಳಾಂತರಗೊಳಿಸಬೇಕು. ತಪ್ಪಿದಲ್ಲಿ ರಸ್ತೆಗಳಲ್ಲಿ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿರುವ ಜಾನುವಾರುಗಳನ್ನು ಬಿಡಾಡಿ ಪ್ರಾಣಿಗಳೆಂದು ಪರಿಗಣಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಪಾಲಿಕೆಯಿಂದ ಹಿಡಿದು ವಿವಿಧ ಗೋಶಾಲೆಗೆ ಬಿಡಲಾಗುವುದು. ಸಾರ್ವಜನಿಕ ಹಿತದೃಷ್ಟಿಯಿಂದ 2 ದಿನಗಳಲ್ಲಿ ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮುಖ್ಯ ಪಶುವೈದ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.