
ವಿಶ್ವ ಅಮ್ಮಂದಿರ ದಿನಾಚರಣೆಯ ಹಾರ್ದಿಕ ಶುಭಾಶಯಗಳು..
ಅಮ್ಮಾ
ನವಮಾಸ ಪವಿತ್ರ ಗರ್ಭದಲ್ಲಿ
ಬೆಚ್ಚನೆ ಮಲಗಿದ ನಾನಲ್ಲಿ ಗರ್ಭಗುಡಿಯಲ್ಲಿ ತೊಟ್ಟಿಲು ನನಗೆ
ನಿತ್ಯ ನೆತೇರಿನಭಿಷೇಕವ ಮಾಡಿದಳು..
ಉದರುವ ಮೇಲಿನ ಸ್ಪರ್ಶಿಸುತ್ತಾ ಎಂದಳಮ್ಮ
ನೀನೆ ನನ್ನ ನಾಳೆಯ ಭರವಸೆಯ ಕಂದಮ್ಮಾ
ನನ್ನ ಕನಸು ನನಸಾಗುವ ಸಮಯ
ತಾಯಿಯ ಮನಸ್ಸಲ್ಲಿ ಎಷ್ಟೇ ನೋವಿದ್ದರೂ
ಮುಖದಲ್ಲಿ ನಗುತ್ತಾ ಇರುತ್ತಾಳೆ..
ತನ್ನೆಲ್ಲಾ ಶಕ್ತಿಮೀರಿ ನೋವನುಂಗಿ ಹೆತ್ತವಳು
ಕರುಳುಕುಡಿಯ ನಗುವ ನೋಡಲು ಕಾದಳು
ಬಿಗಿದಪ್ಪಿ ಎದೆಗೆ ಆನಂದಭಾಷ್ಪವ ಸುರಿದವಳು
ತನ್ನದೇ ಪ್ರತಿಬಿಂಬವನ್ನು ಕಂದನ ಕಣ್ಣಲ್ಲಿ ಕಂಡವಳು..
ಎಲ್ಲಾನೋವನ್ನು ಕಂದನ ನಗು ನೋಡಿ ಮರೆತವಳು
ಒಡಲಾಳದ ನೋವು ಬಚ್ಚಿಟ್ಟು ಸಹಿಸುವಳು ಆ ತಾಯಿ
ಕಂದನ ತೊದಲು ನುಡಿಯಲ್ಲಿ ಅಮ್ಮಾ
ಆ ತಾಯಿ ಅಂದಳು ಈ ಮಾತು ಕೇಳಿ ಜನ್ಮ ಪಾವನವಾಯಿತು ಎಂದಳು..
ತಾಯಿ ತನ್ನ ಸುಖ ಸಂತೋಷವನ್ನು ಬಯಸಲಿಲ್ಲ
ತನ್ನ ಆಸೆ ಆಕಾಂಕ್ಷೆಗಳು ಯಾರಲ್ಲಿ ಹೇಳಿದವಳಲ್ಲಾ
ಸೃಷ್ಟಿಕರ್ತನಿಗೂ ತಾಯಿಯೇ ದೇವರು ಎಂದೆನಿಸಿದಳು
ತಾಯಿಯ ಪ್ರೀತಿಗೆ ಹೋಲಿಕೆ ಇಲ್ಲಾ ಅವಳಿಗೆ ಯಾರು ಸರಿಸಾಟಿ ಇಲ್ಲಾ
ಈ ಜಗದ ನಿಯಮವೇ ತಾಯಿಯ ಕಣ್ಣು…ಮತ್ತೊಮ್ಮೆ ಮೂಗದೊಮ್ಮೆ ಎಲ್ಲಾ ನನ್ನ ಅಮ್ಮಂದಿರಿಗೆ ಅಮ್ಮಂದಿರ ದಿನದ ಹಾರ್ದಿಕ ಶುಭಾಶಯಗಳು..
ಮತ್ತೊಮ್ಮೆ ಮೂಗದೊಮ್ಮೆ ಎಲ್ಲಾ ನನ್ನ ಅಮ್ಮಂದಿರಿಗೆ ಅಮ್ಮಂದಿರ ದಿನದ ಹಾರ್ದಿಕ ಶುಭಾಶಯಗಳು..
ಅಮೃತಾ ಸಿದ್ದಪಾ ಚೌಧರಿ ವಿಜಯಪುರ
