ವೇಮನರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು : ಎಸ್ ಆರ್ ವಿಶ್ವನಾಥ್
ವೇಮನ ಜಯಂತಿ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ :
ಯಲಹಂಕ : ಮಹಾಯೋಗಿ ವೇಮನ ಮಹರ್ಷಿಗಳು ಸಮಾಜಕ್ಕೆ ನೀಡಿದ ತತ್ವ, ಸಂದೇಶ ಹಾಗೂ ವಿಚಾರಧಾರೆಗಳು ಎಂದೆಂದಿಗೂ ಪ್ರಸ್ತುತವಾಗಿವೆ. ಭಾರತದಲ್ಲಿ ಇಂತಹ ಸಾವಿರಾರು ಮಹಾಪುರುಷರು ಜನ್ಮತಾಳಿ, ಸತ್ಸಂದೇಶ ಸಾರಿರುವುದರಿಂದಲೇ ಇನ್ನೂ ನಮ್ಮ ದೇಶ, ಹಿಂದೂಧರ್ಮ ಮತ್ತು ಸಂಸ್ಕೃತಿ ಉಳಿದುಕೊಂಡಿದ್ದು, ಅವರಿಗೆ ಗೌರವ ಸಲ್ಲಿಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡು ಬದುಕಿನಲ್ಲಿ ಮುಂದೆ ಸಾಗಬೇಕು ಎಂದು ಶಾಸಕ ಎಸ್‌.ಆರ್‌. ವಿಶ್ವನಾಥ್‌ ಹೇಳಿದರು.
ಮಹಾಯೋಗಿ ವೇಮನ ಸೌಹಾರ್ದ ಪತ್ತಿನ ಸಹಕಾರಿ ಸಂಘ, ರೆಡ್ಡಿ ಜನಸಂಘ, ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಮಹಾಯೋಗಿ ವೇಮನರ 614ನೇ ಜಯಂತ್ಯೋತ್ಸವದ ಪ್ರಯುಕ್ತ ಯಲಹಂಕ ಉಪನಗರದಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇಂದು ಜನಸಂಖ್ಯೆ ಹೆಚ್ಚಾಗುತ್ತಿದ್ದು, ರಕ್ತದಾನಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಪರಿಣಾಮ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಕೊರತೆಯಿದೆ. ಆಪತ್ಕಾಲದಲ್ಲಿ ಮನುಷ್ಯನ ಪ್ರಾಣ ಉಳಿಸಲು ರಕ್ತ ಬಹಳ ಅವಶ್ಯಕ. ಈ ದಿಸೆಯಲ್ಲಿ ವೇಮನ ಮಹರ್ಷಿ ಅವರ ಹೆಸರಿನಲ್ಲಿ ಪ್ರತಿವರ್ಷ ರಕ್ತದಾನ ಶಿಬಿರ ಆಯೋಜಿಸಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುತ್ತಿದ್ದಾರೆ. ಇದೊಂದು ಸ್ತುತ್ತ್ಯಾರ್ಹವಾದಂತಹ ಕಾರ್ಯವಾಗಿದೆ ಎಂದರು.
ಶಿಬಿರದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ದಾನಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ರಕ್ತದಾನ ಶಿಬಿರದಲ್ಲಿ ಒಟ್ಟು 501 ಯುನಿಟ್‌ ಗಳಷ್ಟು ರಕ್ತ ಸಂಗ್ರಹಿಸುವ ಮೂಲಕ ಹೊಸ ದಾಖಲೆ  ಸೃಷ್ಟಿಯಾಯಿತು.
ವೇಮನ ಜಯಂತಿ ಪ್ರಯುಕ್ತ‌ ಮಹಾಯೋಗಿ ವೇಮನ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ವತಿಯಿಂದ ಹಲವು ಗಣ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಎಸ್‌.ಎನ್‌.ಸಂಪತ್‌ಕುಮಾರ್‌, ಉಪಾಧ್ಯಕ್ಷ ಎಂ.ಮೋಹನ್‌ಕುಮಾರ್‌, ನಿರ್ದೇಶಕರಾದ ಸಿ.ಆರ್‌.ಜಯಪ್ಪರೆಡ್ಡಿ, ಎಸ್‌.ಜಿ.ನರಸಿಂಹಮೂರ್ತಿ, ರತ್ನಮ್ಮ ಮುನಿರೆಡ್ಡಿ, ರಾಜಣ್ಣ.ಎಚ್‌, ರಾಜಣ್ಣ.ಟಿ, ಸತೀಶ್‌.ಕೆ.ವಿ, ಟಿ.ವೆಂಕಟರಾಮರೆಡ್ಡಿ, ಕೆ.ಜಿ.ರಾಮಕೃಷ್ಣಯ್ಯ, ಟಿ.ಎನ್‌.ಶ್ರೀನಿವಾಸ್‌, ನರಸಿಂಹಮೂರ್ತಿ.ಜಿ, ಸಿ.ಶ್ರೀನಿವಾಸ್‌, ನೀತಾ.ಎಂ.ಎನ್‌ ರೆಡ್ಡಿ, ಸುಜಾತ ಸಂಪಂಗಿರೆಡ್ಡಿ, ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಂ.ಮುನಿರಾಜು, ಚೊಕ್ಕನಹಳ್ಳಿ ವೆಂಕಟೇಶ್‌, ಕೆ.ವೀರಣ್ಣ, ಅದ್ದೆ ವಿಶ್ವನಾಥಪುರ ಮಂಜುನಾಥ್‌, ಎಸ್‌.ಜಿ.ಪ್ರಶಾಂತ್‌ರೆಡ್ಡಿ, ಎಚ್.ಎಸ್.ಕಿರಣ್, ಸಿಇಒ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *