








ಮದಗೊಂಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸರ್ಕಾರದ ಕಾರ್ಯದರ್ಶಿ ವಿನೋತ್ ಪ್ರೀಯಾ ಭೇಟಿ :
ಯಲಹಂಕ : ಬೆಂಗಳೂರು ಉತ್ತರ ವ್ಯಾಪ್ತಿಯ ಮದಗೊಂಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಶನಿವಾರ ಸರ್ಕಾರದ ಕಾರ್ಯದರ್ಶಿ ವಿನೋತ್ ಪ್ರೀಯಾ ಅವರು ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಅವರೊಂದಿಗೆ ಭೇಟಿ ನೀಡಿ ಹಾಲಿನ ಗುಣಮಟ್ಟ ಮತ್ತು ಸಹಕಾರ ಸಂಘದ. ಸ್ವಚ್ಛತೆಯನ್ನು ಪರಿಶೀಲಿಸಿದರು.
ಇದೇ ವೇಳೆ ಮಾತನಾಡಿದ ಅವರು ಹಾಲು ಉತ್ಪಾದಕರು ಹಾಲಿನ ಗುಣಮಟ್ಟ ಮತ್ತು ಸ್ವಚತೆಗೆ ಹೆಚ್ಚಿನ ಆಧ್ಯತೆ ನೀಡಬೇಕು. ಉಳಿದಂತೆ ರಾಸುಗಳ ಕೃತಕ ಗರ್ಭಧಾರಣೆ ಮತ್ತು ಪಶು ಆಹಾರ ಸೇರಿದಂತೆ ರೈತರ ಸಮಸ್ಯೆಗಳನ್ನು ಪರಿಹರಿಸಲು ನಾವು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದರು.
ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಸತೀಶ್ ಕಡತನಮಲೆ ಅವರು ಮಾತನಾಡಿ ‘ಕರ್ನಾಟಕ ಘನ ಸರ್ಕಾರದಿಂದ ಹಾಲು ಉತ್ಪಾದಕ ರೈತರಿಗೆ ಕೃತಕ ಗರ್ಭಧಾರಣೆಗಾಗಿ ನೀಡಬೇಕಾದ 40 ಕೋಟಿ ರು. ಹಣವನ್ನು ಇಲಾಖೆಯಿಂದ ಬಿಡುಗಡೆ ಗೊಳಿಸಬೇಕೆಂದು ಕಾರ್ಯದರ್ಶಿಗಳಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಹಾಲು ಮಹಾ ಮಂಡಳ ನಿರ್ದೇಶಕ ಬಸವರಾಜು, ಕರ್ನಾಟಕ ಹಾಲು ಮಹಾ ಮಂಡಳದ ಜಂಟಿ ನಿರ್ದೇಶಕ ಕೆಂಪರಾಜು, ಬಮೂಲ್ ವ್ಯಸ್ಥಾಪಕರಾದ ಡಾ.ಎಸ್.ಟಿ. ಸುರೇಶ್, ಪ್ರಧಾನ ವ್ಯವಸ್ಥಾಪಕರಾದ ಡಾ.ಕೆ.ಸಿ ಶ್ರೀಧರ್, ಬೆಂಗಳೂರು ಉತ್ತರ ಶಿಬಿರ ಕಚೇರಿ ಉಪ ವ್ಯವಸ್ಥಾಪಕರು, ಸಿಬ್ಭಂದ್ದಿ ವರ್ಗದವರು ಸೇರಿದಂತೆ ಮದಗೊಂಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ನಿರ್ದೇಶಕರು, ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
