

















ಬಿ ಆರ್ ಅಂಬೇಡ್ಕರ್ ಅವರ 135 ನೇ ಜನ್ಮದಿನಾಚರಣೆ
ಯಲಹಂಕ 14. 04.2026 ರಂದು ಸಂಪಿಗೆಹಳ್ಳಿ ವಾರ್ಡ್ ಅಗ್ರಹಾರ ಬಡಾವಣೆಯ ಸಮುದಾಯ ಭವನದಲ್ಲಿ ಮುನಿಯಪ್ಪ ರವರ (BSP) ನೇತೃತ್ವದಲ್ಲಿ .ಡಾ: ಬಿ ಆರ್ ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಕಾರ್ಯಕ್ರಮಕ್ಕೆ ಬಂದಂತಹ ಗಣ್ಯರಿಂದ. ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸುವ ಮೂಲಕ ಜಯಂತಿಯನ್ನು ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ರಾಜಕೀಯ ನಾಯಕರಿಗೆ ಅಗ್ರಹಾರ ಬಡಾವಣೆಯ ಕೈ ಮಗ್ಗ ನೇಕಾರರ ಉತ್ಪನ್ನ ಮತ್ತು ಮಾರಾಟ ಸಹಕಾರ ಸಂಘದ ವತಿಯಿಂದ ಭಾರತೀಯ ಸಂವಿಧಾನ ಪ್ರತಿಗಳನ್ನು ವಿತರಿಸಲಾಯಿತು ನಂತರ ವಿಚಾರವಾದಿ ಡಾ: ವಿವೇಕ್ ರವರಿಂದ ಅಂಬೇಡ್ಕರ್ ಅವರ ವಿಚಾರಗಳನ್ನು ಮಂಡನೆ ಮಾಡಲಾಯಿತು ನಂತರ ವಕೀಲರಾದ ಡಾ. ಅಂಜನ್ ಕುಮಾರ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಮಂಡನೆ ಮಾಡಿದರು ಹಾಗೂ ಕಾರ್ಯಕ್ರಮಕ್ಕೆ ಸಿಹಿಯನ್ನು ನೀಡಿದರು ದಲಿತ ಮುಖಂಡರಿಂದ ಊಟದ ವ್ಯವಸ್ಥೆ ಮಾಡಲಾಯಿತು ಕಾರ್ಯಕ್ರಮಕ್ಕೆ ಬಂದಂತಹ ಗಣ್ಯರಿಗೆ ಸನ್ಮಾನ ಮಾಡುವ ವ್ಯವಸ್ಥೆಯನ್ನು ಪದ್ಮನಾಭ ರವರು ( ಪೊನ್ನು) ಮಾಡಿದರು. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡರಾದ ವೆಂಕಟರಾಮ ರೆಡ್ಡಿ ಚೊಕ್ಕನಹಳ್ಳಿ. ಎಚ್ಎ ಶಿವಕುಮಾರ್ ಸಂಪಿಗೆಹಳ್ಳಿ. ಗೋಕುಲ್ ರೆಡ್ಡಿ ಅಗ್ರಹಾರ ಬಡಾವಣೆ . ಬಿಜೆಪಿ ಮುಖಂಡರಾದ ನರಸಿಂಹಮೂರ್ತಿ ಅಗ್ರಹಾರ ..ಆನಂದ ಮಾಸ್ಟರ್ ಅಗ್ರಹಾರ ಬಡಾವಣೆ. ಹಾಗೂ ಪ್ರಭಾಕರ್ ರವರು ಸಂಪಿಗೆಹಳ್ಳಿ ಆರಕ್ಷಕ ಠಾಣೆ ಸಬ್ ಇನ್ಸ್ಪೆಕ್ಟರ್ . ಭರತ್ ರವರು ಸಂಪಿಗೆಹಳ್ಳಿ ಆರಕ್ಷಕ ಠಾಣೆ .ನರೇಶ್ ರವರು ಆಟೋ ಶೋರೂಮ್. ಅಬ್ದುಲ್ಲ ಕಾರ್ನರ್ ಬೇಕರಿ. ಜೆಡಿಎಸ್ ಕೃಷ್ಣಮೂರ್ತಿ ನಜೀರ್ ರಾಜ್ಯಾಧ್ಯಕ್ಷರು ಇಂಡಿಯನ್ ಲೇಬರ್ ಪಾರ್ಟಿ. ಇನ್ನೂ ಅನೇಕ ಮುಖಂಡರುಗಳು ಸುತ್ತಮುತ್ತಲಿನ ಗ್ರಾಮಸ್ಥರು. ಹಾಗೂ ಇತರರು ಉಪಸ್ಥಿತರಿದ್ದರು.
