ಬೆಂಗಳೂರು, ಅಕ್ಟೋಬರ್ 17, 2023: ಬ್ರೇಕ್ ಫಾಸ್ಟ್ ಅಥವಾ ಬೆಳಗಿನ ಉಪಹಾರ ಮೆನುಗೆ ಮತ್ತಷ್ಟು ಸೇರ್ಪಡೆ ಮಾಡುವ ನಿಟ್ಟಿನಲ್ಲಿ ನೆಸ್ಲೆ ಬ್ರೇಕ್ ಫಾಸ್ಟ್ ಸೀರಿಯಲ್ಸ್ ಕೊಕೊ ಕ್ರಂಚ್ ಮಿಲ್ಲೆಟ್- ಜೋವರ್ ಮತ್ತು ಮಂಚ್ ಬ್ರೇಕ್ ಫಾಸ್ಟ್ ಸೀರಿಯಲ್ಸ್ (KOKO KRUNCH Millet-Jowar andMUNCH Breakfast Cereals) ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನಾವೀನ್ಯತೆ ಮತ್ತು ಉತ್ಪನ್ನದ ನವೀಕರಣವು ಪ್ರಮುಖ ಸ್ಥಾನದಲ್ಲಿದ್ದು, ನೆಸ್ಲೆ ಇಂಡಿಯಾ ವಿವಿಧ ಉಪಹಾರ ಧಾನ್ಯಗಳ ಆಯ್ಕೆಗಳನ್ನು ನಿರಂತರವಾಗಿ ನೀಡುತ್ತಾ ಬಂದಿದೆ.
ಕೊಕೊ ಕ್ರಂಚ್ ಮಿಲ್ಲೆಟ್ –ಜೋವ್ ಬ್ರೇಕ್ ಫಾಸ್ಟ್ ಸೀರಿಯಲ್ಸ್ ನವೀಕರಣದ ದಿಕ್ಕಿನಲ್ಲಿ ಇಡುತ್ತಿರುವ ಒಂದು ಹೆಜ್ಜೆಯಾಗಿದ್ದು, ಅಲ್ಲಿ “ಧಾನ್ಯಗಳ ರಾಜ’’ ಎಂದೂ ಕರೆಯಲ್ಪಡುವ ಜೋಳದಂತಹ ಸ್ಥಳೀಯ ಧಾನ್ಯಗಳನ್ನು ಅಕ್ಕಿ ಮತ್ತು ಗೋಧಿಯಂತಹ ಹಾಲಿ ಇರುವ ಪದಾರ್ಥಗಳೊಂದಿಗೆ ಪರಿಚಯಿಸಲಾಗಿದೆ. ಇದರ ಅತ್ಯುತ್ತಮ ಚಾಕೊಲೇಟ್ ರುಚಿಯೊಂದಿಗೆ ಕೊಕೊ ಕ್ರಂಚ್ ಕುಟುಂಬವನ್ನು ಅತ್ಯಂತ ವಿನೋದದಿಂದ ದಿನವನ್ನು ಆರಂಭ ಮಾಡಲು ನೆರವಾಗುತ್ತದೆ.
ಸಾಂದರ್ಭಿಕ ಮತ್ತು ಹೆಚ್ಚು ರುಚಿಕಟ್ಟಾದ ಉಪಹಾರದ ಆಯ್ಕೆಯನ್ನು ಹುಡುಕುತ್ತಿರುವವರನ್ನು ಸಂತೋಷಪಡಿಸುವ ನಿಟ್ಟಿನಲ್ಲಿ ಮಂಚ್ ಬ್ರೇಕ್ ಫಾಸ್ಟ್ ಸೀರಿಯಲ್ಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಮೂರು ಧಾನ್ಯಗಳಾದ ಗೋಧಿ ಹಿಟ್ಟು, ಅಕ್ಕಿ ಮತ್ತು ಜೋಳದಿಂದ ತಯಾರಿಸಲ್ಪಟ್ಟಿದೆ. ಈ ಮೂಲಕ ದಿನವನ್ನು ಆರಂಭಿಸಲು ರುಚಿಕಟ್ಟಾದ, ಕುರುಕುಲಾದ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತದೆ.
ನೆಸ್ಲೆ ಇಂಡಿಯಾದ ಬ್ರೇಕ್ ಫಾಸ್ಟ್ ಸೀರಿಯಲ್ಸ್ ನ ಮುಖ್ಯಸ್ಥ ಗೋಪಿಚಂದರ್ ಜಗದೀಶನ್ ಅವರು ಮಾತನಾಡಿ, “ದಿನವನ್ನು ಆರಂಭಿಸಲು ಬೆಳಗಿನ ಉಪಹಾರ ಅತ್ಯಂತ ಪ್ರಮುಖವಾಗಿರುತ್ತದೆ. ನಮ್ಮ ಗ್ರಾಹಕರಿಗೆ ಇನ್ನಷ್ಟು ವೈವಿಧ್ಯತೆಯನ್ನು ಪೂರೈಸುವ ದೃಷ್ಟಿಯಿಂದ ಕೊಕೊ ಕ್ರಂಚ್ ಮಿಲ್ಲೆಟ್-ಜೋವರ್ ಮತ್ತು ಮಂಚ್ ಬ್ರೇಕ್ ಫಾಸ್ಟ್ ಸೀರಿಯಲ್ಸ್ ಅನ್ನು ಪೋರ್ಟ್ ಫೋಲಿಯೋಗೆ ಸೇರ್ಪಡೆ ಮಾಡುವ ಮೂಲಕ ವಿಸ್ತರಣೆ ಮಾಡಿದ್ದೇವೆ. ಈ ಎರಡು ಹೊಸ ಉತ್ಪನ್ನಗಳೊಂದಿಗೆ ನಾವು ನಮ್ಮ ಗ್ರಾಹಕರ ಅಭಿರುಚಿಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಉಪಹಾರ ಆಯ್ಕೆಗಳನ್ನು ಮಾಡಿಕೊಳ್ಳಲು ನೆರವಾಗುತ್ತಿದ್ದೇವೆ’’ ಎಂದರು.
ಭಾರತದಲ್ಲಿ 2018 ರಲ್ಲಿ ನೆಸ್ಲೆ ಬ್ರೇಕ್ ಫಾಸ್ಟ್ ಸೀರಿಯಲ್ಸ್ ಅನ್ನು ಪರಿಚಯಿಸಲಾಗಿದ್ದು, ಭಾರತೀಯ ಕುಟುಂಬಗಳಿಗೆ ಹೊಂದಿಕೊಳ್ಳುವಂತಹ ವಿವಿಧ ಬ್ರೇಕ್ ಫಾಸ್ಟ್ ಸೀರಿಯಲ್ ಆಯ್ಕೆಗಳನ್ನು ನೀಡುತ್ತಾ ಬರುತ್ತಿದೆ.

