ವಹ್ನಿಕುಲ ಕ್ಷತ್ರಿಯ ಜನಾಂಗದ ಕೊಡುಗೆ ಸ್ಮರಣೀಯ : ಎಸ್.ಆರ್.ವಿಶ್ವನಾಥ್

ಯಲಹಂಕದಲ್ಲಿ 25 ಅಡಿಗಳ ನೂತನ ಕರಗದ ಪ್ರತಿಮೆ ಲೋಕಾರ್ಪಣೆ :

ಯಲಹಂಕ : ಕರ್ನಾಟಕ ರಾಜ್ಯ ವಿಶೇಷವಾಗಿ ಬೆಂಗಳೂರು ನಗರಕ್ಕೆ ವಹ್ನಿಕುಲ ಕ್ಷತ್ರಿಯರು(ತಿಗಳ ಸಮುದಾಯ) ಸ್ಮರಣೀಯ ಕೊಡುಗೆಗಳನ್ನು ನೀಡಿದ್ದು, ಬೆಂಗಳೂರಿನ ಧರ್ಮರಾಯ ಸ್ವಾಮಿ ದೇವಾಲಯ, ಐತಿಹಾಸಿಕ ಕರಗ ಮಹೋತ್ಸವ ಇವರ ಕೊಡುಗೆಯಾಗಿದೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು.
ಯಲಹಂಕ ಕೆರೆ ಆವರಣದ ಕಲ್ಯಾಣಿ ಸಮೀಪ ಶುಕ್ರವಾರ 25 ಅಡಿಗಳ ನೂತನ ಕರಗ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು ‘ಬೆಂಗಳೂರಿನ ಐತಿಹಾಸಿಕ ಕರಗ ಮಹೋತ್ಸವವನ್ನು ಶತಮಾನಗಳಿಂದಲೂ ಈ ಸಮುದಾಯವೇ/ವಹ್ನಿಕುಲ ಕ್ಷತ್ರಿಯ ಸಮುದಾಯದವರೇ ಮುನ್ನಡೆಸಿಕೊಂಡು ಬರುತ್ತಿದ್ದು, ಆದಿಶಕ್ತಿ ದ್ರೌಪದಿ ದೇವಿಯ ಆರಾಧನೆಯಾಗಿರುವ ಈ ಉತ್ಸವ ಕೋಮು ಸೌಹಾರ್ದತೆಗೆ ಹೆಸರಾಗಿದೆ. ವಹ್ನಿಕುಲ ಕ್ಷತ್ರಿಯರು ದಕ್ಷಿಣ ಕರ್ನಾಟಕ, ಆಂಧ್ರ ಮತ್ತು ತಮಿಳುನಾಡಿನ ವಿವಿಧ ಭಾಗಗಳಲ್ಲಿ ಸಣ್ಣ ಪ್ರಾಂತ್ಯಗಳನ್ನು ಆಳಿದ ಸಾಮಂತ ರಾಜರಾಗಿದ್ದು, ಶೌರ್ಯ‌, ಯುದ್ಧ ಮತ್ತು ಸಾಹಸಗಳಿಗೆ‌ ಹೆಸರಾಗಿದ್ದರು ಎಂಬ ಐತಿಹ್ಯವಿದೆ ಎಂದು ವಹ್ನಿಕುಲ ಕ್ಷತ್ರಿಯರನ್ನು ಕುರಿತು ಬಣ್ಣಿಸಿದರು.
ಐತಹಾಸಿಕ ಯಲಹಂಕ ಕೆರೆ ಆವರಣದಲ್ಲಿನ ಕರಗ ಮಂಟಪದ ಬಳಿ ಇಂದು 25 ಅಡಿಗಳ ಎತ್ತರದ ನೂತನ ಕರಗ ಪ್ರತಿಮೆಯನ್ನು ಲೋಕಾರ್ಪಣೆ ಗೊಳಿಸುವ ಮೂಲಕ ಯಲಹಂಕದಲ್ಲಿ ಹೊಸದೊಂದು ಐತಿಹಾಸಿಕ ಮೈಲುಗಲ್ಲು ನಿರ್ಮಾಣವಾಗಿದೆ. ಇದರೊಂದಿಗೆ ವಹ್ನಿಕುಲ ಕ್ಷತ್ರಿಯ ಸಮುದಾಯದ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದರು.
ಕರ್ನಾಟಕ ರಾಜ್ಯ ತಿಗಳರ(ವಹ್ನಿಕುಲ ಕ್ಷತ್ರಿಯ)ಸಂಘದ ರಾಜ್ಯಾಧ್ಯಕ್ಷ ಮು.ಕೃಷ್ಣಮೂರ್ತಿ ಅವರು‌ ಮಾತನಾಡಿ ‘ಕರಗದ ಪ್ರತಿಮೆ ನಿರ್ಮಾಣಕ್ಕಾಗಿ ಶಾಸಕ ಎಸ್ ಆರ್‌‌ ವಿಶ್ವನಾಥ್ ಅವರು ನೀಡಿದ ಸಹಕಾರವನ್ನು ಪ್ರಶಂಸಿಸಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಬುಳ್ಳಹಳ್ಳಿಯ ಶ್ರೀ ದ್ರೌಪದಿ ಆದಿ ಪರಾಶಕ್ತಿ ಮಹಾಸಂಸ್ಥಾನ ಪೀಠದ ಶ್ರೀ ಬಾಲಯೋಗಿ ಸಾಯಿ ಮಂಜುನಾಥ್ ಮಹಾರಾಜ್ ಸ್ವಾಮೀಜಿ, ಶಿವನಾಪುರದ ಆದಿ ಮಹಾಸಂಸ್ಥಾನ ಮಠದ ಶ್ರೀ ಪ್ರಣವಾನಂದ ಪುರಿ ಮಹಾಸ್ವಾಮೀಜಿ ವಹಿಸಿದ್ದು, ಕರ್ನಾಟಕ ರಾಜ್ಯ ತಿಗಳರ(ವಹ್ನಿಕುಲ ಕ್ಷತ್ರಿಯ)ಸಂಘದ ರಾಜ್ಯಾಧ್ಯಕ್ಷ ಮು.ಕೃಷ್ಣಮೂರ್ತಿ, ಕರ್ನಾಟಕ ರಾಜ್ಯ ತಿಗಳ ಮಹಾಸಭಾ ಅಧ್ಯಕ್ಷ ಎಚ್.ಸುಬ್ಬಣ್ಣ, ಕೆ.ಎಸ್.ಟಿ.ಐ.ಡಿ.ಸಿ. ಉಪಾಧ್ಯಕ್ಷ ಜಿ.ವಿ.ಬಾಲಾಜಿ, ಕರ್ನಾಟಕ ರಾಜ್ಯ ತಿಗಳರ(ವಹ್ನಿಕುಲ ಕ್ಷತ್ರಿಯ) ಸಂಘದ ಮಾಜಿ ಅಧ್ಯಕ್ಷ ಸಿ.ಜಯರಾಜ್, ಖಜಾಂಚಿ ಹೂಡಿ ವಿಜಯಕುಮಾರ್, ನಿರ್ದೇಶಕ ನಾಗಾರ್ಜುನ, ತಿಗಳ ಸಮುದಾಯದ ಮುಖಂಡರಾದ‌ ಶಿವಕುಮಾರ್, ಉದಯಕುಮಾರ್, ಎ.ರಾಮಕೃಷ್ಣಪ್ಪ, ಸಿದ್ಧರಂಗಸ್ವಾಮಿ, ಕೆ.ಲಕ್ಷ್ಮಣ್, ಗೋಪಾಲಕೃಷ್ಣ, ವೇಣುಗೋಪಾಲ್ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *