ಪರಿಸರ ಸಂರಕ್ಷಣೆಗೆ ನಾಗಾರ್ಜುನ ಕಾಲೇಜಿನ ವಿದ್ಯಾರ್ಥಿಗಳ ಪರಿಶ್ರಮ ದೇವನಹಳ್ಳಿ ತಾಲ್ಲೂಕು ಹುರುಳುಗುರ್ಕಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ನ ಪ್ರಾಂಶುಪಾಲರಾದ ಡಾ. ಎನ್. ಆನಂದಮ್ಮರವರು ಹಾಗೂ ಬೆಟ್ಟಹಲಸೂರು ಡಾ. ಬಿ.ಎಮ್. ಶ್ರೀನಿವಾಸ ಮೂರ್ತಿರವರ ಅನುಪಸ್ಥಿತಿಯಲ್ಲಿ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಹುರಳುಗುರ್ಕಿ ಶಾಲಾ ಮುಖ್ಯ ಶಿಕ್ಷಕಿಯಾದ ಶ್ರೀ ಮಮತಾ.ಬಿ.ರವರ ಅಧ್ಯಕ್ಷತೆಯಲ್ಲಿ ಸಮಾಜ ಸೇವಕರು ಹಾಗೂ ದಾನಿಗಳಾದ ಹಸಿರೇ ಉಸಿರು ಟ್ರಸ್ಟ್ ನ ಅಧ್ಯಕ್ಷರಾದ ಬೆಟ್ಟಹಲಸೂರು ಡಾ. ಬಿ ಎಂ ಶ್ರೀನಿವಾಸಮೂರ್ತಿರವರು ಉಚಿತವಾಗಿ ನೀಡಿದ್ದ ಸಸಿಗಳನ್ನು ಶಾಲಾ ಮಕ್ಕಳಿಗೆ ವಿತರಿಸಿ ನಾಗಾರ್ಜುನ ಕಾಲೇಜಿನ ವಿದ್ಯಾರ್ಥಿಗಳ ಸಹಾಯದಿಂದ ಮನೆಮನೆ ಗಂಗೆ ಎನ್ನುವಂತೆ ಎಲ್ಲಾ ವಿದ್ಯಾರ್ಥಿಗಳ ಮನೆಗಳ ಮುಂಭಾಗದಲ್ಲಿ ಗಿಡಗಳನ್ನು ನೆಟ್ಟು ಪರಿಸರದ ಕಾಳಜಿಯನ್ನು ಮೆರೆದರು. ನಾಗಾರ್ಜುನ ಕಾಲೇಜಿನ ಹಸಿರು ಪಡೆ ವಿದ್ಯಾರ್ಥಿಯಾದ ಸುಚಿತ್ರ ರವರು ಸ್ವಾಗತವನ್ನು ಕೋರಿದರು.ಪರಿಸರದ ಉಳಿವು ಮತ್ತು ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕಾಲೇಜಿನ ಉಪನ್ಯಾಸಕರಾದ ಸತ್ಯನಾರಾಯಣಪ್ಪ ರವರು ತಿಳಿಸಿದರು.ಹಾಗೆಯೇ ಅದೇ ಕಾಲೇಜಿನ ಉಪನ್ಯಾಸಕಿಯಾರಾದ ದುರ್ಗಾ ಮೇಡಂ ರವರು ಮಾತನಾಡಿ ಗಿಡಗಳನ್ನು ನೆಟ್ಟು ಅದರ ಪೋ ಷಣೆಯನ್ನು ನಿರಂತರವಾಗಿ ನಿರ್ವಹಿಸಬೇಕೆಂದು ತಿಳಿಸಿದರು.ಉತ್ತಮ ಪರಿಸರ,ಉತ್ತಮವಾದ ಆರೋಗ್ಯಕ್ಕೆ ಸುಗಮದ ಹಾದಿ ಎಂದು ಮುಖ್ಯ ಶಿಕ್ಷಕಿಯವರು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು,ರಕ್ಷಣಾ ವೇದಿಕೆಯ ಲೋಕೇಶ್ ರವರು,ನಾಗಣ್ಣ ರವರು, ರಾಮಚಂದ್ರಪ್ಪನವರು, ಈರೇಗೌಡರವರು, ಕಾಲೇಜಿನ ಉಪನ್ಯಾಸಕರುಗಳು ಶಾಲಾ ಶಿಕ್ಷಕಿಯರು ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪರಿಸರ ಪಡೆಯ ವಿದ್ಯಾರ್ಥಿಗಳಾದ ನಿತಿನ್ ಮತ್ತು ಸುಚಿತ್ರ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.