ಓಪನ್ ನ್ಯಾಷನಲ್ ಸಿಲಂಬಂ ಚಾಂಪಿಯನ್‍ಷಿಪ್-2026: ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಣೆ
ತಿರುವಣ್ಣಾಮಲೈ (ತಮಿಳುನಾಡು):
ಭಾರತ್ ಸಿಲಂಬಂ ಫೆಡರೇಶನ್ (ಇಂಡಿಯಾ) ಆಯೋಜಿಸಿದ್ದ ‘ಓಪನ್ ನ್ಯಾಷನಲ್ ಸಿಲಂಬಂ ಚಾಂಪಿಯನ್‍ಷಿಪ್ – 2026’ ಕ್ರೀಡಾಕೂಟವು ತಮಿಳುನಾಡಿನ ತಿರುವಣ್ಣಾಮಲೈನ ಮಾಧವಿ ಪನ್ನೀರ್ ಮಹಲ್‌ನಲ್ಲಿ ಜುಲೈ 17, 18 ಮತ್ತು 19ರಂದು ವಿಜೃಂಭಣೆಯಿಂದ ಜರುಗಿತು.
ತಮಿಳರ ಪಾರಂಪರಿಕ ಸಮರಕಲೆಯಾದ ಸಿಲಂಬಂ ಅನ್ನು ಪ್ರೋತ್ಸಾಹಿಸುವ ಹಾಗೂ ರಾಷ್ಟ್ರಮಟ್ಟದಲ್ಲಿ ಯುವ ಪ್ರತಿಭೆಗಳನ್ನು ಗುರುತಿಸುವ ಉದ್ದೇಶದಿಂದ ಈ ಮೂರು ದಿನಗಳ ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕರ್ನಾಟಕ ತಂಡದ ತರಬೇತುದಾರಾದ ಹರಿಪ್ರಸಾದ್. ರವರು ಮಕ್ಕಳನ್ನು ಕರೆದಕೊಂಡು ಹೋಗಿ ಭಾಗವಹಿಸಲು ಅವಕಾಶ ಮಾಡಿಕೊಟ್ಟರು ಇದರಿಂದ ಈ ಮಕ್ಕಳು ಸೇರಿದಂತೆ
ಚಾಂಪಿಯನ್‍ಷಿಪ್‌ನಲ್ಲಿ ಅತ್ಯುತ್ತಮ ಸಾಧನೆ ತೋರಿದ ವಿವಿಧ ವಯೋಮಾನದ ಬಾಲಕ-ಬಾಲಕಿಯರು ಮತ್ತು ಕ್ರೀಡಾಪಟುಗಳಿಗೆ ಪಂದ್ಯಾವಳಿಯ ಸಮಾರಂಭದಲ್ಲಿ ಪ್ರಮಾಣಪತ್ರ ಹಾಗೂ ಪದಕಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಫೆಡರೇಶನ್‌ನ ಪದಾಧಿಕಾರಿಗಳು, ಹಿರಿಯ ತರಬೇತುದಾರರು ಮತ್ತು ಗಣ್ಯರು ಉಪಸ್ಥಿತರಿದ್ದು, ವಿಜೇತ ಮಕ್ಕಳನ್ನು ಅಭಿನಂದಿಸಿ ಶುಭ ಹಾರೈಸಿದರು. ಕರ್ನಾಟಕದ ಭಾಗವಹಿಸಿದ ಮಕ್ಕಳುಕರ್ನಾಟಕ ಸಿಲಂಬಂ ತಂಡ
1.ಆಕರ್ಷ್ ರೆಡ್ಡಿ. ವಿ 13 ವರ್ಷ ( ಕಂಚಿನ ಪದಕ )
2.ನೀತು ರೆಡ್ಡಿ .ವಿ 8 ವರ್ಷ ( ಕಂಚಿನ ಪದಕ)
3.ಯಶ್ ವಂತ್ .ಎಚ್ 8 ವರ್ಷ ( ಬೆಳ್ಳಿಯ ಪದಕ )
ಮಾಧುರಿ. ಎಚ್ 10 ವರ್ಷ ( ಬೆಳ್ಳಿಯ ಪದಕ )
ಬಿಂದು. ಎಚ್ 11 ವರ್ಷ ( ಚಿನ್ನದ ಪದಕ )
ತೇಜಸ್ವಿನಿ. ಎಸ್ ವಿ 14 ವರ್ಷ ( ಚಿನ್ನದ ಪದಕ )
ನಮಿತ. ಎಸ್ 10 ವರ್ಷ (ಕಂಚಿನ ಪದಕ )
ಆದ್ಯ. 5 ವರ್ಷ ( ಬೆಳ್ಳಿಯ ಪದಕ )
ಮಹೇಶ್.ಕೆ ಆರ್ 14 ವರ್ಷ ( ಕಂಚಿನ ಪದಕ)
ಯಶ್ವಿಕ.ಪಿ 5 ವರ್ಷ ( ಕಂಚಿನ ಪದಕ )
ಅಂಜ್ಲಿನ.10 ವರ್ಷ ( ಕಂಚಿನ ಪದಕ )
ಮೇರಿ ಜಾನಕಿ.ಎ 14 ವರ್ಷ ( ಕಂಚಿನ ಪದಕ )

Leave a Reply

Your email address will not be published. Required fields are marked *