










ಬ್ಯಾಟರಾಯನಪುರ : ಕಂದಾಯ ಸಚಿವರು, ಬ್ಯಾಟರಾಯನಪುರ ಕ್ಷೇತ್ರದ ಶಾಸಕರಾದ ಕೃಷ್ಣ ಬೈರೇಗೌಡ ಅವರು ಶನಿವಾರ ಕ್ಷೇತ್ರದ ಕಟ್ಟಿಗೇನಹಳ್ಳಿಯ ನಿರಂತರ ಬಡಾವಣೆಯಲ್ಲಿ ಸ್ಯಾನಿಟರಿ ಮತ್ತು ಕಾವೇರಿ ನೀರು ಪೈಪ್ ಲೈನ್ ಕಾಮಗಾರಿ, ಕೋಗಿಲು ಗ್ರಾಮದ ಕೃಷ್ಣದೇವರಾಯ ಬಡಾವಣೆಯಲ್ಲಿ ಕಾವೇರಿ ನೀರು ಸರಬರಾಜು ಪೈಪ್ಲೈನ್ ಕಾಮಗಾರಿ ಹಾಗೂ ಥಣಿಸಂದ್ರ ಸರ್ಕಾರಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿಗಳ ಪರಿವೀಕ್ಷಣೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು ಕ್ಷೇತ್ರದಲ್ಲಿ ಸಾರ್ವಜನಿಕರ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸುವ ದಿಸೆಯಲ್ಲಿ ಶ್ರಮ ವಹಿಸಲಾಗುತ್ತಿದೆ. ಕಾವೇರಿ ನೀರು ಸರಬರಾಜು ವಿಷಯದಲ್ಲಿ ಜನತೆ ನಿಯಮಾನಸಾರವಾಗಿ ಅರ್ಜಿ ಸಲ್ಲಿಸಿ, ನಿಗದಿತ ಶುಲ್ಕ ಪಾವತಿಸಿ ಸಂಪರ್ಕ ತಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಚಿವರ ಕೇತ್ರಾಭಿವೃದ್ಧಿ ಕಾರ್ಯಗಳು ಮತ್ತು ಕಾರ್ಯವೈಖರಿ ಕುರಿತು ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹೋಗಿಲು ಮುನಿಕೃಷ್ಣ, ಸಂಪಿಗೆಹಳ್ಳಿ ಶಿವಕುಮಾರ್, ವೆಂಕಟರಾಮ್ ರೆಡ್ಡಿ, ನಾಗೇಂದ್ರ, ಕೋಗಿಲು ವಾರ್ಡ್ ಅಧ್ಯಕ್ಷ ಗೋವಿಂದರಾಜು, ಕೋಗಿಲು ಗ್ರಾಮದ ಸಂದೀಪ್ ಉನ್ನಿಕೃಷ್ಣನ್ ರಸ್ತೆ ನಿವಾಸಿಗಳ ಸಂಘದ ಅಧ್ಯಕ್ಷ ಕೈಲಾಶ್ ಮೂರ್ತೀ ಸೇರಿದಂತೆ ಗ್ರಾಮಸ್ಥರಿದ್ದರು.
