
















ಯಲಹಂಕ : ಕ್ಷೇತ್ರದ ಸಿಂಗನಾಯಕನಹಳ್ಳಿಯಲ್ಲಿರುವ ಶಾಸಕರ ಗೃಹಕಚೇರಿಯಲ್ಲಿ ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷರ ನೂತನ ಕಚೇರಿಯನ್ನು ಎಸ್ ಆರ್ ವಿಶ್ವನಾಥ್ ಅವರು ಗುರುವಾರ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಜಿ.ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿಗಳಾದ ವಿಶ್ವನಾಥಪುರ ಮಂಜುನಾಥ್, ಎಚ್.ಎಲ್.ಸೋಮಶೇಖರ್, ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಡಿ.ಜಿ.ಅಪ್ಪಯ್ಯಣ್ಣ, ಚೊಕ್ಕನಹಳ್ಳಿ ವೆಂಕಟೇಶ್, ಯಲಹಂಕ ನಗರ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಮುನಿರಾಜು, ಪ್ರಧಾನ ಕಾರ್ಯದರ್ಶಿ ವಿ.ಪವನ್ ಕುಮಾರ್, ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ಎಸ್. ಜಿ.ಪ್ರಶಾಂತ್ ರೆಡ್ಡಿ, ವಸಂತ್ ಅರಕೆರೆ, ಎಸ್.ಜಿ. ನರಸಿಂಹಮೂರ್ತಿ, ಪಿ.ಕೆ. ರಾಜಣ್ಣ, ನರಸೇಗೌಡ, ಲೋಕೇಶ್ ಎ.ಎಸ್., ಯುವ ಮೋರ್ಚಾ ಮುಖಂಡರಾದ ಸಾದೇನಹಳ್ಳಿ ಪ್ರಕಾಶ್ ಗೌಡ, ಪ್ರತಾಪ್, ಆಕಾಶ್, ಮಹಿಳಾ ಮುಖಂಡರಾದ ಮಂಜುಳಾ ಮಹೇಂದ್ರ, ಸರಸ್ವತಿ ಮಾಯಣ್ಣ ಸೇರಿದಂತೆ ಇನ್ನಿತರರಿದ್ದು, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಜಿ. ರಾಮಮೂರ್ತಿ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.
