ಅಂಕಾಲಮೊಡಗು ಪಂಚಾಯಿತಿಯಲ್ಲಿ ಬೇನಾಮಿ ಹೆಸರಿಗೆ ಸರಕಾರಿ ಸೌಲತ್ತು

ದುರುದ್ದೇಶದಿಂದ ಮೂಲ ನಿವಾಸಿಗಳಿಗೆ ಸೌಲಭ್ಯಗಳಿಂದ ವಂಚನೆ: ಅಂಕಾಲಮೊಡಗು ಭಾಸ್ಕರ್

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕು ಕಡದನಮರಿ ಪಂಚಾಯಿತಿಯಲ್ಲಿ ಹರ್‌ಘರ್ ಜಲ್ ನೀರು ಸಂಪರ್ಕದ ಚಂದಾದಾರರ ಪಟ್ಟಿಯಲ್ಲಿ ಅನಿವಾಸಿಗಳ ಅಕ್ರಮ ಸೇರ್ಪಡೆ ಮೂಲಕ ೧೪,೧೫ನೇ ಹಣಕಾಸು ಆಯೋಗದ ಅನುದಾನವನ್ನು ಅಧಿಕಾರಿಗಳು ದುರ್ಭಳಕೆ ಮಾಡಿಕೊಂಡಿದ್ದಾರೆ. ಇದರ ಹಿಂದೆ ಯಾವುದೋ ದುಷ್ಟಾಲೋಚನೆ ಇದೆ ಎಂದು ಸಾಮಾಜಿಕ ಹೋರಾಟಗಾರ ಭಾಸ್ಕರ್ ಅಂಕಾಲಮೊಡಗು ಶಿವಾರೆಡ್ಡಿ ಆರೋಪಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ನಮ್ಮ ಪಂಚಾಯಿತಿಯಲ್ಲಿ ಜಲಜೀವನ ಮಿಷನ್ ಮತ್ತು ಎಂ.ಜಿ.ನರೇಗಾ , ಪಂಚಾಯತ್‌ರಾಜ್, ಗ್ರಾಮೀಣ ಅನುದಾನಗಳ ಅಕ್ರಮ ದುರುಪಯೋಗವಾಗಿದೆ.ಈ ಬಗ್ಗೆ ಮಾಹಿತಿ ಕೋರಿ ರ‍್ಟಿಇ ಮೂಲಕ ಅರ್ಜಿ ಸಲ್ಲಿಸಿದರೆ ನಾವು ಕೇಳಿರುವ ಮಾಹಿತಿ ಬಿಟ್ಟು ಬೇರೆಯದೇ ಮಾಹಿತಿ ನೀಡುವ ಮೂಲಕ ಅಧಿಕಾರಿಗಳು ಅಕ್ರಮ ನಡೆಸುವವರ ಪರ ವಹಿಸಿರುವುದು ಸ್ಪಷ್ಟವಾಗಿದೆ.ಹೀಗಾಗಿ ಸಂಬoಧಪಟ್ಟ ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ಕಡದನಮರಿ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಆಡಳಿತಾತ್ಮಕ ಅವ್ಯವಸ್ಥೆ, ಪಾರದರ್ಶಕತೆಯ ಕೊರತೆ, ಸಾರ್ವಜನಿಕ ನಿಧಿಗಳ ದುರ್ಭಳಕೆ ಕುರಿತು ಮಾಧ್ಯಮದ ಮೂಲಕ ಅಧಿಕಾರಿಗಳ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದೇನೆ ಎಂದರು.
ಸಾರ್ವಜನಿಕ ನಿಧಿಗಳ ದುರ್ಭಳಕೆ , ನಿಧಿಗಳ ಪ್ರಮಾಣ, ಹಂಚಿಕೆಯ ವಿಧಾನ, ಇದರಿಂದಾಗಿ ಗ್ರಾಮೀಣ ಅಭಿವೃದ್ದಿಯ ಮೇಲೆ ಆಗುವ ಪರಿಣಾಮ, ಸಾರ್ವಜನಿಕ ಸುರಕ್ಷತೆ ಮತ್ತು ಸಂಸ್ಥೆಗಳ ನೈತಿಕತೆಗೆ ಸಂಬಈಧಿಸಿದoತೆ ಈ ಪ್ರಶ್ನೆಗಳನ್ನು ಎತ್ತುವುದು ನಾಗರೀಕರ ಮತ್ತು ಮಾಧ್ಯಮದ ಜವಾಬ್ದಾರಿಯಾಗಿದೆ.ಹೀಗಾಗಿ ಕಡದನಮರಿ ಗ್ರಾಮಪಂಚಾಯಿತಿ ಅಕ್ರಮಗಳ ಬಗ್ಗೆ ಧನಿ ಎತ್ತಿದರೆ ನನ್ನ ಮೇಲೆ ಹಲ್ಲೆ ಮಾಡಲು ಬರುತ್ತಾರೆ ಎಂದು ಹೇಳಿದರು.

Leave a Reply

Your email address will not be published. Required fields are marked *