

ವಿವಿಧ ಬಗೆಯ 3 ಸಾವಿರ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆ :
ಜಯಕರ್ನಾಟಕ ಜನಪರ ವೇದಿಕೆಯ ವತಿಯಿಂದ ಅರ್ಥಪೂರ್ಣ ಪರಿಸರ ದಿನಾಚರಣೆ :
ಬೆಂಗಳೂರು : ಪರಿಸರ ಸಮತೋಲನ ಕಾಪಾಡುವ ದೃಷ್ಟಿಯಿಂದ ಜಯಕರ್ನಾಟಕ ಜನಪರ ವೇದಿಕೆ, ಐಕೇರ್ ಬ್ರಿಗೇಡ್, ಐಕೇರ್ ಫೌಂಡೇಶನ್ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ ಗ್ರಾ.ಪಂ ವ್ಯಾಪ್ತಿಯ, ಕೆ.ಎಚ್.ಬಿ. 4ನೇ ಸೆಕ್ಟರ್ ನಲ್ಲಿ ವಿವಿಧ ಬಗೆಯ 3 ಸಾವಿರ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಜೆ.ಶ್ರೀನಿವಾಸ್ ಅವರು ಮಾತನಾಡಿ ‘ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ, ಶಿಕ್ಷಣ, ರೈತರ, ಯೋಧರ, ಮಹಿಳೆಯರ, ಕಾರ್ಮಿಕರ, ದೀನದಲಿತರ ಪರವಾಗಿ ಕಳೆದ ಹಲವು ವರ್ಷಗಳಿಂದ ಜಯಕರ್ನಾಟಕ ಜನಪರ ವೇದಿಕೆ ಚಳುವಳಿಗಳನ್ನು ರೂಪಿಸುತ್ತಾ ಬಂದಿದ್ದು, ಅನುಭವಿಗಳು, ಬುದ್ದಿಜೀವಿಗಳು, ಪರಿಸರವಾದಿಗಳು, ಸಾಹಿತಿಗಳು ಸೇರಿದಂತೆ ಎಲ್ಲಾ ವರ್ಗದ ಹೋರಾಟಗಾರರು ಮತ್ತು ಸ್ವಾಭಿಮಾನಿ ಕಾರ್ಯಕರ್ತರ ಜೊತೆಯಲ್ಲಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿಯವರ ನೇತೃತ್ವದಲ್ಲಿ ಜಯಕರ್ನಾಟಕ ಜನಪರ ವೇದಿಕೆಯು ಪರಿಸರ, ಅರಣ್ಯ, ವನ್ಯಜೀವಿಗಳ ಸಂರಕ್ಷಣೆಯ ಮುಖ್ಯ ದ್ಯೇಯದೊಂದಿಗೆ ಸಂವಿಧಾನ ಮತ್ತು ಕಾನೂನು ಬದ್ದವಾಗಿ ನಾಡಿನ ಸೇವಾ ಕೈಂಕರ್ಯದಲ್ಲಿ ಸಾಗುತ್ತಿದೆ ಎಂದು ವೇದಿಕೆಯ ಏಳಿಗೆ ಮತ್ತು ಸೇವಾ ಕಾರ್ಯಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಹೆಚ್.ರಾಮಚಂದ್ರಯ್ಯ, ರಾಜ್ಯ ಪ್ರಧಾನ ಸಂಚಾಲಕ ಟಿ.ಪ್ರಕಾಶ್ ಗೌಡ, ಬೆಂ.ಜಿಲ್ಲಾಧ್ಯಕ್ಷ ಪಿ.ಲೋಕೇಶ್, ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಜಿ.ಎಸ್. ಪುಷ್ಪಲತಾ, ಬೆಂ.ಜಿಲ್ಲಾ ಅಧ್ಯಕ್ಷೆ ಸುನಂದಾ ರೆಡ್ಡಿ, ಆನೇಕಲ್ ತಾಲ್ಲೂಕು ಅಧ್ಯಕ್ಷ ನವೀನ್.ಬಿ.ಎಸ್, ರಾಜ್ಯ ಸಂ.ಕಾರ್ಯದರ್ಶಿ ಗೋಪಿ, ಪವಿತ್ರಾ, ಲೋಕೇಶ್. ಆರ್ ಸೇರಿದಂತೆ ರಾಜ್ಯ ಪದಾಧಿಕಾರಿ ಗಳು, ಮಹಿಳಾ ಪದಾಧಿಕಾರಿಗಳು, ಬೆಂಗಳೂರು ಜಿಲ್ಲಾ ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಘಟಕಗಳ ಪದಾಧಿಕಾರಿಗಳಿದ್ದರು.
