ಚೆನ್ನಪಟ್ಟಣ ಬಸ್ ನಿಲ್ದಾಣದಿಂದ ಕೆಂಪೇಗೌಡ ಬಸ್ ನಿಲ್ದಾಣ, ಬೆಂಗಳೂರು ಮಾರ್ಗಕ್ಕೆ 8 ನೂತನ “ವಜ್ರ ವಿಸ್ತಾರ” ವೋಲ್ವೋ ಹವಾನಿಯಂತ್ರಿತ ಬಸ್ ಸೇವೆಗಳಿಗೆ ಚಾಲನೆ

ದಿನಾಂಕ: 08-05-2026 ರಂದು ಬೆಂ.ಮ.ಸಾ.ಸಂಸ್ಥೆಯ ವತಿಯಿಂದ ಬೆಂಗಳೂರು ದಕ್ಷಿಣ ಜಿಲ್ಲೆಯ ಚೆನ್ನಪಟ್ಟಣ ಬಸ್ ನಿಲ್ದಾಣದಿಂದ ಕೆಂಪೇಗೌಡ ಬಸ್ ನಿಲ್ದಾಣ, ಬೆಂಗಳೂರು ಮಾರ್ಗಕ್ಕೆ 8 ನೂತನ “ವಜ್ರ ವಿಸ್ತಾರ”  (ಹೊರವಲಯವು ಈಗ ಹತ್ತಿರ) ವೋಲ್ವೋ ಹವಾನಿಯಂತ್ರಿತ ಬಸ್ ಸೇವೆಗಳಿಗೆ ಚಾಲನೆ ನೀಡಲಾಯಿತು.

ಈ ನೂತನ ಸೇವೆಗೆ ಮಾನ್ಯ ಮಾಜಿ ಸಂಸದರು ಮತ್ತು ಬಾಮೂಲ್ ಅಧ್ಯಕ್ಷರಾದ ಶ್ರೀ ಡಿ.ಕೆ. ಸುರೇಶ್ ಅವರು ಹಾಗೂ ಮಾನ್ಯ ಚೆನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಸಿ.ಪಿ. ಯೋಗೇಶ್ವರ್ ಅವರು ಹಾಗೂ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ಬೆಂ.ಮ.ಸಾ.ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು (ಆ) ಶ್ರೀ ಪ್ರಭಾಕರ ರೆಡ್ಡಿ, ವೋಲ್ವೋ ವಲಯದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಶ್ರೀ ರಾಮಲಿಂಗಯ್ಯ,  ಹಾಗೂ ಬಿ.ಎಂ.ಟಿ.ಸಿ. ಮತ್ತು ಕ.ರಾ.ರ.ಸಾ. ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಯಾಣಿಕರ ಅನುಕೂಲತೆ ಹಾಗೂ ಗುಣಮಟ್ಟದ ಸಾರ್ವಜನಿಕ ಸಾರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ನೂತನ ವಜ್ರ ವಿಸ್ತಾರ ಬಸ್ ಸೇವೆಗಳು ಮಹತ್ವದ ಹೆಜ್ಜೆಯಾಗಿವೆ.

Leave a Reply

Your email address will not be published. Required fields are marked *