










ಬ್ಯಾಟರಾಯನಪುರ : ಕ್ಷೇತ್ರದ ದೊಡ್ಡಜಾಲ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಶೆಟ್ಟಿಗೆರೆ ಗ್ರಾಮದ ಚೇತನ್ ಎಂ. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದೊಡ್ಡಜಾಲ ಗ್ರಾ.ಪಂ.ಯಲ್ಲಿ ಒಟ್ಟು 14 ಮಂದಿ ಸದಸ್ಯರಿದ್ದು, ಅಧ್ಯಕ್ಷರಾಗಿದ್ದ ಎ.ನಾಗರಾಜ್ ಅವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ನಡೆದ ಅಧ್ಯಕ್ಷರ ಆಯ್ಕೆ ಚುನಾವಣಾ ಪ್ರಕ್ರಿಯೆಯಲ್ಲಿ ಚೇತನ್ ಎಂ. ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷರನ್ನು ಹಲವು ಮುಖಂಡರು, ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು ಸನ್ಮಾನಿಸಿ ಅಭಿನಂದಿಸಿದರು.
ಈ ವೇಳೆ ನೂತನ ಅಧ್ಯಕ್ಷ ಚೇತನ್ ಎಂ. ಅವರು ಮಾತನಾಡಿ ‘ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲು ಅಮೂಲ್ಯವಾದ ಬೆಂಬಲ ನೀಡಿ ಸಹಕರಿಸಿರುವ ಮಾಜಿ ಅಧ್ಯಕ್ಷರಾದ ಎನ್.ಕೆ.ಮಹೇಶ್ ಕುಮಾರ್ ಹಾಗೂ ಎಲ್ಲಾ ಸದಸ್ಯರಿಗೂ ಧನ್ಯವಾದಗಳು. ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರ ಮಾರ್ಗದರ್ಶನದಲ್ಲಿ, ಎಲ್ಲಾ ಸದಸ್ಯರ ವಿಶ್ವಾಸದೊಂದಿಗೆ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳ ಪ್ರಗತಿಗೆ ಶ್ರಮಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಮಾಲಾ ಎಂ., ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಎನ್.ಕೆ.ಮಹೇಶ್ ಕುಮಾರ್, ಆರ್.ಬೈರೇಗೌಡ, ಎ.ನಾಗರಾಜ್, ಹಂಸವೇಣಿ ಮಂಜುನಾಥ್, ಗೌರಮ್ಮ ಕೃಷ್ಣಪ್ಪ, ಸದಸ್ಯರಾದ ನರಸಿಂಹಯ್ಯ ಎಂ., ಪ್ರಕಾಶ್ ಎಸ್., ಎಂ.ಹರಿಪ್ರಕಾಶ್,ಗೀತಾ ವಿ.ಶಂಕರ್, ಸೌಭಾಗ್ಯಮ್ಮ ಎನ್., ರತ್ನಮ್ಮ, ಶೃತಿ, ಕಾಂಗ್ರೆಸ್ ಮುಖಂಡರಾದ ಜೈಕುಮಾರ್, ಮಧುಗೌಡ, ಮೀಸಗಾನಹಳ್ಳಿ ನಾರಾಯಣಗೌಡ, ಬಿ.ಎಂ.ನಾಗೇಶ್, ಬಿ.ಆರ್.ಪ್ರವೀಣ್, ಪಿ.ರಾಹುಲ್, ಪ್ರದೀಪ್(ಮುತ್ತು), ಶಿವರಾಜ್ ಸಿ.ಎ.,ಶೆಟ್ಟಿಗೆರೆ ಸುಬ್ರಮಣಿ ಸೇರಿದಂತೆ ಇನ್ನಿತರರಿದ್ದರು.
