ಒಬೆನ್ ಎಲೆಕ್ಟ್ರಿಕ್‌ ನಿಂದ Rorr EVO ಬಿಡುಗಡೆ; ಪರಿಚಯಾತ್ಮಕ ವಿಶೇಷ ಬೆಲೆ Rs. 99,999

ಬೆಂಗಳೂರು, 06 ಮೇ, 2026: ಭಾರತದ ಸಂಶೋಧನೆ ಮತ್ತು ಅಭಿವೃದ್ಧಿ (R&D) ಆಧಾರಿತ ಎಲೆಕ್ಟ್ರಿಕ್ ಮೋಟಾರ್‌ ಸೈಕಲ್ ತಯಾರಕ ಸಂಸ್ಥೆಯಾದ ಒಬೆನ್ ಎಲೆಕ್ಟ್ರಿಕ್, ಇಂದು ತನ್ನ ಬಹುನಿರೀಕ್ಷಿತ Rorr EVO ಮೋಟಾರ್ ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಮೊದಲ 10,000 ಗ್ರಾಹಕರಿಗೆ Rs. 99,999 (ex-showroom) ವಿಶೇಷ ಪರಿಚಯಾತ್ಮಕ ಬೆಲೆಯನ್ನು ಘೋಷಿಸಲಾಗಿದೆ. ವಿನ್ಯಾಸ, ಕಾರ್ಯಕ್ಷಮತೆ ಮತ್ತು ಉಪಯುಕ್ತತೆಯನ್ನು ಒಂದೇ ಪ್ಯಾಕೇಜ್‌ನಲ್ಲಿ ನೀಡುವ ಮೂಲಕ ಈ ಮೋಟಾರ್‌ ಸೈಕಲ್ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಲಿದೆ.

ಮೊದಲ ನೋಟದಲ್ಲೇ, Rorr EVO ತನ್ನ ದಿಟ್ಟ, ಸ್ನಾಯುವಿನ ಪ್ರಮಾಣ ಮತ್ತು ಕಮಾಂಡಿಂಗ್ ನಿಲುವಿನಿಂದ ಎದ್ದು ಕಾಣುತ್ತದೆ. ಇದರ ಮುಂಭಾಗದಲ್ಲಿ ಪ್ರೊಜೆಕ್ಟರ್ ಹೆಡ್‌ ಲ್ಯಾಂಪ್ ಮತ್ತು ವಿಶಿಷ್ಟವಾದ ಫ್ರಂಟ್ ಪೊಸಿಷನ್ ಲ್ಯಾಂಪ್ ಅಳವಡಿಸಲಾಗಿದ್ದು, ಇದು ಮೋಟಾರ್‌ ಸೈಕಲ್‌ ಗೆ ವಿಶಿಷ್ಟ ಗುರುತು ನೀಡುವುದಲ್ಲದೆ, ದೈನಂದಿನ ಪ್ರಯಾಣದ ಸಮಯದಲ್ಲಿ ಉತ್ತಮ ಗೋಚರತೆಯನ್ನು ಒದಗಿಸುತ್ತದೆ.

ಈ ಮೋಟಾರ್‌ ಸೈಕಲ್‌ ನ ಪ್ರಮುಖ ವೈಶಿಷ್ಟ್ಯವೆಂದರೆ ಸ್ಮಾರ್ಟ್‌ಐಕ್ಯೂ ತಂತ್ರಜ್ಞಾನ. ಇದು ಒಬೆನ್ ಸಂಸ್ಥೆಯ ಹೊಸ ಎಐ ರೈಡ್ ಮೋಡ್ ಆಗಿದ್ದು, ಸವಾರನ ರೈಡಿಂಗ್ ಶೈಲಿಯನ್ನು ಆಯಾ ಸಮಯದಲ್ಲಿ ವಿಶ್ಲೇಷಿಸುತ್ತದೆ ಮತ್ತು ರೇಂಜ್ ಅನ್ನು ಶೇ. 15 ರಷ್ಟು (up to 15%) ಹೆಚ್ಚಿಸಲು ಪವರ್ ಡೆಲಿವರಿಯನ್ನು ಅತ್ಯುತ್ತಮವಾಗಿಸುತ್ತದೆ.

ಒಬೆನ್ ಎಲೆಕ್ಟ್ರಿಕ್ ಸಂಸ್ಥೆಯು ತನ್ನದೇ ಕೇಂದ್ರದಲ್ಲಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿರುವ ಐಪಿ68- ರೇಟೆಡ್ ಮೋಟಾರ್ ಅನ್ನು ಇದರಲ್ಲಿ ಬಳಸಲಾಗಿದೆ. ಭಾರತದ ಪರಿಸ್ಥಿತಿಗಳಿಗೆ ತಕ್ಕಂತೆ Oben’s proprietary 3.4 ಕೆಡಬ್ಲ್ಯೂಎಚ್ ಹೈ-ಪರ್ಫಾರ್ಮೆನ್ಸ್ ಎಲ್‌ಎಫ್‌ಪಿ ಬ್ಯಾಟರಿಯನ್ನು Rorr EVO ಹೊಂದಿದೆ. ಬ್ಯಾಟರಿಯನ್ನು ಬಲಿಷ್ಠವಾದ ಅಲ್ಯೂಮಿನಿಯಂ ರಚನೆಯೊಳಗೆ ಇರಿಸಲಾಗಿದ್ದು. ಅಲ್ಲದೆ, ಬ್ಯಾಟರಿಯ ಮೇಲೆ 8 ವರ್ಷಗಳ ವಾರಂಟಿ ನೀಡಲಾಗುತ್ತಿದ್ದು, ಇದು ಗ್ರಾಹಕರಲ್ಲಿ ದೀರ್ಘಕಾಲದ ಮಾಲೀಕತ್ವದ ವಿಶ್ವಾಸವನ್ನು ಮೂಡಿಸುತ್ತದೆ.

ಕಾರ್ಯಕ್ಷಮತೆಯಷ್ಟೇ ಅಲ್ಲದೆ, Rorr EVO ಪ್ರಾಯೋಗಿಕ ಬಳಕೆಯ ವಿಷಯದಲ್ಲೂ ತನ್ನ ವಿಭಾಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇದು ಈ ವಿಭಾಗದಲ್ಲೇ ಅತಿ ಉದ್ದವಾದ 680 ಮಿಮೀ ಸೀಟನ್ನು ಹೊಂದಿದ್ದು, ಸವಾರ ಮತ್ತು ಹಿಂದೆ ಕುಳಿತ ಸವಾರ ಇಬ್ಬರಿಗೂ ಆರಾಮದಾಯಕ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ನಗರ ಪ್ರದೇಶದ ಕಿರಿದಾದ ಜಾಗಗಳಲ್ಲಿ ವಾಹನವನ್ನು ಹಿಂದಕ್ಕೆ ಚಲಿಸಲು ಅನುಕೂಲವಾಗುವಂತೆ ಇದರಲ್ಲಿ ರಿವರ್ಸ್ ಮೋಡ್ ಕೂಡ ನೀಡಲಾಗಿದೆ.

780 ಮಿಮೀ ಸೀಟಿನ ಎತ್ತರ ಮತ್ತು 200 ಮಿಮೀ ಗ್ರೌಂಡ್ ಕ್ಲಿಯರೆನ್ಸ್‌ ನ ವಿಶಿಷ್ಟ ಸಂಯೋಜನೆಯು ಇದನ್ನು ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಆರಾಮದಾಯಕ ಮತ್ತು ಪ್ರಾಯೋಗಿಕ ಮೋಟಾರ್‌ ಸೈಕಲ್‌ ಗಳಲ್ಲಿ ಒಂದನ್ನಾಗಿ ಮಾಡಿದೆ.

Rorr EVO ಉತ್ತಮ ಸುರಕ್ಷತೆ ಮತ್ತು ಕನೆಕ್ಟಿವಿಟಿ ಒದಗಿಸುತ್ತದೆ. ಈ ಮೋಟಾರ್‌ ಸೈಕಲ್‌ ನಲ್ಲಿ ಫಾಲ್ ಅಲರ್ಟ್ ವಿತ್ ಎಮರ್ಜೆನ್ಸಿ ಅಸಿಸ್ಟ್ ಎಂಬ ವಿಶೇಷ ಸೌಲಭ್ಯವನ್ನು ಪರಿಚಯಿಸಲಾಗಿದ್ದು, ಇದು ವಾಹನವು ಕೆಳಗೆ ಬಿದ್ದಾಗ ಅದನ್ನು ಪತ್ತೆಹಚ್ಚಿ ಒಬೆನ್ ಆ್ಯಪ್ ಮೂಲಕ ತುರ್ತು ಎಚ್ಚರಿಕೆಗಳನ್ನು ರವಾನಿಸುತ್ತದೆ ಮತ್ತು ಅಗತ್ಯವಿದ್ದರೆ ತುರ್ತು ಸಂಪರ್ಕ ವ್ಯಕ್ತಿಗಳಿಗೆ ಮಾಹಿತಿ ನೀಡುತ್ತದೆ.

ಈ ಬಿಡುಗಡೆಯ ಕುರಿತು ಮಾತನಾಡಿದ ಒಬೆನ್ ಎಲೆಕ್ಟ್ರಿಕ್‌ ನ ಸ್ಥಾಪಕರು ಮತ್ತು ಸಿಇಒ ಮಧುಮಿತಾ ಅಗರವಾಲ್ ಅವರು , “ಭಾರತದಲ್ಲಿ ಎಲೆಕ್ಟ್ರಿಕ್ ಮೋಟಾರ್‌ ಸೈಕ್ಲಿಂಗ್ ಒಂದು ಹೊಸ ಹಂತಕ್ಕೆ ಪ್ರವೇಶಿಸುತ್ತಿದೆ. Rorr EVO ರಸ್ತೆಯ ಮೇಲೆ ಈ ಬದಲಾವಣೆಯನ್ನು ನಿಜವಾಗಿಸಲಿದೆ” ಎಂದು ಹೇಳಿದರು.

Rorr EVO ತನ್ನ ಬಲಿಷ್ಠ ಮತ್ತು ಆಕ್ರಮಣಕಾರಿ ವ್ಯಕ್ತಿತ್ವಕ್ಕೆ ಪೂರಕವಾಗಿ ಪಲ್ಸ್ ರೆಡ್, ನ್ಯೂಟ್ರಾನ್ ಬ್ಲೂ, ಮ್ಯಾಗ್ನೆಟಿಕ್ ಬ್ಲ್ಯಾಕ್ ಮತ್ತು ಫೋಟಾನ್ ವೈಟ್ ಎಂಬ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

ಮೊದಲ 10,000 ಗ್ರಾಹಕರಿಗೆ ಈ ಮೋಟಾರ್‌ ಸೈಕಲ್ Rs. 99,999 (ex-showroom) ಆರಂಭಿಕ ಆಫರ್ ಬೆಲೆಯಲ್ಲಿ ಲಭ್ಯವಿದ್ದು, ನಂತರ ಇದರ ಬೆಲೆ Rs. 1,24,999 (ex-showroom) ಆಗಿರಲಿದೆ. ಕೇವಲ ₹777 ಪಾವತಿಸಿ ಈಗಲೇ ಬುಕಿಂಗ್ ಮಾಡಬಹುದಾಗಿದ್ದು, ಜೂನ್ 2026 ರಿಂದ ದೇಶಾದ್ಯಂತ ಇರುವ ಒಬೆನ್‌ ನ 150 ಶೋರೂಮ್‌ ಗಳಲ್ಲಿ ಟೆಸ್ಟ್ ರೈಡ್ ಮತ್ತು ವಿತರಣೆಗಳು ಆರಂಭವಾಗಲಿವೆ.

Leave a Reply

Your email address will not be published. Required fields are marked *