






















ಯಲಹಂಕ. ಹೆಬ್ಬಾಳ. ಕೆನಶ್ರೀ ಶಾಲೆ 75 ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಕಟ್ಟುವಿಕೆಯ (ನೇಷನ್ ಬಿಲ್ಡಿಂಗ್ ) ಸಪ್ತಾಹವನ್ನು ಹಮ್ಮಿಕೊಳ್ಳಲಾಗಿತ್ತು. ಅದರ ಅಂಗವಾಗಿ ದೇಶದ , ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳು, ನೆರೆಯ ದೇಶಗಳು ಮತ್ತು ನಮ್ಮ ದೇಶದ ಅಸ್ತಿತ್ವವನ್ನು ಸಾರುವ, ಸನಾತನ ಧರ್ಮ ಮತ್ತು ವಸುದೈವ ಕುಟುಂಬಕಮ್ ಅನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು ತುಂಬಾ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಕಾರ್ಯಕ್ರಮದ ಅಂಗವಾಗಿ ಕೆನ್ ಶ್ರೀ ಶಾಲೆಯ ಆವರಣದಲ್ಲಿ ರಕ್ತದಾನ ಶಿಬಿರ, ಮತ್ತು ಅಂಗಾಂಗಗಳ ದಾನ . ದೈಹಿಕ ತಪಾಸಣೆ, ಮತ್ತು ಮಧುಮೇಹ, ರಕ್ತಚಲನೆ ಪರೀಕ್ಷೆಗಳನ್ನು ಆಯೋಜಿಸಲಾಯಿತು. ಸಾರ್ವಜನಿಕರೂ , ಪೋಷಕರು ಕೂಡ ಇದರಲ್ಲಿ ಅತಿ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದು ಕೊಟ್ಟರು.
5 ನೇ ತರಗತಿ ವಿದ್ಯಾರ್ಥಿಗಳು ಹೀಗೆ ಸಾರಿದರು.
ಬೆಂಗಳೂರಿನಲ್ಲಿ ಸಿಖ್ಖರೊಂದಿಗೆ, ಪಾರ್ಸಿಗಳು, ಸಿಂಧಿಗಳು, ಕಾಶ್ಮೀರಿ ಪಂಡಿತರು, ಇವರುಗಳ ಜೊತೆಗೆ ಅನ್ಯೂನ್ಯವಾಗಿ ಇರೋಣ ಎಂದು .
ನಮ್ಮ 6 ನೇ ತರಗತಿ ವಿದ್ಯಾರ್ಥಿಗಳು ”ಸಹಾನುಭೂತಿ ಮತ್ತು ಪೌರತ್ವ” ಈ ಆಯ್ಕೆಯ ಕಾರ್ಯಕ್ಕೆ ಅನುಗುಣವಾಗಿ ,ದೈಹಿಕವಾಗಿ ಮತ್ತು ಮಾನಸಿಕರಾಗಿರುವ ವಿಕಲ ಚೇತನರು,ಹಾಗು ತೃತೀಯ ಲಿಂಗಿಗಳನ್ನು ಕರೆಸಲಾಯಿತು.
ಹೆಣ್ಣೂರು, ಮಾನ್ಯತಾ, ಲುಂಬಿನಿ ಗಾರ್ಡನ್ ಪ್ರದೇಶಗಳಲ್ಲಿ ಮತ್ತು ಚರ್ಚ್ ಮುಂದೆ ಬೀದಿ ನಾಟಕಗಳನ್ನು (ಸ್ಟ್ರೀಟ್ ಪ್ಲೇ) ಪ್ರದರ್ಶಿಸಿ, ”ಅನುಭವ ಮತ್ತು ಅತ್ಯುತ್ತಮ ಮಾರ್ಗದರ್ಶಕರಾದ ಹಿರಿಯರ ” ಬಗ್ಗೆ ಆಲೋಚಿಸುವಂತೆ ಮಾಡಿದರು.
7 ನೇ ತರಗತಿ ವಿದ್ಯಾರ್ಥಿಗಳು ವೃದ್ಧಾಶ್ರಮಗಳನ್ನು ನಿಷೇಧಿಸಿ ಮತ್ತು ಶಾಲೆಯ ಸುತ್ತಮುತ್ತಲಿನ ಮನೆಗಳಿಂದ ಹಿರಿಯರನ್ನು ಕರೆತಂದು ಅವರನ್ನು ತಮ್ಮ ಉತ್ತಮ ಮಾರ್ಗದರ್ಶಿಗಳು ಎಂದು ಘೋಶಿಸಲಾಯಿತು.
ಈಶಾನ್ಯ ಟಿಬೆಟಿಯನ್ನರು, ಬೆಂಗಳೂರು ನಾಗರಿಕರು ಹೀಗೆ ಹಲವು ಪ್ರಜೆಗಳನ್ನು 8 ನೇ ತರಗತಿ ವಿದ್ಯಾರ್ಥಿಗಳು ಮತ್ತು 9 ನೇ ತರಗತಿ ವಿದ್ಯಾರ್ಥಿಗಳು – ಅತಿಥಿಯನ್ನಾಗಿ ಆಹ್ವಾನಿಸಲು ಸಹಕರಿಸಿದರು.
ಕಸದ ತೊಟ್ಟಿಗಳನ್ನ (ಡಸ್ಟ್‌ಬಿನ್ಸ್) ಮತ್ತು ಕಸದ ವಿಂಗಡಣೆ ಸೂಚನಾ ಫಲಕಗಳನ್ನು ಮತ್ತು ಅಂಟಿಸಲೂ ಸ್ಟಿಕ್ಕರ್ ಕೂಡ ಡಿಫೆನ್ಸ್ ಕಾಲೋನಿಯಲ್ಲಿ ವಿತರಿಸಿದರು.
ಸ್ವಚ್ಚ ಭಾರತ ಸ್ವಸ್ಥ ಭಾರತ ಎಂಬ ಆಶಯದೊಂದಿಗೆ ನೆರೆಹೊರೆಯ ಪ್ರದೇಶವನ್ನು ಸ್ವಚ್ಛಗೊಳಿಸಿ, ಶಾಲೆಯ ಸುತ್ತಲೂ ಸ್ವಚ್ಚ ಮಾಡಲಾಯಿತು.
ಮಕ್ಕಳ ವಾರ್ಷಿಕ ಫಲಿತಾಂಶಗಳ ಯೋಜನೆ, ಮತ್ತು ಅವುಗಳಿಗೆ ಬೇಕಾದ ಪಾಠಪೂರ್ವಕ ಕ್ರಮಗಳ ಬಗ್ಗೆ ಪೋಷಕರೊಂದಿಗೆ ಚರ್ಚಿಸಲಾಯಿತು.
ನಿರಂತರವಾಗಿ , ಹಿರಿಯನಾಗರೀಕರಾದ ಅಜ್ಜಿಯರು,
ನಗೆಯ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಲಾಯಿತು (ಯೋಗ ಮತ್ತು ಲಾಫ್ಟರ್ ಕ್ಲಬ್)
ಅಣಕು ಪಂಚಾಯತ್ ಗ್ರಾಮದ ಸಮಸ್ಯೆಗಳು (ಗ್ರಾಮ ಪಂಚಾಯತ್ ) ಎಂಬ ವಿಷಯಕ್ಕೆ ಸಂಬಂಧಿಸಿದಂತೆ ,ಶಾಲಾ ಮೈದಾನದ ಮರದ ಕೆಳಗೆ, ಕುಳಿತು ,ರಾಜ್ಯ ಕ್ಷೇತ್ರಗಳ ಅಣಕು ರಾಜ್ಯಸಭೆ (ಅಸೆಂಬ್ಲಿ) ಮತ್ತು ಅದರ ಸಮಸ್ಯೆಗಳಿಗೆ ಉತ್ತರವನ್ನು ಕಂಡು ಕೊಳ್ಳಲಾಯಿತು.
ಸಾಮಾಜಿಕ ಪ್ರಯೋಗಾಲಯ,
ಐದು ವಿವಿಧ ರಾಜ್ಯಗಳ ಅಣಕು ಸಂಸತ್ತಿನ ಸಮಸ್ಯೆಗಳು ಗಣಿತ ಪ್ರಯೋಗಾಲಯ ,ವಿವಿಧ ರಾಜ್ಯಗಳ ಅಣಕು ಸಂಸತ್ತಿನ ಸಮಸ್ಯೆಗಳು, ಬಯೋ ಲ್ಯಾಬ್ ವಿವಿಧ ರಾಜ್ಯಗಳ ಅಣಕು ಸಂಸತ್ತಿನ ಸಮಸ್ಯೆಗಳನ್ನು ಕುರಿತ ಚರ್ಚಿಸಲಾಯಿತು. ಮತ್ತು ನಲವತ್ತಾರು ವಿವಿಧ ಸಂಸ್ಕೃತಿಗಳ ಕುರಿತು ಸ್ಟಾಲ್ ಗಳನ್ನು ಕ್ರೀಡಾ ಮೈದಾನದಲ್ಲಿ ಆಯೋಜನೆ ಮಾಡಿ, ಅಲ್ಲಿಗೆ ಯುವ ಅತಿಥಿಗಳಾಗಿ ಲೆಫ್ಟಿನೆಂಟ್ ಕಮಾಂಡರ್ ಆದರ್ಶ್ ರವರನ್ನು ಕರೆಸಲಾಯಿತು.ಅವರು ಕೂಡ ಅತ್ಯಂತ ಸೊಗಸಾಗಿ ಉದ್ಘಾಟನೆ ಮಾಡಿದರು.
ಅಂತರಾಷ್ಟ್ರೀಯ ವ್ಯಾಜ್ಯಗಳನ್ನು (ಮೂಟ್ ಐಸಿಜೆ) ಪರಿಹರಿಸುವ , ವಿಶ್ವಸಂಸ್ಥೆ (ಯುಎನ್) ಇನ್ನು ಪ್ರಪಂಚದ ವಾಸ್ತವವನ್ನು ಪ್ರತಿಬಿಂಬಿಸುವುದಿಲ್ಲ, ಸುಧಾರಣೆಗಳ ಅಗತ್ಯವಿದೆ: (ಎಸ್ ಜೈಶಂಕರ್)
ಉಕ್ರೇನ್ ಮತ್ತು ರಷ್ಯಾದ ಯುದ್ಧ/ ಪ್ಯಾಲೆಸ್ಟೈನ್ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿ ಮಕ್ಕಳನ್ನು ತರ್ಕಯುಕ್ತವಾದ ವಿಷಯಗಳನ್ನೊಳಗೊಂಡಂತೆ ಹಲವು ಅಂಶಗಳನ್ನು ತಿಳಿಯುವಂತೆ ಮಾಡಲಾಯಿತು.
ಅತಿಥಿ – ಥೀಮ್ ಪ್ಲೇನ ಭಾಗವಾಗಿ ( ಪ್ರದರ್ಶನಕ್ಕೆ ಎಲ್ಲಾ ಸಮುದಾಯಗಳ ಅತಿಥಿಗಳನ್ನು ಆಹ್ವಾನಿಸಲಾಗುತ್ತದೆ
ಕುಟುಂಬ ,ಸಮುದಾಯ, ರಾಜ್ಯ, ದೇಶ , ಖಂಡ,
ವಿಶ್ವ, ಹೀಗೆ ಎಲ್ಲಾ ಬಗೆಯ ಪ್ರದರ್ಶನಕ್ಕೆ ಎಲ್ಲಾ ಸಮುದಾಯಗಳ ಅತಿಥಿಗಳನ್ನು ಆಹ್ವಾನಿಸಲಾಗುತ್ತದೆ.
ಭಾರತ್ ಕಲ್ ಆಜ್ ಕಲ್ (ಭಾರತ ಇಂದೂ ಮತ್ತು ನಾಳೆ) ಎಂಬ ನಾಟಕದೊಂದಿಗೆ ಐದು ಮತ್ತುಆರು ತರಗತಿಗಳ ವಿದ್ಯಾರ್ಥಿಗಳು ,ಪರಾಕಾಷ್ಠೆಯಿಂದ ಮೆರೆಯುವಂತಾಯಿತು.
ಮಾದರಿ ವಿಶ್ವಸಂಸ್ಥೆ ಹೇಗಿರ ಬೇಕು ಎಂಬ ವಾದವನ್ನು
ಕೆನ್ ಶ್ರೀ ಶಾಲೆ ಮತ್ತು ಕಾಲೇಜಿನ ಮಕ್ಕಳೊಂದಿಗೆ ನಡೆಸಲಾಯಿತು.
ಇದರ ಗುರಿ ಅಥವ ಉದ್ದೇಶ ಹೀಗಿತ್ತು.
“ಯುನೈಟೆಡ್ ನೇಷನ್ಸ್ ಇನ್ನು ಮುಂದೆ ಪ್ರಪಂಚದ ವಾಸ್ತವತೆಯನ್ನು ಪ್ರತಿಬಿಂಬಿಸುವುದಿಲ್ಲ, ಸುಧಾರಣೆಗಳ ಅಗತ್ಯವಿದೆ”
ಸುಮಾರು 100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿ ವಿಷಯದ ಕುರಿತು ಚರ್ಚೆ ನಡೆಸಿದರು. ಭಾಗವಹಿಸಿದವರನ್ನು, ಅವರು ಮಾತನಾಡುವ ಕೌಶಲ್ಯ, ವಿಷಯ ಮತ್ತು ಪ್ರಸ್ತುತಿ ಪಡಿಸಿದ ರೀತಿಯಿಂದ ನಿರ್ಣಯಿಸಲಾಯಿತು. ಅತ್ಯುತ್ತಮ ಪ್ರತಿನಿಧಿ, ಉತ್ತಮ ನಿಯೋಗ, ಅತ್ಯುತ್ತಮ ಸ್ಥಾನ, ಪ್ರತಿಷ್ಠೆ, ಪ್ರಶಸ್ತಿಗಳು ಇದ್ದವು.
ಇದು ವಿದ್ಯಾರ್ಥಿಗಳ ಯಶಸ್ವಿ ಪ್ರಯತ್ನವಾಗಿದೆ.
ಕೆನ್‌ಶ್ರೀ ಶಾಲೆ ಮತ್ತು ಕಾಲೇಜು,ಈ ವಿಷಯಗಳ ಬಗ್ಗೆ ವಾದ ಪ್ರತಿವಾದವನ್ನು ನಡೆಸಿತು. ಅಂತಿಮ ಸುತ್ತಿನ ವಿಷಯವು ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ಬಗೆಗೆ ಇತ್ತು. ಪ್ರತಿವಾದಿ ಮತ್ತು ತಂಡಗಳು ತಮ್ಮ ವಾದವನ್ನು ಉತ್ತಮವಾಗಿ ಮಂಡಿಸಿದರು.
ಇಂದಿನ ಮುಖ್ಯ ಅತಿಥಿಗಳಾಗಿ ಶ್ರೀ. ಚಿರಂಜೀವಿ ಸಿಂಗ್. UNESCO ಫ್ರಾನ್ಸ್‌ನ ಮಾಜಿ ರಾಯಭಾರಿ, ನಿವೃತ್ತ. ಐಎಎಸ್ ಅಧಿಕಾರಿ. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಖ್ ಧರ್ಮ ಮತ್ತು ಸನಾತನ ಧರ್ಮದ ಬಗ್ಗೆ ತಿಳುವಳಿಕೆ ನೀಡಿದರು.
3 ನೇ ತರಗತಿಯ ವಿದ್ಯಾರ್ಥಿಗಳು ಈ ಚಟುವಟಿಕೆಯನ್ನು ನಡೆಸಿದರು
ಅಣಕು ಪಂಚಾಯತ್ (ಗ್ರಾಮ ಪಂಚಾಯತ್)
ಹಳ್ಳಿಗಳ ಸಮಸ್ಯೆಗಳು ಎಂಬ ವಿಷಯಾಧಾರಿತವಾಗಿ
ವಿದ್ಯಾರ್ಥಿಗಳು ಸರಪಂಚ್ / ಪಂಚಾಯತ್ ವೇಷಭೂಷಣದಲ್ಲಿ ಬಂದರು.
ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳು, ಹಳ್ಳಿಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಗ್ರಾಮಸ್ಥರ ವೇಷದಲ್ಲಿ ಬಂದು ಮಾತನಾಡಲು ಮುಂದಾದರು…
ಮಕ್ಕಳು ತಮ್ಮ ಹಳ್ಳಿಗಳ ಸಮಸ್ಯೆಗಳಾದ ಜಮೀನು ಸಮಸ್ಯೆ, ಹುಣಸೆ ಮರ, ಬೇಟೆ ಮತ್ತು ಕಳ್ಳಸಾಗಣೆ, ಆಸ್ಪತ್ರೆಗಳು, ಬಸ್ಸುಗಳು, ಸರಿಯಾದ ರಸ್ತೆಗಳು ಬೆಳೆಗಳನ್ನು ನಾಶಪಡಿಸುವ ಕಾಡು ಪ್ರಾಣಿಗಳು ಇತ್ಯಾದಿಗಳ ಬಗ್ಗೆ ಚರ್ಚಿಸಿದರು.
ಜೊತೆಗೆ ನೀರಿನ ಸಮಸ್ಯೆ, ಸರಿಯಾದ ಶಾಲೆ ಇಲ್ಲ ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ಕೊಳ್ಳ ಬೇಕು.ಅಷ್ಟೇ ಅಲ್ಲದೇ ಅವುಗಳನ್ನು ನಿರ್ಮೂಲನೆ ಮಾಡುವತ್ತ ದಾಪುಗಾಲು ಹಾಕಬೇಕಿದೆ ಎಂದು ತಮ್ಮ ಮಾತಿನಲ್ಲಿ ಅಣಕು ನಾಟಕವನ್ನು ಪ್ರದರ್ಶಿಸಿದರು.
ಕೊನೆಯದಾಗಿ ಈ ಶಾಲೆಯಲ್ಲಿ ಆಂಗ್ಲಭಾಷೆಯೊಂದಿಗೆ ,ಕನ್ನಡವನ್ನು ದ್ವಿತೀಯ ಭಾಷೆಯನ್ನಾಗಿಯೂ, ಸಂಸ್ಕೃತವನ್ನ ತೃತೀಯ ಭಾಷೆಯನ್ನಾಗಿಯೂ, ಅತ್ಯಂತ ಪರಿಣಾಮಕಾರಿಯಾಗಿ ಕಲಿಸಲಾಗುತ್ತಿದೆ.
ಮತ್ತು ನಮಗೆ ದಿನ ನಿತ್ಯದ ಕೆಲಸಗಳಲ್ಲಿ ಸಹಕಾರಿಯಾಗಿ ನಿಂತಿರುವ ಕೆಲವು ವ್ಯಕ್ತಿಗಳಿಗೆ ನಾವು ಧನ್ಯವಾದಗಳನ್ನು ಹೇಳುವುದನ್ನೆ ಮರೆತು ಹೋಗುತ್ತೇವೆ. ಆದರೆ ಅವರುಗಳಿರದೇ ಹೋದರೆ, ನಾವು ನಮ್ಮ ಒಂದು ದಿನದ ಕೆಲಸ,ಕಾರ್ಯಗಳನ್ನು ಯಶಸ್ವಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ”ಪೀಪಲ್ ಹೂ ಹೆಲ್ಪ್ ಅಸ್” ಎನ್ನುವ ಕೂಗಿನೊಂದಿಗೆ , ನೀವಿಲ್ಲದಿದ್ದರೆ ನಾವಿಲ್ಲ, ಎನ್ನುವ ಕೃತಜ್ಞತೆಯೊಂದಿಗೆ, ಈ ಶಾಲೆಯು ಕೆಲಸ ಮಾಡುತ್ತದೆ. ಮಕ್ಕಳನ್ನು ಕೇವಲ ಅಂಕಗಳಿಂದೆ ಓಡುವಂತೆ ಮಾಡದೇ, ”ಮೊದಲು ಮಾನವನಾಗು” ಎಂಬ ಜೀವನದ ಮೌಲ್ಯವನ್ನ, ಪ್ರಾಮಾಣಕತೆಯನ್ನ, ಅತ್ಯಂತ ಸರಳವಾಗಿ ಮಕ್ಕಳಿಗೆ ಹೇಳಿ ಕೊಡುತ್ತದೆ. ನಮಗೆ ಸಿಗುವುದಕ್ಕಿಂತ ಹೆಚ್ಚು ನಾವು ಸಮಾಜಕ್ಕೆ ,ಅವಶ್ಯಕತೆ ಇರುವ ಜನರಿಗೆ ಕೊಡಬೇಕು( ಗಿವಿಂಗ್ ಬ್ಯಾಕ್ ಮೋರ್ ದೆನ್ ಯುವಿಲ್ ಗೆಟ್” ಎನ್ನುವುದೇ ಈ ಶಾಲೆಯ ಘೋಷವಾಕ್ಯವಾಗಿದೆ. ಜೈ ಭಾರತ್ ಮಾತಾ.ಜೈ ಹಿಂದ್.