



ಬಂಜಾರ ಅಭಿವೃದ್ಧಿ ಸಂಘ’ದ ವತಿಯಿಂದ ಸಂತ ಸೇವಾಲಾಲ ಅವರ 287ನೇ ಜಯಂತಿ :
ಯಲಹಂಕ : ‘ಬಂಜಾರ ಅಭಿವೃದ್ಧಿ ಸಂಘ’ದ ವತಿಯಿಂದ ಯಲಹಂಕ ಉಪನಗರ 4ನೇ ಹಂತದಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲ ಅವರ 287ನೇ ಜಯಂತಿ ಕಾರ್ಯಕ್ರಮವನ್ನು ಶಾಸಕ ಎಸ್ ಆರ್ ವಿಶ್ವನಾಥ್ ಉದ್ಘಾಟಿಸಿದರು
ನಂತರ ಮಾತನಾಡಿದ ಅವರು ‘ಸಂತ ಸೇವಾಲಾಲ್ ಮಹಾರಾಜ್ ಅವರು ಬಂಜಾರ ಸಮುದಾಯದ ಆಧ್ಯಾತ್ಮಿಕ ಗುರು, ಸಮಾಜ ಸುಧಾರಕ ಮತ್ತು ಪವಾಡ ಪುರುಷ. ಅವರು ಬೋಧಿಸಿದ ಅಹಿಂಸೆ, ವ್ಯಸನ ಮುಕ್ತ ಸಮಾಜ ನಿರ್ಮಾಣ, ಸತ್ಯ ಮಾರ್ಗ, ದೈವ ಭಕ್ತಿ, ಅನ್ನದಾನ ಮುಂತಾದ ಮಾನವೀಯ ಮೌಲ್ಯಗಳು ಸಮಾಜದ ಪ್ರತಿಯೊಬ್ಬರು ಅನುಸರಣೆ ಮಾಡುವಂತಹ ಮಾದರಿ ಆದರ್ಶಗಳಾಗಿದ್ದು, ಜಾತಿ, ಧರ್ಮಾತೀತವಾಗಿ ಸಮಾಜದ ಎಲ್ಲಾ ವರ್ಗದವರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಮಹಾತ್ಮರಿಗೆ ಜಾತಿ, ಮತ, ಪಂಥಗಳ ಭೇದ ಇರುವುದಿಲ್ಲ, ಅವರದ್ದೇನಿದ್ದರೂ ಸಮಾಜದ ಎಲ್ಲಾ ವರ್ಗಕ್ಕೂ ಅನ್ವಯವಾಗುವ ಆದರ್ಶದ ಮಾರ್ಗವೊಂದೇ ಎಂದರು.
ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ಶಾಸಕ ಎಸ್ ಆರ್ ವಿಶ್ವನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾ ಯಿತು. ಇದೇ ಸಂದರ್ಭದಲ್ಲಿ ಯಲಹಂಕ ನಗರ ಮಂಡಲ ಬಿಜೆಪಿ ಅಧ್ಯಕ್ಷ ಎಂ ಮುನಿರಾಜು, ಪ್ರಧಾನ ಕಾರ್ಯದರ್ಶಿ ವಿ.ಪವನ್ ಕುಮಾರ್, ಹಿರಿಯ ಬಿಜೆಪಿ ಮುಖಂಡರಾದ ಡಾ.ಶಶಿಕುಮಾರ್, ಸಿ.ರಮೇಶ್ ನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷ ಎಚ್.ಎಸ್. ಕಿರಣ್, ಉಪಾಧ್ಯಕ್ಷ ಮಂಗೇಶ್ ರಾಥೋಡ್, ಪ್ರಧಾನ ಕಾರ್ಯದರ್ಶಿ ಡಿ.ಎನ್.ಅಕ್ಷತ್, ಬೆಂ.ಉತ್ತರ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸದಸ್ಯ ಶರತ್, ಯಲಹಂಕ ನಗರ ಮಂಡಲ ಎಸ್.ಸಿ.ಮೋರ್ಚಾ ಅಧ್ಯಕ್ಷ ಕೆ.ಎಂ.ಮುರಳಿ, ಎಸ್.ಟಿ.ಮೋರ್ಚಾ ಅಧ್ಯಕ್ಷ ಮೋಹನ್ ಬಿ.ಆರ್., ಅಟ್ಟೂರು ವಾರ್ಡ್ ಬಿಜೆಪಿ ಅಧ್ಯಕ್ಷ ನಾರಾಯಣಸ್ವಾಮಿ, ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಬೃಂದಾ ವೀರೇಶ್, ಪ್ರಧಾನ ಕಾರ್ಯದರ್ಶಿಗಳಾದ ಮಧುರ, ಗೌರಮ್ಮ, ಯಲಹಂಕ ಕ್ಷೇತ್ರದ ಬಂಜಾರ ಸಮುದಾಯದ ಮುಖಂಡರಾದ ಹರೀಶ್, ಸುಬ್ರಾಮ್ ನಾಯ್ಕ್, ಪ್ರಕಾಶ್ ರಾಥೋಡ್, ಸಿ.ಚೇತನ್, ಸುಧಾಕರ್ ನಾಯ್ಕ್ ಸೇರಿದಂತೆ ಇನ್ನಿತರರಿದ್ದರು.
