

ಅವೋರ್ ಎಲೆಕ್ಟ್ರಿಕ್ ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಇಎಕ್ಸ್ ಅನ್ನು ಬಿಡುಗಡೆ ಮಾಡಿದೆ; ಆರಂಭಿಕ ಬೆಲೆ ರೂ. 1,24,999
• ಸ್ವದೇಶಿ ಅವೋರ್ ಸೋರ್ಸ್ ತಂತ್ರಜ್ಞಾನ ಹಾಗೂ ಎವಿಆರ್ ವಾಹನ ಪ್ಲಾಟ್ ಫಾರ್ಮ್ ಆಧಾರದ ಮೇಲೆ ನಿರ್ಮಿಸಲಾದ ಅವೋರ್ ಎಲೆಕ್ಟ್ರಿಕ್ ನ ಮೊದಲ ಮೋಟಾರ್ ಸೈಕಲ್.
• ಇಎಕ್ಸ್ 2ಎಸ್, ಇಎಕ್ಸ್ 2 ಮತ್ತು ಇಎಕ್ಸ್ 1 ಎಂಬ ಮೂರು ವೆರಿಯೆಂಟ್ ಗಳಲ್ಲಿ ಲಭ್ಯವಿದೆ.
• ಪ್ರತಿ ಚಾರ್ಜ್‌ಗೆ 260 ಕಿ.ಮೀ ವರೆಗಿನ ಐಡಿಸಿ ರೇಂಜ್ ಮತ್ತು ಗಂಟೆಗೆ 114 ಕಿ.ಮೀ ಗರಿಷ್ಠ ವೇಗ ನೀಡುತ್ತದೆ.
• ಉದ್ಯಮದಲ್ಲೇ ಮೊದಲ ಬಾರಿಗೆ ಸಂಯೋಜಿತ ಮೋಟಾರ್ + ಸ್ವಿಂಗ್ ಆರ್ಮ್ ಪವರ್ ಟ್ರೇನ್, 1500ವ್ಯಾಟ್ ಆನ್ ಬೋರ್ಡ್ ಫಾಸ್ಟ್ ಚಾರ್ಜರ್ ಮತ್ತು ಬುದ್ಧಿವಂತ ರೈಡರ್ ತಂತ್ರಜ್ಞಾನಗಳನ್ನು ಹೊಂದಿದೆ.
• 120ಕ್ಕೂ ಹೆಚ್ಚು ಬೌದ್ಧಿಕ ಆಸ್ತಿ (ಐಪಿ) ಫೈಲಿಂಗ್ ಗಳೊಂದಿಗೆ ಮೂರು ವರ್ಷಗಳ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.
• ರೂ. 799 ರಿಂದ ಬುಕಿಂಗ್ ಪ್ರಾರಂಭ; 2 ತಿಂಗಳ ನಂತರ ಡೆಲಿವರಿಗಳು ಆರಂಭವಾಗಲಿವೆ.
ಬೆಂಗಳೂರು, 28 ಜುಲೈ 2026: ಸಮರ್ಥ್ ಇ-ಮೊಬಿಲಿಟಿ ಸಂಸ್ಥೆಯ ಭಾಗವಾಗಿರುವ ಭಾರತದ ತಂತ್ರಜ್ಞಾನ ಆಧಾರಿತ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ತಯಾರಕ ಸಂಸ್ಥೆ ಅವೋರ್ ಎಲೆಕ್ಟ್ರಿಕ್, ತನ್ನ ಮೊದಲ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಅವೋರ್ ಎಲೆಕ್ಟ್ರಿಕ್ ಇಎಕ್ಸ್ ಅನ್ನು ಬಿಡುಗಡೆ ಮಾಡಿದೆ. ಇಎಕ್ಸ್ 2ಎಸ್, ಇಎಕ್ಸ್ 2 ಮತ್ತು ಇಎಕ್ಸ್ 1 ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿರುವ ಈ ಬೈಕ್ ನ ಆರಂಭಿಕ ಬೆಲೆ ರೂ. 1,24,999 (ಎಕ್ಸ್ ಶೋರೂಮ್). ಸ್ವದೇಶಿ ತಂತ್ರಜ್ಞಾನ, ಜಾಣ್ಮೆಯ ಎಂಜಿನಿಯರಿಂಗ್ ಮತ್ತು ದೈನಂದಿನ ಬಳಕೆಗೆ ಸೂಕ್ತವಾದ ವಿನ್ಯಾಸದ ಮೂಲಕ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಸವಾರಿಯನ್ನು ಮತ್ತಷ್ಟು ಸೊಗಸಾಗಿಸಲು ಈ ಇಎಕ್ಸ್ ಬೈಕ್ ಅನ್ನು ಆರಂಭದಿಂದಲೇ ವಿಶೇಷವಾಗಿ ರೂಪಿಸಲಾಗಿದೆ.
ಬುದ್ಧಿವಂತಿಕೆ ಅಥವಾ ತಂತ್ರಜ್ಞಾನ ಎಂಬುದು ದ್ವಿಚಕ್ರ ವಾಹನಕ್ಕೆ ಸೇರಿಸುವ ಬರಿ ಹೆಚ್ಚುವರಿ ವೈಶಿಷ್ಟ್ಯವಾಗಬಾರದು, ಬದಲಿಗೆ ಅದು ವಾಹನದ ನಿರ್ಮಾಣದ ಮೂಲ ಬುನಾದಿಯಾಗಬೇಕು ಎಂಬ ನಂಬಿಕೆಯೊಂದಿಗೆ ಅವೋರ್ ಎಲೆಕ್ಟ್ರಿಕ್ ಕಾರ್ಯನಿರ್ವಹಿಸುತ್ತದೆ. ಚಲನೆಗೂ ಮೀರಿದ ಬುದ್ಧಿವಂತಿಕೆ ಎಂಬ ತನ್ನ ಟ್ಯಾಗ್ ಲೈನ್ ನಲ್ಲಿ ಬ್ರ್ಯಾಂಡ್ ತನ್ನ ಈ ತತ್ವವನ್ನು ಸಾರಿದೆ.
ಅತ್ಯುನ್ನತ ವೇರಿಯೆಂಟ್ ಗಳಾದ ಇಎಕ್ಸ್ 2ಎಸ್ ಮತ್ತು ಇಎಕ್ಸ್ 2 ಮಾದರಿಗಳು ಕ್ರಮವಾಗಿ 260 ಕಿ.ಮೀ ಹಾಗೂ 255 ಕಿ.ಮೀ ಐಡಿಸಿ-ಪ್ರಮಾಣೀಕೃತ ರೇಂಜ್ ನೀಡುತ್ತವೆ.
ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ ಆಧಾರ
ಅವೋರ್ ಇಎಕ್ಸ್ ಮೋಟಾರ್ ಸೈಕಲ್, ಕಂಪನಿಯ ಸ್ವಂತ ಅವೋರ್ ಸೋರ್ಸ್ ತಂತ್ರಜ್ಞಾನ ಹಾಗೂ ಪ್ರತ್ಯೇಕವಾಗಿ ಎಲೆಕ್ಟ್ರಿಕ್ ಬೈಕ್ ಗಳಿಗಾಗಿಯೇ ವಿನ್ಯಾಸಗೊಳಿಸಲಾದ ಎವಿಆರ್ ವಾಹನ ಪ್ಲಾಟ್ ಫಾರ್ಮ್ ಆಧಾರದಲ್ಲಿ ನಿರ್ಮಾಣಗೊಂಡಿದೆ.
ಈ ಕುರಿತು ಅವೋರ್ ಎಲೆಕ್ಟ್ರಿಕ್ ಸಂಸ್ಥಾಪಕರಾದ ಪ್ರಿಯಾಂಕ್ ರಖೋಲಿಯಾ ಅವರು, “ನಾವು ಇಎಕ್ಸ್ ಬೈಕ್ ಅನ್ನು ಮಾರುಕಟ್ಟೆಗೆ ತರುವ ಮುನ್ನ ಮೂರು ವರ್ಷಗಳ ಕಾಲ ಸಂಶೋಧನೆ, ಅಭಿವೃದ್ಧಿ ಮತ್ತು ಕಠಿಣ ಪರೀಕ್ಷೆಗಳಿಗೆ ಒಳಪಡಿಸಿದ್ದೇವೆ. ಭಾರತದಲ್ಲೇ ಅಭಿವೃದ್ಧಿಪಡಿಸಿದ ಎಲೆಕ್ಟ್ರಿಕ್ ತಂತ್ರಜ್ಞಾನದ ಗಡಿಗಳನ್ನು ಹಿಗ್ಗಿಸುತ್ತಾ, ಜಾಗತಿಕ ಮಟ್ಟದ ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಒದಗಿಸುವುದು ನಮ್ಮ ಗುರಿ. ಭಾರತದ ಪ್ರತಿಯೊಬ್ಬರಿಗೂ ವಿಶ್ವ ದರ್ಜೆಯ ಎಲೆಕ್ಟ್ರಿಕ್ ವಾಹನಗಳನ್ನು ತಲುಪಿಸುವ ನಮ್ಮ ಪ್ರಯಾಣಕ್ಕೆ ಇಎಕ್ಸ್ ಬೈಕ್ ಬಿಡುಗಡೆ ಒಂದು ಹೊಸ ಮುನ್ನುಡಿ” ಎಂದು ಹೇಳಿದರು.
ಬುಕಿಂಗ್ ಮತ್ತು ಲಭ್ಯತೆ
ಬೈಕ್ ನ ಅಧಿಕೃತ ಬುಕಿಂಗ್ ಗಳು ಕಂಪನಿಯ ವೆಬ್ ಸೈಟ್ ನಲ್ಲಿ ತಕ್ಷಣವೇ ಪ್ರಾರಂಭಗೊಂಡಿದ್ದು, ರೂ. 799 ನೀಡಿ ಬುಕ್ ಮಾಡಬಹುದಾಗಿದೆ. ಬುಕಿಂಗ್ ಮಾಡಿದ 2 ತಿಂಗಳ ನಂತರ ಗ್ರಾಹಕರಿಗೆ ಬೈಕ್ ವಿತರಣೆ ಆರಂಭವಾಗಲಿದೆ. ಬರುವ ಮುಂದಿನ ತಿಂಗಳಿನಿಂದ ದೇಶದ ಪ್ರಮುಖ ನಗರಗಳ ಶೋರೂಮ್‌ಗಳಲ್ಲಿ ಅವೋರ್ ಇಎಕ್ಸ್ ಪ್ರದರ್ಶನಕ್ಕೆ ಲಭ್ಯವಿರಲಿದೆ.
ಹೆಚ್ಚಿನ ಮಾಹಿತಿಗಾಗಿ ಅವೋರ್ ಎಲೆಕ್ಟ್ರಿಕ್ ನ ಅಧಿಕೃತ ವೆಬ್ ಸೈಟ್ ಹಾಗೂ ಇನ್‌ಸ್ಟಾ ಗ್ರಾಮ್, ಫೇಸ್‌ಬುಕ್ ಮತ್ತು ಯೂಟ್ಯೂಬ್ ಪುಟಗಳಿಗೆ ಭೇಟಿ ನೀಡಬಹುದು.
