

















ಶಾಸಕ ಎಸ್ ಆರ್ ವಿಶ್ವನಾಥ್, ಹಲವು ಗಣ್ಯರು, ಸ್ನೇಹಿತರು, ಹಿತೈಷಿಗಳಿಂದ ಶುಭ ಹಾರೈಕೆ :
ಯಲಹಂಕ : ಚೌಡೇಶ್ವರಿ ದೇಗುಲ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅನ್ನ ಸಂತರ್ಪಣೆ, ಬಡವರಿಗೆ ನೆರವು ಕಾರ್ಯ ಸೇರಿದಂತೆ ಹಲವು ಸೇವಾ ಕಾರ್ಯಗಳ ಮೂಲಕ ಯಲಹಂಕ ನಗರ ವ್ಯಾಪ್ತಿಯ ಚೌಡೇಶ್ವರಿ ವಾರ್ಡ್ 3ರ ಬಿಜೆಪಿ ಅಧ್ಯಕ್ಷ ವಿ.ವಿ.ರಾಮಮೂರ್ತಿ ಅವರ ಜನ್ಮದಿನಾಚರಣೆಯನ್ನು ಭಾನುವಾರ ಸಾರ್ಥಕ ರೀತಿಯಲ್ಲಿ ಆಚರಿಸಲಾಯಿತು.
ಜನ್ಮದಿನದ ಪ್ರಯುಕ್ತ ಬೆಳಿಗ್ಗೆ ಶಾಸಕ ಎಸ್ ಆರ್ ವಿಶ್ವನಾಥ್ ಅವರನ್ನು ಭೇಟಿ ಮಾಡಿ, ಅವರ ಆಶೀರ್ವಾದ ಪಡೆದರು. ಇದೇ ವೇಳೆ ಶಾಸಕರು ವಿ.ವಿ.ರಾಮಮೂರ್ತಿ ಅವರಿಗೆ ಸನ್ಮಾನಿಸಿ, ಜನ್ಮದಿನದ ಶುಭ ಹಾರೈಸಿ, ಹರಸಿದರು.
ನಂತರ ಚೌಡೇಶ್ವರಿ ವಾರ್ಡ್ ನ ಪೌರ ಕಾರ್ಮಿಕರೊಂದಿಗೆ ಕೇಕ್ ಕತ್ತರಿಸಿ, ವಿತರಿಸುವ ಮೂಲಕ ಆಚರಿಸಿಕೊಂಡದ್ದು ಜನ್ಮ ದಿನಾಚರಣೆಗೆ ಮೆರಗು ನೀಡಿತು.
ಬಳಿಕ ಚೌಡೇಶ್ವರಿ ಅಮ್ಮನವರ ದೇವಾಲಯಕ್ಕೆ ತೆರಳಿ, ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ನಮಿಸಿದರು. ಚೌಡೇಶ್ವರಿ ವಾರ್ಡ್ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಅಭಿಮಾನಿಗಳು, ಹಿತೈಷಿಗಳು ಆಯೋಜಿಸಿದ್ದ ಜನ್ಮದನಾಚರಣೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಮುನಿರಾಜು, ಭರತ್ ಕುಮಾರ್ ಟಿ., ಗೋಪಾಲಕೃಷ್ಣ, ಚೌಡರೆಡ್ಡಿ, ಶ್ರೀನಿವಾಸ್(ಬ್ರಿಟಿಷ್), ರಾಮಚಂದ್ರ, ಚಿನ್ನಸ್ವಾಮಿ, ಆಮ್ಕೊ ಲಕ್ಷ್ಮೀನಾರಾಯಣ, ರಾಜುಶೆಟ್ಟಿ, ರುದ್ರೇಶ್, ಚೌಡೇಶ್ವರಿ ವಾರ್ಡ್ 3ರ ಬಿಜೆಪಿ ಅಧ್ಯಕ್ಷ ಯುವ ಮೋಹನ್ ಕುಮಾರ್, ಉಪಾಧ್ಯಕ್ಷ ಮಧು, ಬಿಜೆಪಿ ಯುವ ಮುಖಂಡರಾದ ಸಿ.ಆರ್.ಜನಾರ್ಧನ, ಗಿರೀಶ್, ಶಂಕರ್, ನರಸಿಂಹಲು, ವೆಂಕಟ್,
ಮಂಜುನಾಥ್, ಹೇಮಂತ್ ಕುಮಾರ್,ರೆಡ್ಡಿ ಮೋಹನ್, ಶಿವ,ಸಂತೋಷ್, ಕುಮಾರಸ್ವಾಮಿ, ಸೇರಿದಂತೆ ಹಲವು ಬಿಜೆಪಿ ಮುಖಂಡರು, ಹಿತೈಷಿಗಳು, ಬಂಧುಗಳು, ಅಭಿಮಾನಿಗಳಿದ್ದು, ವಿ.ವಿ.ರಾಮಮೂರ್ತಿ ಅವರಿಗೆ ಜನ್ಮದಿನದ ಶುಭ ಹಾರೈಸಿದರು.
