ಮಾರೇನಹಳ್ಳಿ ಗ್ರಾಮದಲ್ಲಿ ಶ್ರೀ ಸೋಮೇಶ್ವರಸ್ವಾಮಿ ಪುನರ್ ಪ್ರತಿಷ್ಠಾಪನಾ ಮಹೋತ್ಸವ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ಮಾರೇನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಸೋಮೇಶ್ವರಸ್ವಾಮಿ, ಶ್ರೀ ವೇಣುಗೋಪಾಲಸ್ವಾಮಿ, ಶ್ರೀ ಅಯ್ಯಪ್ಪಸ್ವಾಮಿ, ಶ್ರೀ ವಿಘ್ನೇಶ್ವರ ಹಾಗೂ ನವಗ್ರಹ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಮತ್ತು ದೇವಾಲಯ ಲೋಕಾರ್ಪಣೆ ಕಾರ್ಯಕ್ರಮ ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆ ಮೂಲಕ ವಿಜೃಂಭಣೆಯಿಂದ ನೆರವೇರಿತು.
ದೇವಾಲಯ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಮಹಾ ಗಣಪತಿ ಪೂಜೆ, ಗಂಗಾ ಪೂಜೆ, ಮಂಗಳವಾದ್ಯದೊಂದಿಗೆ ಬ್ರಹ್ಮಕಲಶ ಪುರಪ್ರದಕ್ಷಣೆ, ಆಲಯ ಪ್ರವೇಶ, ಆಚಾರ್ಯ ಋತ್ವಿಕ್ ವರ್ಣನೆ, ಪಂಚ ಗವ್ಯದಿಂದ ಆಲಯ ಶುದ್ಧಿ, ರಕ್ಷಾ ಬಂಧನ, ದೇವನಾಂದಿ, ಮೃತ್ಸಂಗ್ರಹಣ, ಅಂಕುರಾರ್ಪಣೆ ಧ್ವಜಾರೋಹಣ, ಮಂಟಪ ಆರಾಧನೆ, ಯಾಗ ಶಾಲಾ ಪ್ರವೇಶ, ಮಹಾಗಣಪತಿ ವಾಸ್ತು ರಕ್ಷೋಗ್ನ, ನವಗ್ರಹ ಹೋಮ, ಪ್ರಸಾದ ವಾಸ್ತು ಬಲಿ ಮಹಾಸಂಕಲ್ಪ, ಕಲಾಷಾರಾಧನೆ, ಆಲಯ ಕಳಹೋಮ, ಮಹಾಪೂರ್ಣಾಹುತಿ, ಚರಬಿಂಬ, ಆಲಯ ಪ್ರದಕ್ಷಿಣೆ, ಅಷ್ಟಬಂಧನವಿಧಿನ್ಯಾಸಾಧಿ ಹೋಮ ಹಾಗೂ ಪೂರ್ಣಾಹುತಿ, ತೀರ್ಥ ಪ್ರಸಾದ ವಿನಿಯೋಗ, ಅನ್ಮಸಂತರ್ಪಣೆ ಮುಂತಾದ ಕಾರ್ಯಕ್ರಮಗಳನ್ನು ವಿಧಿ ವಿಧಾನ ಪೂರ್ವಕವಾಗಿ ನೆರವೇರಿಸ ಲಾಯಿತು.
ದೇವಾಲಯದ ಪ್ರಧಾನ ಅರ್ಚಕರು, ಆಗಮಿಕರು ಹಾಗೂ ಋತ್ವಿಜರ ವೃಂದ ಪುನರ್ ಪ್ರತಿಷ್ಠಾಪನಾ ಮಹೋತ್ಸವದ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿಕೊಟ್ಟರು.
ಮಹತ್ವದ ಈ ದೈವ ಕಾರ್ಯಕ್ಕೆ ಕಂದಾಯ ಸಚಿವರು, ಬ್ಯಾಟರಾಯನಪುರ ಕ್ಷೇತ್ರದ ಶಾಸಕರಾದ ಕೃಷ್ಣಬೈರೇಗೌಡ ಆಗಮಿಸಿ ಭಕ್ತಿ ಸಮರ್ಪಿಸಿದರು. ಶ್ರೀ ಸೋಮೇಶ್ವರ ಸ್ವಾಮಿ ಸಹಿತ ವಿವಿಧ ದೇವರುಗಳ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬೆನ್ನೆಲುಬಾಗಿ ನಿಂತು, ತನು,ಮನ, ಧನ ಸಹಿತವಾಗಿ ಸಹಕಾರ ನೀಡಿರುವ ಸಹೃದಯಿ ದಾನಿಗಳ ಅನುಪಮ ಕೊಡುಗೆಯನ್ನು ಕಾಂಗ್ರೆಸ್ ಮುಖಂಡರು, ಮಾರೇನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಆಂಜಿನಪ್ಪ(ಪುಟ್ಟು), ತಾ.ಪಂ.ಮಾಜಿ ಅಧ್ಯಕ್ಷರು, ಯಲಹಂಕ ತಾಲ್ಲೂಕು ಭೂ ನ್ಯಾಯ ಮಂಡಳಿ ಸದಸ್ಯರಾದ ನಾಗರಾಜ್, ಯುವ ಮುಖಂಡ, ಗ್ರಾ.ಪಂ.ಮಾಜಿ ಅಧ್ಯಕ್ಷ ಪಿ.ರಾಹುಲ್ ಸೇರಿದಂತೆ ಗ್ರಾಮದ ಹಲವು ಹಿರಿಯ ಮುಖಂಡರು ಹೃನ್ಮನಪೂರ್ವಕವಾಗಿ ಸ್ಮರಿಸಿದ್ದು, ಈ ದೈವ ಕಾರ್ಯದಲ್ಲಿ ಪಾಲ್ಗೊಂಡು, ಕಾರ್ಯಕ್ರಮ ಯಶಸ್ವಿಗೊಳಿಸಿಗೊಳಿಸಿದ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು, ಸುತ್ತಮುತ್ತಲಿನ ಗ್ರಾಮಸ್ಥರಿಗೆ ಧನ್ಯವಾದ ತಿಳಿಸಿದ್ದಾರೆ.
ಮಹತ್ವದ ಈ ದೈವ ಕಾರ್ಯದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ದಾನೇಗೌಡ,‌ ಮಾರೇನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಚೊಕ್ಕನಹಳ್ಳಿ ನಂಜೇಗೌಡ, ಡಿ.ಎಂ.ಚೌಡಪ್ಪ, ಹೊಸಹಳ್ಳಿ ಮುನಿರಾಜು, ಕೃಷ್ಣಮೂರ್ತಿ, ಗ್ರಾ.ಪಂ.ಮಾಜಿ ಸದಸ್ಯೆ ಗೀತಾ ಆನಂದ್ ಕುಮಾರ್, ಬಾಗಲೂರು ಗ್ರಾ.ಪಂ.ಅಧ್ಯಕ್ಷರಾದ ಎ.ಕೆಂಪೇಗೌಡ, ಗ್ರಾ.ಪಂ.ಸದಸ್ಯ ರಾದ ಅನಿಲ್, ಪ್ರಭುಸ್ವಾಮಿ, ಧನಂಜಯ, ಸೈಯದ್ ಶಬ್ಬೀರ್, ಬೆಟ್ಟಹಲಸೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್, ಕಾಂಗ್ರೆಸ್ ಮುಖಂಡರಾದ ಮರಳುಕುಂಟೆ ಸುರೇಶ್, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ನಾರಾಯಣಗೌಡ, ಮಾರೇನಹಳ್ಳಿ ಸೊಸೈಟಿ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ಬಾಲರಾಜ್, ನಿರ್ದೇಶಕರಾದ ನಂಜಪ್ಪ, ಡೈರಿ ರಾಜಣ್ಣ,ಚನ್ನಲಕ್ಷ್ಮಮ್ಮ, ಸೆಕ್ರೆಟರಿ ಸೊಣ್ಣಪ್ಪ ಸೇರಿದಂತೆ ಹಲವು ಮುಖಂಡರು, ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು, ಮಾರೇನಹಳ್ಳಿ ಗ್ರಾಮಸ್ಥರಿದ್ದರು.

Leave a Reply

Your email address will not be published. Required fields are marked *