

















ಯಲಹಂಕ : ಯಲಹಂಕ ನಗರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ನಿಕಟಪೂರ್ವ ನಿರ್ದೇಶಕರಾದ ವಿ.ಪವನ್ ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಯಲಹಂಕ ಉಪನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್, ಬಿಜೆಪಿ ಯುವ ಮುಖಂಡ ಅಲೋಕ್ ವಿಶ್ವನಾಥ್ ಸೇರಿದಂತೆ ಹಲವು ಮುಖಂಡರು ಕೇಕ್ ಕತ್ತರಿಸಿ, ಪವನ್ ಕುಮಾರ್ ಅವರಿಗೆ ಸನ್ಮಾನಿಸಿ ಜನ್ಮದಿನದ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷರಾದ ಸಚ್ಚಿದಾನಂದ ಮೂರ್ತಿ, ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಡಿ.ಜಿ..ಅಪ್ಪಯ್ಯಣ್ಣ, ಡಾ.ಶಶಿಕುಮಾರ್, ಯಲಹಂಕ ನಗರ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಮುನಿರಾಜು, ಪ್ರಧಾನ ಕಾರ್ಯದರ್ಶಿ ವಿ.ಎಂ.ಈಶ್ವರ್, ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಶ್ವನಾಥಪುರ ಮಂಜುನಾಥ್, ಚೌಡೇಶ್ವರಿ ವಾರ್ಡ್ ಬಿಜೆಪಿ ಅಧ್ಯಕ್ಷ ವಿ.ವಿ.ರಾಮಮೂರ್ತಿ, ಅಟ್ಟೂರು ವಾರ್ಡ್ ಅಧ್ಯಕ್ಷ ನಾರಾಯಣ ಸ್ವಾಮಿ, ಮಾಜಿ ಅಧ್ಯಕ್ಷ ನಟರಾಜ್, ನಗರ ಮಂಡಲ ಎಸ್.ಟಿ. ಮೋರ್ಚಾ ಅಧ್ಯಕ್ಷ ಎ.ಸಿ. ಮುನಿಕೃಷ್ಣಪ್ಪ, ಎಸ್.ಸಿ.ಮೋರ್ಚಾ ಅಧ್ಯಕ್ಷ ಕೆ.ಎಂ.ಮುರಳಿ, ಅಟ್ಟೂರು ವಾರ್ಡ್ ಎಸ್.ಸಿ.ಮೋರ್ಚಾ ಅಧ್ಯಕ್ಷ ಸುನಿಲ್ ಕುಮಾರ್, ಬಿಜೆಪಿ ಮುಖಂಡರಾದ ಮಧುಸೂದನ್, ಆವಲಹಳ್ಳಿ ಕೇಶವಮೂರ್ತಿ, ಎಸ್.ರಾಜಣ್ಣ , ಶೇಷಾದ್ರಿ, ಶಿವಾನಂದ, ವೈ.ಜಿ.ವಸಂತ್, ಮೋಹನ್ ಬಿ.ಆರ್., ಓಂ ರವೀಂದ್ರ, ನಾಗಪ್ಪ, ಶಂಕರ್ ನಾಯ್ಕ್,, ಮಲ್ಲಿಕಾರ್ಜುನ, ಯುವ ಮೋರ್ಚಾ ಮೋರ್ಚಾ ಮುಖಂಡರಾದ ಎಸ್.ಎಚ್. ಕಿರಣ್, ಶರತ್, ಅಕ್ಷತ್, ಮಂಗೇಶ್ ರಾಥೋಡ್, ಅಕುಲ್, ಮಹಿಳಾ ಮೋರ್ಚಾದ ಬೃಂದಾ ವೀರೇಶ್, ಲತಾ ಚಂದ್ರಶೇಖರ್ ಸೇರಿದಂತೆ ಇನ್ನಿರರಿದ್ದರು.
