
















ಹೊಸ ವರ್ಷದ ಪ್ರಯುಕ್ತ ಶ್ರೀ ವೀರಾಂಜನೇಯಸ್ವಾಮಿಗೆ ವಿಶೇಷ ಪೂಜೆ :
ಯಲಹಂಕ : ಹೊಸ ವರ್ಷದ ಪ್ರಯುಕ್ತ ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿಯ ಶ್ರೀ ವೀರಾಂಜನೇಯಸ್ವಾಮಿ ದೇಗುಲದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಅವರ ನೇತೃತ್ವದಲ್ಲಿ ಸಿಂಗನಾಯಕನಹಳ್ಳಿ ಗ್ರಾಮದ ಹಿರಿಯ ಬಿಜೆಪಿ ಮುಖಂಡರಾದ ಡೊಮಿನೋಸ್ ರಾಜಣ್ಣ ಅವರ ಕುಟುಂಬದ ಸೇವಾರ್ಥವಾಗಿ ಶ್ರೀ ವೀರಾಂಜನೇಯಸ್ವಾಮಿ ಗೆ ವಿಶೇಷ ಪೂಜೆ ನೆರವೇರಿಸಿ, ಸಮಸ್ತರಿಗೆ ಶುಭವಾಗಲೆಂದು ಕೋರಿಕೊಳ್ಳಲಾಯಿತು.
ಹೊಸ ವರ್ಷದ ವಿಶೇಷ ಪೂಜೆಯ ಅಂಗವಾಗಿ ತೀರ್ಥ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಮುಂತಾದ ಸೇವಾ ಕಾರ್ಯಗಳನ್ನು ನೆರವೇರಿಸಲಾಯಿತು.
ದೈವ ಸೇವೆಯ ಈ ಮಹತ್ಕಾರ್ಯ ದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಚೊಕ್ಕನಹಳ್ಳಿ ವೆಂಕಟೇಶ್, ಡೊಮಿನೋಸ್ ರಾಜಣ್ಣ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಶ್ವನಾಥಪುರ ಮಂಜುನಾಥ್, ಡೊಮಿನೋಸ್ ರಾಜಣ್ಣ ಅವರ ಪುತ್ರ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಉಪಾಧ್ಯಕ್ಷ ಆರ್.ಕೆ.ಶ್ರೇಯಸ್ ರಾಜ್, ಹೆಸರಘಟ್ಟ ಹೋಬಳಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಸ್.ಜಿ .ಪ್ರಶಾಂತ್ ರೆಡ್ಡಿ, ಯಲಹಂಕ ನಗರ ಮಂಡಲ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಮಾಜಿ ಅಧ್ಯಕ್ಷ ಮಧುಸೂದನ್, ಜಿಬಿಎ ಬೆಂಗಳೂರು ಉತ್ತರ ವಲಯದ ಮುಖ್ಯ ಅಭಿಯಂಯರ ಸುಧಾಕರ್ ರೆಡ್ಡಿ, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಮಸಂಜೀವಯ್ಯ, ಸಿಂಗನಾಯಕನಹಳ್ಳಿ ಶ್ರೀ ವೀರಾಂಜನೇಯ ದೇವಾಲಯದ ಪ್ರಧಾನ ಅರ್ಚಕ ಶ್ರೀ ಶೈಲಮೂರ್ತಿ ಸೇರಿದಂತೆ ಹಲವು ಮುಖಂಡರು, ಗ್ರಾಮಸ್ಥರಿದ್ದರು.
