





ಒಳ ಮೀಸಲಾತಿ ಹೋರಾಟದ ಪೂರ್ವಭಾವಿ ಸಭೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಿಂದ
ದಿನಾಂಕ 12/03/2026 ರಂದು ನಡೆಯಲಿರುವ ಒಳ ಮೀಸಲಾತಿ ಹೋರಾಟದ ಕಾರ್ಯಕ್ರಮದ ಬಗ್ಗೆ ಮಾದಿಗ ಸಮುದಾಯದ ಮುಖಂಡರುಗಳು ಹಾಗೂ ಬಂಧುಗಳು ಪೂರ್ವಭಾವಿ ಸಭೆ ನಡೆಸಿ ನಾಳೆ ನಡೆಯಲಿರುವ ಹೋರಾಟದ ಅಂತಹ ಹಂತದ ಚಟುವಟಿಕೆಯ ಬಗ್ಗೆ ಚರ್ಚಿಸಲಾಯಿತು. ಬೆಳಿಗ್ಗೆ ಯಲಹಂಕ ಮಿನಿ ವಿಧಾನಸೌಧ ಮುಂಭಾಗದಲ್ಲಿರುವ ಡಾಕ್ಟರ್ ಬಿಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮುಖಾಂತರ ಹೋರಾಟ ಪ್ರಾರಂಭಿಸಿನಲ್ಲಿ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಹೋರಾಟಕ್ಕೆ ಎಲ್ಲ ಮಾದಿಗ ಬಂಧುಗಳು ಸೇರಿಕೊಳ್ಳುವ ಮುಖಾಂತರ ನಾಳೆ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂಬ ಸಂದೇಶವನ್ನು ಎಲ್ಲ ಮಾದಿಗ ಮುಖಂಡರು ಒಮ್ಮತದಿಂದ ಒಪ್ಪಿಕೊಳ್ಳುವ ಮುಖಾಂತರ ಮಾದಿಗ ಯುವಕರಿಗೆ ಸಂದೇಶವನ್ನು ನೀಡಿದರು. ಪ್ರತಿ ಮನೆಯಿಂದಲೂ ಮಾದಿಗ ಸಮುದಾಯದ ಯುವಕರು ಕೆಚ್ಚೆದೆಯಿಂದ ಬರಬೇಕು ಇದು ನಮ್ಮ ಹಕ್ಕು ನಮ್ಮ ಮೀಸಲಾತಿಯನ್ನು ನಾವು ಪಡೆದುಕೊಳ್ಳದೆ ಹೋದರೆ ನಮ್ಮ ಮುಂದಿನ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂಬುದನ್ನು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಅನೇಕ ಮಾದಿಗ ಮುಖಂಡರು ಉಪಸ್ಥಿತರಿದ್ದರು. ಸಮುದಾಯದ ಉದ್ಧಾರಕ್ಕಾಗಿ ಪ್ರತಿ ಮನೆಯಿಂದಲೂ ಒಬ್ಬೊಬ್ಬರು ನಾಳೆ ಕಾರ್ಯಕ್ರಮಕ್ಕೆ ಬರಬೇಕು ಎಂದು ಕರೆಕೊಟ್ಟರು. ಭಾರತ ರತ್ನ ಡಾ. ಬಿಆರ್ ಅಂಬೇಡ್ಕರ್ ಅವರ ಆಶಯದಂತೆ ನಮ್ಮ ಸಮುದಾಯದ ಹಕ್ಕುಗಳನ್ನು ನಾವು ಪಡುಕೋಬೇಕಾಗಿದೆ. ಕೈಗೆ ಸಿಕ್ಕ ತುತ್ತು ಬಾಯಿಗೆ ಸಿಗದ ಪರಿಸ್ಥಿತಿ ಇವತ್ತು ಸರ್ಕಾರ ತಂದೊಟ್ಟಿದೆ ಆಸೆಗಳನ್ನು ತೋರಿಸುವ ಮುಖಾಂತರವೇ ಅಂದಿನಿಂದ ಇಂದಿನವರೆಗೂ ನನ್ನ ಸಮುದಾಯವನ್ನು ತುಳಿತಕ್ಕೆ ಒಳಗಾಗಿದೆ. ಶ್ರೀಮಂತರ ಶ್ರೀಮಂತರಾಗಿ ಹೋಗುತ್ತಿದ್ದಾರೆ ಬಡವರು ಬಡವರಾಗಿ ಹೋಗಿದ್ದಾರೆ ಈಗಲಾದರೂ ಜನ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಬರುವ ಸಮಸ್ಯೆಗಳಿಗೆ ನಾವೇ ಹೊಣೆಗಾರರಾಗ್ತೀವಿ ಆದ್ದರಿಂದ ನಾಳಿನ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಕೂಡ ಕೈ ಜೋಡಿಸಿ ಜೈಭೀಮ್ ಎಂದು ಹೇಳುವ ಮುಖಾಂತರ ನಮ್ಮ ಸಂವಿಧಾನ ನಮ್ಮ ಹಕ್ಕು ಎಂಬುದನ್ನು ಸಾಬೀತುಪಡಿಸೋಣ ನೀವು ಬನ್ನಿ ನಿಮ್ಮವರನ್ನು ಕರೆತನ್ನಿ ಎಂದು ಮುಖಂಡರು ಕರೆ ನೀಡಿದರು.
:- ದ್ವಾರಗಾನಹಳ್ಳಿ ಕೃಷ್ಣಪ್ಪ ಎಸ್
