2.45 ಕೋಟಿ ರು.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಎಸ್.ಆರ್.ವಿಶ್ವನಾಥ್ ಚಾಲನೆ :
ಯಲಹಂಕ : ಕ್ಷೇತ್ರದ ರಾಜಾನುಕುಂಟೆ ಗ್ರಾ.ಪಂ‌.ವ್ಯಾಪ್ತಿಯ ಸಾದೇನಹಳ್ಳಿ, ಅರಕೆರೆ ಗ್ರಾ.ಪಂ.ವ್ಯಾಪ್ತಿಯ ಸುರಧೇನುಪುರ, ಸೊಣ್ಣೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಕಾರ್ಲಾಪುರಪಾಳ್ಯ ಮತ್ತು ಸೀರೇಸಂದ್ರ, ಶಿವಕೋಟೆ ಗ್ರಾ‌.ಪಂ.ವ್ಯಾಪ್ತಿಯ ಮತ್ಕೂರು, ಸೀತಕೆಂಪನಹಳ್ಳಿ, ಲಿಂಗನಹಳ್ಳಿ, ಸಿಂಗನಾಯಕನಹಳ್ಳಿ ಗ್ರಾ.ಪಂ‌.ವ್ಯಾಪ್ತಿಯ ಮೈಲಪ್ಪನಹಳ್ಳಿ ಗ್ರಾಮಗಳಲ್ಲಿ ರಸ್ತೆ, ಒಳಚರಂಡಿ, ಸಮುದಾಯಭವನ, ಅಂಗನವಾಡಿ ಕೇಂದ್ರ, ಕೆರೆ ಅಭಿವೃದ್ಧಿ ಸೇರಿದಂತೆ ಸುಮಾರು 2.45 ಕೋಟಿ ರು.ಅಂದಾಜು ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಬುಧವಾರ ಭೂಮಿಪೂಜೆ ಮತ್ತು ಉದ್ಘಾಟನೆ ನೆರೆವೇರಿಸಿದರು.
ನಂತರ ಮಾತನಾಡಿದ ಅವರು ‘ಅನುದಾನದ ಕೊರತೆಯ ನಡುವೆಯೂ ಕ್ಷೇತ್ರದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ವಿಶೇಷವಾಗಿ ರಸ್ತೆ ಅಭಿವೃದ್ಧಿ ಕಾರ್ಯದ ವೇಳೆಯಲ್ಲಿ ಗ್ರಾಮಸ್ಥರು ಸ್ವಲ್ಪ ಉದಾರತೆಯನ್ನು ತೋರಿ, ರಸ್ತೆ ಅಗಲೀಕರಣಕ್ಕೆ ಅಗತ್ಯವಿರುವ ಜಾಗವನ್ನು ಬಿಟ್ಠುಕೊಡಬೇಕು. ರಸ್ತೆಗಳು ಅಗಲವಾಗಿದ್ದರೆ ಸುಗಮ ಸಂಚಾರಕ್ಕೆ ಸಹಕಾರಿ ಆಗುವುದರ ಜೊತೆಗೆ ನಿಮ್ಮ ಭೂಮಿಗೆ ಹೆಚ್ಚಿನ ಬೆಲೆ ಬರುತ್ತದೆ. ಒಮ್ಮೆ ರಸ್ತೆ ಅಭಿವೃದ್ಧಿಯಾದ ಮೇಲೆ ಅದನ್ನು ಅಗಲೀಕರಣ ಮಾಡುವುದು ಕಷ್ಟಸಾಧ್ಯವಾಗುತ್ತದೆ ಈ ದಿಸೆಯಲ್ಲಿ ಗ್ತಾಮಸ್ಥರು ರಸ್ತೆಗಳ ಅಗಲೀಕರಣಕ್ಕೆ ಸಹಕರಿಸಬೇಕು. ಇಂದು ಯಲಹಂಕ ಕ್ಷೇತ್ರ ವ್ಯಾಪ್ತಿಯ ರಾಜಾನುಕುಂಟೆ, ಅರಕೆರೆ, ಸೊಣ್ಣೇನಹಳ್ಳಿ, ಶಿವಕೋಟೆ ಮತ್ತು ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ರಸ್ತೆ, ಚರಂಡಿ, ಸಮುದಾಯ ಭವನ ಮತ್ತು ಅಂಗನವಾಡಿ ಕೇಂದ್ರ ಸೇರಿದಂತೆ ವಿವಿದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದ್ದು, ನಿಗದಿತ ಕಾಲಮಿತಿಯ ಒಳಗೆ ಕಾಮಗಾರಿಗಳನ್ನು ಗುಣಮಟ್ಟ ಸಹಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಡಿ.ಜಿ.ಅಪ್ಪಯ್ಯಣ್ಣ, ಚೊಕ್ಕನಹಳ್ಳಿ ವೆಂಕಟೇಶ್, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ‌ಪ್ರಧಾನ ಕಾರ್ಯದರ್ಶಿ ವಿಶ್ವನಾಥಪುರ ಮಂಜುನಾಥ್, ರೈತಮೋರ್ಚಾ ರಾಜ್ಯ ಕಾರ್ಯದರ್ಶಿ, ಬಮೂಲ್ ನಿರ್ದೇಶಕ ಸತೀಶ್ ಕಡತನಮಲೆ, ಗ್ರಾ.ಪಂ.ಮಾಜಿ‌ ಅಧ್ಯಕ್ಷರಾದ ಟಿ.ಮುನಿರೆಡ್ಡಿ, ಎಸ್‌.ಜಿ.ನರಸಿಂಹ ಮೂರ್ತಿ(ಎಸ್.ಟಿ.ಡಿ.), ಹೆಸರಘಟ್ಟ ಹೋಬಳಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಪ್ರಶಾಂತ್ ರೆಡ್ಡಿ, ಉಪಾಧ್ಯಕ್ಷ ಇಟಗಲ್ ಪುರ ಮೋಹನ್, ರೈತ ಮೋರ್ಚಾ ಗ್ರಾಮಾಂತರ ಮಂಡಲ ಅಧ್ಯಕ್ಷ ಎಚ್.ಸಿ‌.ರಾಜೇಶ್, ಬಿಜೆಪಿ ಮುಖಂಡರಾದ ಕಾಕೋಳು ಸುರೇಶ್, ಸೀತಕೆಂಪನಹಳ್ಳಿ ಚಂದ್ರಶೇಖರ್, ಲಿಂಗನಹಳ್ಳಿ ವೆಂಕಟೇಶ್, ಕಾರ್ಲಾಪುರ ಪಾಳ್ಯ ಶಿವಣ್ಣ, ಮೈಲಪ್ಪನಹಳ್ಳಿ ಹರೀಶ್, ಗೋಪಾಲ್, ಗ್ರಾ.ಪಂ. ಅಧ್ಯಕ್ಷರಾದ ಅಮರಾವತಮ್ಮ, ಹೇಮಲತಾ ವೇಣು, ಎಚ್.ಸಂಜೀವಯ್ಯ, ಯುವ ಮುಖಂಡರಾದ ಎಚ್.ಎಸ್.ಕಿರಣ್, ಬ್ಯಾಲಕೆರೆ ಪತಿಗೌಡ, ನವೀನ್(ತಂಬಿ), ಸೀತಕೆಂಪನಹಳ್ಳಿ ಯತೀಶ್, ಮಹೇಶ್, ತಿಮ್ಮೇಗೌಡ, ರಾಮಾಂಜಿನಪ್ಪ, ಸಾದೇನಹಳ್ಳಿ ಪ್ರಕಾಶ್ ಗೌಡ,  ಸೇರಿದಂತೆ ಗ್ರಾ.ಪಂ.ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರಿದ್ದರು.

Leave a Reply

Your email address will not be published. Required fields are marked *