















ಬೆಂಗಳೂರಿಗರು ಒತ್ತಡದ ಜೀವನದ ನಡುವೆ ಆರೋಗ್ಯವೇ ಭಾಗ್ಯ ಎಂಬುದನ್ನು ಮರೆಯುತ್ತಿದ್ದಾರೆ. “ಆರೋಗ್ಯಕರ ಸಮುದಾಯ ಬಲಿಷ್ಠ ರಾಷ್ಟ್ರ” ಎಂಬ ಶೀರ್ಷಿಕೆಯೊಂದಿಗೆ ಸಿಂಧಿ ಸೇವಾಸಮಿತಿ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಂಧಿ ಮಹಾವಿದ್ಯಾಲಯವು ದಿನಾಂಕ 28.2.2026ರ ಶನಿವಾರದಂದು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಲಿಯೋ ಕ್ಲಭ್ ಜಂಟಿಯಾಗಿ ಲಯನ್ಸ್ ಕ್ಲಬ್ ಹಾಗೂ ಸ್ಪರ್ಶ್ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. ಈ ಶಿಬಿರವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಆಶಾ ಎನ್ ರವರು ಉದ್ಘಾಟಿಸಿದರು. ಈ ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ (ಸಕ್ಕರೆ, ಬಿಪಿ, ಹೆಚ್ ಬಿ ಕೌಂಟ್ ಹಾಗೂ ಇಸಿಜಿ), ಇಎನ್‌ಟಿ, ಮ್ಯಾಮೋಗ್ರಪಿ, ನ್ಯೂಟ್ರಿಷನ್, ದಂತ ಪರೀಕ್ಷೆ ಹಾಗೂ ನೇತ್ರ ತಪಾಸಣೆ ಪರೀಕ್ಷೆಗಳನ್ನು ಸ್ಪರ್ಶ್ ಆಸ್ಪತ್ರೆ ಇನ್ ಪ್ಯಾಂಟ್ರಿ ರಸ್ತೆ ಇಲ್ಲಿನ ನುರಿತ ತಜ್ಞ ವೈದ್ಯರುಗಳಿಂದ ನಡೆಸಲಾಯಿತು. ಸಿಂಧಿ ಕಾಲೇಜಿನ ಸುತ್ತಮುತ್ತಲಿನ 450 ಕ್ಕೂ ಹೆಚ್ಚು ಜನರು ಭಾಗವಹಿಸಿ ಸಲಹೆ ಮತ್ತು ಚಿಕಿತ್ಸೆಯನ್ನು ಪಡೆದುಕೊಂಡರು. ಇ ಎನ್ ಟಿ, ಇಸಿಜಿ ಮತ್ತು ನೇತ್ರ ಪರೀಕ್ಷೆಗಾಗಿ ಜನರು ಸಾಲುಗಟ್ಟಿ ನಿಂತಿದ್ದು ಕಂಡುಬಂದಿತು. ಈ ಶಿಬಿರದಲ್ಲಿ ಪ್ರಾಂಶುಪಾಲರಾದ ಡಾ. ಆಶಾ ಎನ್, ಉಪ ಪ್ರಾಂಶುಪಾಲರಾದ ಡಾ.ಶಶಿಕಲಾ, ಲಯನ್ಸ್ ಕ್ಲಬ್ ನ ಲಯನ್ ರಜಿನಿ ಎಂ ಮತ್ತು ಲಯನ್ ಅರುಣ್ ಎಸ್ ವಿ, ಕಾಲೇಜಿನ ಎನ್ ಎಸ್ ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಪ್ರೊ ರಾಜೇಂದ್ರ, ಲಿಯೋ ಕ್ಲಬ್ ನ ಸಂಯೋಜನಾಧಿಕಾರಿ ವಿದ್ವಾನ್ ಎನ್ ಆರ್ ಸುಬ್ರಮಣ್ಯರವರು, ಕಾಲೇಜಿನ ಬೋಧಕರು, ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ ಸ್ವಯಂ ಸೇವಕರು ಸಕ್ರಿಯವಾಗಿ ಭಾಗವಹಿಸಿದ್ದರು.
